ನಿತೀಶ್ ಮಿತ್ರ ಜಿತನ್ ರಾಮ್ ಮಾಂಝಿ ಅಮಿತ್ ಶಾ ಭೇಟಿ, ರಾಜಕೀಯ ಗುಸು ಗುಸು!

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಿತ್ರರಾದ ಜಿತನ್ ರಾಮ್ ಮಾಂಝಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ ನಂತರ ರಾಜಕೀಯ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ.
ಜಿತಿನ್ ರಾಮ್ ಮಾಂಝಿ, ಅಮಿತ್ ಶಾ
ಜಿತಿನ್ ರಾಮ್ ಮಾಂಝಿ, ಅಮಿತ್ ಶಾ
Updated on

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಿತ್ರರಾದ ಜಿತನ್ ರಾಮ್ ಮಾಂಝಿ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆಸಿದ ನಂತರ ರಾಜಕೀಯ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ.

ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ಮೈತ್ರಿಗಾಗಿ ಅನೇಕ ವಿರೋಧ ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿರುವಂತೆಯೇ ಈ ಮಹತ್ವದ ಬೆಳವಣಿಯಾಗಿದೆ. ಆದಾಗ್ಯೂ, ಯಾವುದೇ ಊಹಾಪೋಹಗಳನ್ನು ಅಲ್ಲಗಳೆದ ಮಾಂಝಿ, ನಿತೀಶ್ ಕುಮಾರ್  ದೇಶದ ಪ್ರಧಾನಿಯಾಗಲು ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಎಂದರು. 

ನಿತೀಶ್ ಕುಮಾರ್ ಅವರೊಂದಿಗೆ ಇರುವುದಾಗಿ ಹೇಳಿದ ಅವರು, ಬಿಜೆಪಿಯೊಂದಿಗೆ ಕೈಜೋಡಿಸುವ ಸಾಧ್ಯತೆಯನ್ನು ತಿರಸ್ಕರಿಸಿದರು. ಮಾಂಝಿ ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಪಕ್ಷದ  ಮುಖ್ಯಸ್ಥರಾಗಿದ್ದಾರೆ ಮತ್ತು ಅವರ ಮಗ  ಆರ್‌ಜೆಡಿ-ಜೆಡಿ-ಯು-ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾರೆ.

ಎರಡು ದಶಕಗಳ ಕಾಲ ಪರ್ವತಗಳಲ್ಲಿ ಅಗೆದು ಏಕಾಂಗಿಯಾಗಿ ರಸ್ತೆ ನಿರ್ಮಾಣದ ಸಾಧನೆ ಮಾಡಿದ ದಿ ಮೌಂಟೇನ್ ಮ್ಯಾನ್ ಖ್ಯಾತಿಯ ದಶರತ್ ಮಾಂಝಿ ಅವರಿಗೆ ಮರಣೋತ್ತರವಾಗಿ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಬೇಕೆಂಬ ಅವರ ಪಕ್ಷದ ಬೇಡಿಕೆಯನ್ನು ಪರಿಗಣಿಸುವಂತೆ ಅಮಿತ್ ಶಾ ಅವರನ್ನು ಮಾಂಝಿ ಭೇಟಿ ಮಾಡಿದ್ದರು ಎನ್ನಲಾಗಿದೆ. 

2024 ರ ಲೋಕಸಭಾ ಚುನಾವಣೆಗೆ ಸಿದ್ಧವಾಗುತ್ತಿರುವಂತೆಯೇ  ಬಿಹಾರದಲ್ಲಿ ಸಣ್ಣ ಪಕ್ಷಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಮಾಂಝಿ ಮತ್ತೆ ಯು-ಟರ್ನ್‌ನ ಅಂಚಿನಲ್ಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿತ್ತು. ಆದರೆ, ನಿತೀಶ್ ಕುಮಾರ್ ಅವರನ್ನು ಮಾಂಝಿ ಅವರನ್ನು ಭೇಟಿ ಮಾಡುವ ಮೂಲಕ ಅಂತಹ ಊಹಾಪೋಹಗಳನ್ನು ತಳ್ಳಿ ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com