ಜಾರ್ಖಂಡ್: ಭದ್ರತಾ ಪಡೆಗಳ ಮೇಲೆ ಮಾವೋವಾದಿ ದಾಳಿಗೆ ಸಂಚು, ಓರ್ವ ನಕ್ಸಲ್ ಎನ್ಐಎ ವಶಕ್ಕೆ

ಜಾರ್ಖಂಡ್ ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ದಳ 14 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವನನ್ನು ಬಂಧಿಸಿದೆ. 
ಎನ್ಐಎ
ಎನ್ಐಎ

ನವದೆಹಲಿ: ಜಾರ್ಖಂಡ್ ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ದಳ 14 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವನನ್ನು ಬಂಧಿಸಿದೆ. 

ಕಳೆದ ವರ್ಷ ಭದ್ರತಾ ಪಡೆಗಳ ಮೇಲೆ ಜಾರ್ಖಂಡ್ ನಲ್ಲಿ ದಾಳಿ ನಡೆಸಲು ಸಿಪಿಐ-ಮಾವೋವಾದಿ ಸಿಬ್ಬಂದಿಗಳು ಸಂಚು ರೂಪಿಸಿದ್ದರು.

ಲೋಹರ್ದಗಾದಲ್ಲಿ 9 ಸ್ಥಳಗಳು ಹಾಗೂ ಲತೇಹರ್ ನಲ್ಲಿ 5 ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿದ್ದು, ಶಂಕಿತರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ. ದಾಳಿಯ ವೇಳೆ ನಾಡ ಬಂದೂಕು 6 ಜಿವಂತ ಗುಂಡುಗಳು, ಒಂದು ಮ್ಯಾಗ್ಜೈನ್, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳು ಹಾಗೂ ಹಣಕಾಸಿಗೆ ಸಂಬಂಧಪಟ್ಟ ವಹಿವಾಟುಗಳ ವಿವರಗಳನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
 
ದಾಳಿಯ ವೇಳೆ ಸಜನ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com