ಬಿಜೆಡಿ ದೇಶದಲ್ಲಿ ಎರಡನೇ ಶ್ರೀಮಂತ ಪ್ರಾದೇಶಿಕ ಪಕ್ಷ: ಆದಾಯ ಶೇ.318ರಷ್ಟು ಹೆಚ್ಚಳ

2021-22ರಲ್ಲಿ ವಾರ್ಷಿಕ ಆದಾಯ ಶೇಕಡಾ 318ರಷ್ಟು ಏರಿಕೆಯಾಗುವ ಮೂಲಕ ಭಾರತ ದೇಶದಲ್ಲಿ ಡಿಎಂಕೆ ನಂತರ ಬಿಜು ಜನತಾ ದಳ(BJD) ಎರಡನೇ ಸಂಪದ್ಭರಿತ ಸ್ಥಳೀಯ ಪಕ್ಷವಾಗಿ ಹೊರಹೊಮ್ಮಿದೆ. 
ನವೀನ್ ಪಟ್ನಾಯಕ್
ನವೀನ್ ಪಟ್ನಾಯಕ್

ಭುವನೇಶ್ವರ: 2021-22ರಲ್ಲಿ ವಾರ್ಷಿಕ ಆದಾಯ ಶೇಕಡಾ 318ರಷ್ಟು ಏರಿಕೆಯಾಗುವ ಮೂಲಕ ಭಾರತ ದೇಶದಲ್ಲಿ ಡಿಎಂಕೆ ನಂತರ ಬಿಜು ಜನತಾ ದಳ(BJD) ಎರಡನೇ ಸಂಪದ್ಭರಿತ ಸ್ಥಳೀಯ ಪಕ್ಷವಾಗಿ ಹೊರಹೊಮ್ಮಿದೆ. 

ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್ (ADR) ನ ಇತ್ತೀಚಿನ ವರದಿ ಪ್ರಕಾರ, ಬಿಜೆಡಿ ಪಕ್ಷವು 2021-22ರಲ್ಲಿ 307.28 ಕೋಟಿ ರೂಪಾಯಿ ಆದಾಯ ಗಳಿಸಿದ್ದು, 2020-21ರಲ್ಲಿ ಅದರ ಆದಾಯವು 73. 34 ಕೋಟಿ ರೂಪಾಯಿಗಳಾಗಿತ್ತು. ಹಣಕಾಸು ವರ್ಷದಲ್ಲಿ 28.63 ಕೋಟಿ ರೂಪಾಯಿ ವೆಚ್ಚ ಮಾಡುವುದರೊಂದಿಗೆ ಪಕ್ಷವು 278.65 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಗಳಿಸಿದೆ.

2020-21ರಲ್ಲಿ ಆದಾಯ ಹೆಚ್ಚಿಸಿಕೊಂಡ ಬಿಜೆಡಿ, ಆ ವರ್ಷ ಟಿಆರ್ ಎಸ್ ಮತ್ತು ಡಿಎಂಕೆ ನಂತರ ಅತಿಹೆಚ್ಚು ಆದಾಯ 233.94 ಕೋಟಿ ರೂಪಾಯಿ ಗಳಿಸಿದೆ. ಅಂದರೆ 2020-21 ಮತ್ತು 2021-22ರಲ್ಲಿ ಕ್ರಮವಾಗಿ 180.45 ಕೋಟಿ ರೂಪಾಯಿ ಹಾಗೂ 168.79 ಕೋಟಿ ರೂಪಾಯಿ ಗಳಿಸಿದೆ. ಒಟ್ಟು ಆದಾಯ 1213.13 ಕೋಟಿ ರೂಪಾಯಿಗಳಲ್ಲಿ 36 ಸ್ಥಳೀಯ ಪಕ್ಷಗಳಲ್ಲಿ ಬಿಜೆಡಿಯ ಆದಾಯ 25.33 ಶೇಕಡಾದಷ್ಟು ಹೆಚ್ಚಾಗಿದ್ದು ಸ್ಥಳೀಯ ಪಕ್ಷಗಳಲ್ಲಿ ಎರಡನೇ ಅತಿಹೆಚ್ಚು ಆದಾಯ ಗಳಿಸಿದ ಸ್ಥಳೀಯ ಪಕ್ಷವಾಗಿದೆ.

ಇನ್ನು ರಾಷ್ಟ್ರೀಯ ಪಕ್ಷಗಳಲ್ಲಿ ತೃಣಮೂಲ ಕಾಂಗ್ರೆಸ್ ಅತಿಹೆಚ್ಚು ಶೇಕಡಾ 633ರಷ್ಟು ಅದರ ಆದಾಯ ಹೆಚ್ಚಾಗಿದ್ದು, 74.41 ಕೋಟಿ ರೂಪಾಯಿಗಳಿಂದ 545.74 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ. ಮುಖ್ಯವಾಗಿ ಅದರ ಶೇಕಡಾ 96ರಷ್ಟು ಆದಾಯವು ಎಲೆಕ್ಟೊರಲ್ ಬಾಂಡ್ಸ್ ಗಳ ಮೂಲಕ ಆಗಿದೆ. ಬಿಜೆಪಿಯ ಆದಾಯ ಶೇಕಡಾ 154ರಷ್ಟು ಹೆಚ್ಚಾಗಿದ್ದು 752.33 ಕೋಟಿ ರೂಪಾಯಿಗಳಿಂದ 1917.12 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ. ಇನ್ನು ಕಾಂಗ್ರೆಸ್ ನ ಆದಾಯ ಶೇಕಡಾ 89.4ರಷ್ಟಿದ್ದು, 285.76 ಕೋಟಿ ರೂಪಾಯಿಗಳಿಂದ 541.27 ಕೋಟಿ ರೂಪಾಯಿಗಳಿಗೆ ಹೆಚ್ಚಳವಾಗಿದೆ. 

2019-20 ಮತ್ತು 2020-21 ಹಣಕಾಸು ವರ್ಷಗಳ ನಡುವಿನ ಪಕ್ಷಗಳ ಆದಾಯದ ತುಲನಾತ್ಮಕ ವಿಶ್ಲೇಷಣೆಯು BJD ಯ ಆದಾಯವು ಶೇಕಡಾ 19ರಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ - 2019-20 ರಲ್ಲಿ 90.35 ಕೋಟಿ ರೂಪಾಯಿಗಳಿಂದ 2020-21 ರಲ್ಲಿ 73.34 ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com