
ಬಾರಾಮುಲ್ಲಾ(ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಪೋಲೀಸರು ಮತ್ತು ಭಾರತೀಯ ಸೇನೆಯು ಇಂದು ಮಂಗಳವಾರ ನಸುಕಿನ ಜಾವ ಬಾರಾಮುಲ್ಲಾದಲ್ಲಿ ಉಗ್ರರ ಘಟಕ ನೆಲೆಯನ್ನು((Terrorist unit) ಕಾರ್ಯಾಚರಣೆಯಲ್ಲಿ ನಾಶಪಡಿಸಿದ್ದಾರೆ.
ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಇಬ್ಬರು ಭಯೋತ್ಪಾದಕ ಸಹಚರರಾದ ಫಾರೂಕ್ ಅಹ್ಮದ್ ಪರ್ರಾ ಮತ್ತು ಸೈಮಾ ಬಶೀರ್ ನನ್ನು ಬಂಧಿಸಿರುವ ಪೊಲೀಸರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Advertisement