ಕಾಶ್ಮೀರದಿಂದ ಕನ್ಯಾಕುಮಾರಿಗೆ ನಾವು ವೇಗವಾಗಿ ಸಂಪರ್ಕ ಸಾಧಿಸುತ್ತಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ದೆಹಲಿ ಸಂವಾದದ 5ನೇ ಆವೃತ್ತಿಯಲ್ಲಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಭಾರತದಲ್ಲಿ ಹೆದ್ದಾರಿ ಮತ್ತು ರಸ್ತೆಗಳ ಕಾರ್ಯನಿರ್ವಹಣೆ, ಪರಿಸ್ಥಿತಿಗಳು, ರಸ್ತೆ ಸಂಪರ್ಕದಿಂದ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಲ್ಪ ರಾಜಕೀಯ ವಿಷಯಗಳು ಕೂಡ ಅವರ ಸಂದರ್ಶನದ ವೇಳೆ ಹೊರಬಂತು. 
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ
Updated on

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ದೆಹಲಿ ಸಂವಾದದ 5ನೇ ಆವೃತ್ತಿಯಲ್ಲಿ ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಭಾರತದಲ್ಲಿ ಹೆದ್ದಾರಿ ಮತ್ತು ರಸ್ತೆಗಳ ಕಾರ್ಯನಿರ್ವಹಣೆ, ಪರಿಸ್ಥಿತಿಗಳು, ರಸ್ತೆ ಸಂಪರ್ಕದಿಂದ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಲ್ಪ ರಾಜಕೀಯ ವಿಷಯಗಳು ಕೂಡ ಅವರ ಸಂದರ್ಶನದ ವೇಳೆ ಹೊರಬಂತು. 

ಸಂವಾದದ ಆರಂಭದಲ್ಲಿ ತಮ್ಮನ್ನು ಪರಿಚಯಿಸಿಕೊಂಡ ಸಚಿವರು, ನಮಸ್ಕಾರ, ನಾನು ನಿತಿನ್ ಗಡ್ಕರಿ: ನಾಗಪುರದವನು, ರಾಜಕೀಯವು ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಯ ಸಾಧನ ಎಂದು ನಾನು ಹಿಂದೆ ಓದಿದ್ದೆ. ಹಾಗಾಗಿ ರಾಜಕೀಯವು ಶೇಕಡಾ 80 ಸಾಮಾಜಿಕ ಕೆಲಸ ಮತ್ತು ಶೇಕಡಾ 20ರಷ್ಟು ರಾಜಕೀಯವನ್ನು ಒಳಗೊಂಡಿರುತ್ತದೆ ಎಂದು ನಾನು ಯಾವಾಗಲೂ ಜನರಿಗೆ ಹೇಳುತ್ತೇನೆ. ಸಾಕಷ್ಟು ಸಾಮಾಜಿಕ ಕಾರ್ಯ ಮಾಡುವುದು ನನ್ನ ಕೆಲಸದ ಒಂದು ಭಾಗ. ವಿಶೇಷವಾಗಿ ಕೃಷಿ, ಜಲ ಸಂರಕ್ಷಣೆ ಮತ್ತು ಜೈವಿಕ ಇಂಧನದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದೇನೆ. ನಾನು ಅಷ್ಟು ಬುದ್ಧಿವಂತನಲ್ಲ ಆದರೂ ಆರು ಪದವಿಗಳನ್ನು ಹೊಂದಿದ್ದೇನೆ, ಇತ್ತೀಚೆಗೆ ಗಾಲ್ಗೋಟಿಯಾ ವಿಶ್ವವಿದ್ಯಾಲಯವು ನನಗೆ ಪದವಿ ನೀಡಿತು. ನಂತರ ಚೆನ್ನೈ ವಿಶ್ವವಿದ್ಯಾಲಯ, ಎಸ್‌ಆರ್‌ಎಂ ಮತ್ತು ಮಹಾರಾಷ್ಟ್ರ ವಿಶ್ವವಿದ್ಯಾಲಯಗಳಿಂದ ನಾಲ್ಕು ಪದವಿಗಳು ನನಗೆ ಒಲಿದವು. 

ನಾವು ಪರಿಸರ ಮತ್ತು ಪರಿಸರ ವಿಜ್ಞಾನದಲ್ಲಿ ಅನೇಕ ಯೋಜನೆಗಳನ್ನು ಮಾಡುತ್ತಿದ್ದೇವೆ. ನಾನು ಎರಡು ತತ್ವಗಳನ್ನು ನಂಬುತ್ತೇನೆ, ಒಂದು ವಿಜ್ಞಾನ/ತಂತ್ರಜ್ಞಾನ ಮತ್ತು ಇನ್ನೊಂದು ನಾವೀನ್ಯತೆ/ಉದ್ಯಮಶೀಲತೆ. ಇದು ತ್ಯಾಜ್ಯಗಳನ್ನು ಸಂಪತ್ತಾಗಿ ಪರಿವರ್ತಿಸಲು ನಮಗೆ ಸಹಾಯ ಮಾಡುತ್ತವೆ. 

ಯಾವ ವ್ಯಕ್ತಿಯೂ ನಿಷ್ಪ್ರಯೋಜಕನಲ್ಲ. ಯಾವುದೇ ವಸ್ತುವು ವ್ಯರ್ಥವಲ್ಲ. ಇದು ಪ್ರಸ್ತುತ ಪರಿಸರ ವಿಜ್ಞಾನ ಮತ್ತು ನಾಯಕತ್ವದ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ನಾನು ‘ತ್ಯಾಜ್ಯದಿಂದ ಸಂಪತ್ತು’ ಬಗ್ಗೆ ಉದಾಹರಣೆ ಕೊಡುತ್ತೇನೆ. ದೆಹಲಿಯಲ್ಲಿ ನಾವು ಮೂರು ಪುರಸಭೆಯ ತ್ಯಾಜ್ಯ ಪರ್ವತಗಳನ್ನು ಹೊಂದಿದ್ದೇವೆ. ಒಂದು ಗಾಜಿಪುರದಲ್ಲಿದೆ, ಈಗ ನಾವು 20 ಲಕ್ಷ ಟನ್ ಪುರಸಭೆಯ ಕಸವನ್ನು ರಿಂಗ್ ರಸ್ತೆಗೆ ಬಳಸುತ್ತಿದ್ದೇವೆ, ಇದು ದೆಹಲಿಯ ಜೀವನಾಡಿಯಾಗಿದೆ. ಅಹಮದಾಬಾದ್ ರಸ್ತೆ ನಿರ್ಮಾಣದಲ್ಲೂ ಕಸವನ್ನು ಬಳಸಿದ್ದೇವೆ.

ನಾವು ಶೇಕಡಾ 15ರಷ್ಟು ಎಥೆನಾಲ್ ನ್ನು ರಸ್ತೆ ನಿರ್ಮಾಣದಲ್ಲಿ ಸೇರಿಸುತ್ತಿದ್ದೇವೆ. ಅಕ್ಕಿ ದಾಸ್ತಾನು ಕೋಲು ಸುಡುವಿಕೆಯಿಂದ ಜೈವಿಕ ಬಿಟುಮೆನ್ ತಯಾರಿಸುತ್ತಿದ್ದು, ಈಗ 20 ಲಕ್ಷ ರೂಪಾಯಿಗೆ ಯೋಜನೆ ರೂಪಿಸುತ್ತಿದ್ದೇವೆ. ಪರ್ಲಿಯನ್ನು ಸುಡುವ ಬದಲು ದೆಹಲಿಯ ಮಾಲಿನ್ಯವನ್ನು ಪರಿಗಣಿಸಿ, ನಾವು ಅದನ್ನು ಬಿಟುಮೆನ್ ಆಗಿ ಪರಿವರ್ತಿಸುತ್ತಿದ್ದೇವೆ. ಇಲ್ಲಿ ತ್ಯಾಜ್ಯ ಸಂಪತ್ತಾಗಿ ಪರಿವರ್ತನೆಯಾಗುತ್ತಿದೆ.

ಶ್ರೀನಗರದಲ್ಲಿ, ನಾವು ಶ್ರೀನಗರದಿಂದ ಜಮ್ಮುವಿಗೆ 9 ರಿಂದ 11 ಸುರಂಗ ಮಾರ್ಗಗಳನ್ನು ಮಾಡುತ್ತಿದ್ದೇವೆ. ನಂತರ ಕತ್ರಾದಲ್ಲಿ, ನಾವು ದೊಡ್ಡ ಮಲ್ಟಿ-ಮಾಡೆಲ್ ಕೇಂದ್ರ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ಕತ್ರಾ-ದೆಹಲಿ ಎಕ್ಸ್‌ಪ್ರೆಸ್‌ವೇಗೆ ಜೋಡಿಸಲಾಗುತ್ತದೆ.

ದೆಹಲಿಯಿಂದ ಅಮೃತಸರಕ್ಕೆ ನಾಲ್ಕು ಗಂಟೆಗಳಲ್ಲಿ, ದೆಹಲಿಯಿಂದ ಕತ್ರಾಕ್ಕೆ ಆರು ಗಂಟೆಗಳಲ್ಲಿ ಮತ್ತು ದೆಹಲಿಯಿಂದ ಶ್ರೀನಗರಕ್ಕೆ ಎಂಟು ಗಂಟೆಗಳಲ್ಲಿ ಪ್ರಯಾಣಿಸಬಹುದು. ದೆಹಲಿಗೆ ಹಿಂತಿರುಗಿ, ದೆಹಲಿ-ಮುಂಬೈ ಹೆದ್ದಾರಿಯು ಸೂರತ್‌ಗೆ, ನಂತರ ನಾಸಿಕ್‌ಗೆ, ಅಹ್ಮದ್‌ನಗರಕ್ಕೆ, ಸೊಲ್ಲಾಪುರದಿಂದ ಕರೂರ್‌ಗೆ ದಾರಿ ಮಾಡಿಕೊಡುತ್ತದೆ.

ಕರೂರಿನಿಂದ ನಾವು ಚೆನ್ನೈ, ಬೆಂಗಳೂರು, ಕೊಚ್ಚಿ ಮತ್ತು ಹೈದರಾಬಾದ್‌ಗೆ ಹೋಗಬಹುದು. ಆದ್ದರಿಂದ, ನಾವು ಉತ್ತರದಿಂದ ದಕ್ಷಿಣ ಭಾರತಕ್ಕೆ ಮತ್ತು ಮುಂಬೈಗೆ ಕೊಲ್ಲಾಪುರ ಮತ್ತು ಸೊಲ್ಲಾಪುರಕ್ಕೆ ಸಂಪರ್ಕವನ್ನು ಹೊಂದಿದ್ದೇವೆ. ಇದು ದೆಹಲಿಯಿಂದ ಚೆನ್ನೈಗೆ 312 ಕಿ.ಮೀ ದೂರವನ್ನು ಕಡಿಮೆ ಮಾಡುತ್ತದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದು ಕಾಶ್ಮೀರದಿಂದ ಕನ್ಯಾಕುಮಾರಿ ನಡುವಿನ ಸಂಪರ್ಕವಾಗಿದೆ.

ನಾಗ್ಪುರದಲ್ಲಿ, ನಾವು ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗೆ ಒಳಚರಂಡಿ ನೀರನ್ನು ಮಾರಾಟ ಮಾಡುತ್ತೇವೆ ದಕ್ಷಿಣ ಭಾರತದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ರಾಯಧನವನ್ನು ಪಡೆಯುತ್ತೇವೆ. ಚೆನ್ನೈನಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಯನ್ನು ನಿರ್ಮಿಸುತ್ತಿದ್ದೇವೆ, ಇದು ಸುಮಾರು 10,000 ಕೋಟಿ ರೂಪಾಯಿ ಯೋಜನೆಯಾಗಿದೆ. ಈಗಾಗಲೇ ಚೆನ್ನೈನಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್‌ವೇ ಆರಂಭಿಸಿದ್ದೇವೆ. ಮೂರು ಗಂಟೆಗಳಲ್ಲಿ ನೀವು ಚೆನ್ನೈನಿಂದ ಬೆಂಗಳೂರಿಗೆ ಪ್ರಯಾಣಿಸಬಹುದು. ಮೈಸೂರು-ಬೆಂಗಳೂರು ಭಾಗವನ್ನು ಪೂರ್ಣಗೊಳಿಸಿದ್ದೇವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com