

ವಾರಣಾಸಿ: ವಾರಣಾಸಿಯ ಹೋಟೆಲ್ ಆಡಳಿತ ಮಂಡಳಿ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್ ಅವರು ದೇವರ ದರ್ಶನಕ್ಕೆ ತೆರಳಿದ್ದ ವೇಳೆ, ಅವರ ಅನುಪಸ್ಥಿತಿಯಲ್ಲಿ ಅವರ ಕೊಠಡಿಯಿಂದ ಲಗೇಜ್ ತೆಗೆಯಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.
ಈ ಸಂಬಂಧ ಬಿಹಾರ ಸಚಿವರ ಆಪ್ತ ಸಹಾಯಕ ವಿಶಾಲ್ ಸಿನ್ಹಾ ಅವರು ದೂರು ದಾಖಲಿಸಿದ್ದು, ಸಚಿವರಿಗೆ ಮಂಜೂರಾಗಿದ್ದ ಕೊಠಡಿಯನ್ನು ತೆರೆದು ಅವರ ವಸ್ತುಗಳನ್ನು ಮುಟ್ಟುವುದು ಭದ್ರತಾ ದೃಷ್ಟಿಯಿಂದ ಸುರಕ್ಷಿತವಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ರಾತ್ರಿ ಯಾದವ್ ಹೋಟೆಲ್‌ಗೆ ಹಿಂತಿರುಗಿದಾಗ, ರಿಸೆಪ್ಷನ್ ನಲ್ಲಿ ಅವರ ಲಗೇಜ್‌ಗಳು ಇದ್ದವು ಎಂದು ಸಿನ್ಹಾ ತಿಳಿಸಿದ್ದಾರೆ.
ಬಿಹಾರದ ಪರಿಸರ ಮತ್ತು ಅರಣ್ಯ ಸಚಿವರ ಆಪ್ತ ಸಹಾಯಕರು ಏಪ್ರಿಲ್ 6 ರಂದು ಒಂದು ದಿನಕ್ಕೆ ಕೊಠಡಿಯನ್ನು ಕಾಯ್ದಿರಿಸಿದ್ದರು ಎಂದು ಹೋಟೆಲ್ ಆಡಳಿತ, ಪೊಲೀಸರಿಗೆ ತಿಳಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಹೇಳಿದ್ದಾರೆ.
ಈ ಕೊಠಡಿಯನ್ನು ಯಾರಿಗಾಗಿ ಕಾಯ್ದಿರಿಸಲಾಗಿದೆ ಎಂದು ಹೋಟೆಲ್ ಆಡಳಿತ ಮಂಡಳಿಗೆ ತಿಳಿದಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಮರುದಿನ, ಏಪ್ರಿಲ್ 7 ರಂದು, ಹೋಟೆಲ್ ರೂಮ್ ಅನ್ನು ಬೇರೆಯವರು ಕಾಯ್ದಿರಿಸಿದ್ದಾರೆ, ಆದರೆ ಯಾದವ್ ಅವರು ದೇವರ 'ದರ್ಶನ'ಕ್ಕೆ ಹೋಗಿದ್ದರು ಮತ್ತು ಅವರ ಪರಿಚಾರಕರೊಬ್ಬರು ಹೋಟೆಲ್‌ನಲ್ಲಿಯೇ ಇದ್ದರು. ಯಾದವ್ ಅವರಿಗೆ ಮ್ಯಾನೇಜ್‌ಮೆಂಟ್ ಬಹಳ ಸಮಯ ಕಾಯುತ್ತಿತ್ತು. ಆದರೂ ಅವರ ಬರಲಿಲ್ಲ. ಹೀಗಾಗಿ ಅವರ ವಸ್ತುಗಳನ್ನು ರಿಸೆಪ್ಷನ್ ಇರಿಸಲಾಯಿತು" ಎಂದು ಹೋಟೆಲ್ ಆಡಳಿತ ಮಂಡಳಿ ಹೇಳಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಹೋಟೆಲ್‌ಗೆ ಹಿಂತಿರುಗಿದ ನಂತರ, ಅವರು ಸಿಗ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಮತ್ತು ಹೋಟೆಲ್ ಆಡಳಿತದ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸಿಗ್ರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಜು ಸಿಂಗ್ ಅವರು ದೂರು ಸ್ವೀಕರಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Advertisement