ವಂಚಕ ಸುಕೇಶ್ ನಿಂದ ಬಿಆರ್‌ಎಸ್‌ ನಾಯಕಿ ಕವಿತಾ, ಸತ್ಯೇಂದ್ರ ಜೈನ್ ಜೊತೆಗಿನ ವಾಟ್ಸಾಪ್ ಚಾಟ್‌ ಬಿಡುಗಡೆ

ಮಂಡೋಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ಬಿಆರ್ ಎಸ್ ನಾಯಕಿ ಕೆ ಕವಿತಾ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗಿನ ವಾಟ್ಸಾಪ್...
ಸುಕೇಶ್ ಚಂದ್ರಶೇಖರ್
ಸುಕೇಶ್ ಚಂದ್ರಶೇಖರ್

ನವದೆಹಲಿ: ಮಂಡೋಲಿ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ಬಿಆರ್ ಎಸ್ ನಾಯಕಿ ಕೆ ಕವಿತಾ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗಿನ ವಾಟ್ಸಾಪ್ ಚಾಟ್‌ಗಳನ್ನು ಮೊದಲ ಬಾರಿಗೆ ಬಿಡುಗಡೆ ಮಾಡಿದ್ದಾರೆ. ಅವರೊಂದಿಗಿನ ತನ್ನ ಸಂಭಾಷಣೆಯು ಆಮ್ ಆದ್ಮಿ ಪಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮದ್ಯ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಬಿಆರ್‌ಎಸ್ ನಾಯಕರ ನಡುವಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಸುಕೇಶ್ ಹೇಳಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗರ್ವನರ್ ವಿಕೆ ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ, ತನ್ನ ಹಾಗೂ ಆಮ್ ಆದ್ಮಿ ಪಕ್ಷ ಮತ್ತು ಸಿಎಂ ಕೇಜ್ರಿವಾಲ್ ನಡುವೆ ಅನೇಕ ಒಪ್ಪಂದಗಳು, ವ್ಯಾಪಾರ ವಹಿವಾಟುಗಳು ನಡೆದಿವೆ ಎಂದು ಸುಕೇಶ್ ಚಂದ್ರಶೇಖರ್ ಆರೋಪಿಸಿದ್ದಾರೆ.

"ಈ ಚಾಟ್‌ಗಳ ಪ್ರತಿಯನ್ನು ಲಗತ್ತಿಸಿರುವ ವಂಚಕ ಸುಕೇಶ್, ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿರುವ ಆಮ್ ಆದ್ಮಿ ಪಕ್ಷ, ಅರವಿಂದ್ ಕೇಜ್ರಿವಾಲ್ ಮತ್ತು ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರ ಜೊತೆಗಿನ ಸಂಬಂಧವನ್ನು ತೋರಿಸುತ್ತದೆ" ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ತಾನು ಸಲ್ಲಿಸಿದ ಈ ಚಾಟ್ ಮದ್ಯ ಹಗರಣ ಪ್ರಕರಣದ ತನಿಖೆಗೆ ಸಹಾಯ ಮಾಡುತ್ತದೆ ಎಂದು ಅವರು ಸುಕೇಶ್ ಹೇಳಿದ್ದಾರೆ. "ಈ ಚಾಟ್‌ ನಾನು ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದ್ರ ಜೈನ್ ಅವರಿಗೆ ನೀಡಿದ 15 ಕೋಟಿ ರೂ.ಗಳಿಗೆ ಸಂಬಂಧಿಸಿದ್ದು, ಹೈದರಾಬಾದ್‌ನ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಹಣ ತಲುಪಿಸಲು ಕೇಳಿಕೊಂಡಿದ್ದೇನೆ" ಎಂದು ಪತ್ರದಲ್ಲಿ ಬರೆಯಲಾಗಿದೆ.

ಸುಕೇಶ್ ಅವರ ಕಾನೂನು ಸಲಹೆಗಾರ ಅನಂತ್ ಮಲಿಕ್ ಅವರು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಕೆಲವು ಚಾಟ್ ಗಳನ್ನು ಹಂಚಿಕೊಂಡಿದ್ದು, ಸುಕೇಶ್ ಚಂದ್ರಶೇಖರ್ ಅವರು 'ಕವಿತಾ ಅಕ್ಕ ಟಿಆರ್‌ಎಸ್' ಎಂಬ ಹೆಸರಿನೊಂದಿಗೆ ನಂಬರ್ ಸೇವ್ ಮಾಡಿಕೊಂಡಿದ್ದಾರೆ.

ಸುಕೇಶ್ ಕಳುಹಿಸಿದ ಸಂದೇಶವೊಂದರಲ್ಲಿ, "ಎಕೆ ಬ್ರೋಗೆ ಪ್ಯಾಕೇಜ್ ನೀಡಬೇಕಾಗಿದೆ. ಅದು ನನ್ನ ಬಳಿ ಸಿದ್ಧವಾಗಿದೆ" ಎಂದು ಬರೆಯಲಾಗಿದೆ. ಈ ಪ್ಯಾಕೇಜ್ 15 ಕೋಟಿ ರೂಪಾಯಿ ಎಂದು ಚಂದ್ರಶೇಖರ್ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com