ಅರುಣಾಚಲ ಪ್ರದೇಶಕ್ಕೆ ಅಮಿತ್ ಶಾ ಭೇಟಿ: ಚೀನಾ ಆಕ್ಷೇಪ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿ ಕೈಗೊಂಡಿರುವುದನ್ನುಚೀನಾ ತೀವ್ರವಾಗಿ ವಿರೋಧಿಸಿದೆ. ಈ ಪ್ರದೇಶದಲ್ಲಿನ ಅಧಿಕೃತ ಚಟುವಟಿಕೆಗಳು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
ಅಮಿತ್ ಶಾ
ಅಮಿತ್ ಶಾ

ಇಟಾನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿ ಕೈಗೊಂಡಿರುವುದನ್ನುಚೀನಾ ತೀವ್ರವಾಗಿ ವಿರೋಧಿಸಿದೆ. ಈ ಪ್ರದೇಶದಲ್ಲಿನ ಅಧಿಕೃತ ಚಟುವಟಿಕೆಗಳು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆ ಎಂದು ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

ಅರುಣಾಚಲ ಪ್ರದೇಶದಲ್ಲಿನ ಕೆಲವೊಂದು ಸ್ಥಳಗಳ ಹೆಸರನ್ನು ಚೀನಾ ಬದಲಿಸಿದ್ದು, ಈ ಪ್ರದೇಶ ತನ್ನ "ಸಾರ್ವಭೌಮತ್ವ" ಎಂದು ಹೇಳಿಕೊಂಡಿದೆ. ಈ ಮಧ್ಯೆ ಅರುಣಾಚಲ ಪ್ರದೇಶಕ್ಕೆ ಇಂದಿನಿಂದ ಎರಡು ದಿನ ಭೇಟಿ ನೀಡಿರುವ ಅಮಿತ್ ಶಾ, ಕಿಬಿತೊ ಗ್ರಾಮದಲ್ಲಿ 9 ಮಿನಿ ಜಲ ವಿದ್ಯುತ್ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂಜ್ವಾ ಜಿಲ್ಲೆಯ ಕಿಬಿತೋದಲ್ಲಿ ಐಟಿಬಿಪಿ ಸಿಬ್ಬಂದಿಯೊಂದಿಗೆ ಶಾ ಸಂವಾದ ನಡೆಸಲಿದ್ದು, ಮಂಗಳವಾರ ವಲಾಂಗ್ ಹುತಾತ್ಮರ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com