ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿ ಕೆ ಸಕ್ಸೇನಾ
ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿ ಕೆ ಸಕ್ಸೇನಾ

ವಿದ್ಯುತ್ ಸಬ್ಸಿಡಿ ಮುಂದುವರಿಕೆಗೆ ಲೆಫ್ಟಿನೆಂಟ್ ಗೌವರ್ನರ್ ಅನುಮೋದನೆ: ಆರೋಪ ಮಾಡಿದ್ದ ಆಪ್ ಸರ್ಕಾರಕ್ಕೆ ತೀವ್ರ ಮುಜುಗರ

ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯನ್ನು ಮುಂದುವರೆಸುವುದಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನುಮೋದನೆ ನೀಡಿದ್ದಾರೆ. 

ನವದೆಹಲಿ: ದೆಹಲಿಯಲ್ಲಿ ವಿದ್ಯುತ್ ಸಬ್ಸಿಡಿಯನ್ನು ಮುಂದುವರೆಸುವುದಕ್ಕೆ ಲೆಫ್ಟಿನೆಂಟ್ ಗೌರ್ನರ್ ಅನುಮೋದನೆ ನೀಡಿದ್ದಾರೆ. ವಿದ್ಯುತ್ ಸಬ್ಸಿಡಿ ಮುಂದುವರಿಕೆ ಸಂಬಂಧ ಆಮ್ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಹಾಗೂ ಲೆಫ್ಟಿನೆಂಟ್ ಗೌರ್ನರ್ ನಡುವೆ ತಿಕ್ಕಾಟ ಉಂಟಾಗಿತ್ತು.

ಸಬ್ಸಿಡಿ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದೆಹಲಿ ಇಂಧನ ಸಚಿವೆ ಅತಿಶಿ ಮರ್ಲೆನಾ, ‘ವಿದ್ಯುತ್ ಸಬ್ಸಿಡಿಯನ್ನು ನಿಲ್ಲಿಸಲಾಗಿದೆ. ಎಎಪಿ ಸರ್ಕಾರ ಮುಂಬರುವ ವರ್ಷಕ್ಕೆ ಸಬ್ಸಿಡಿಯನ್ನು ಮುಂದುವರೆಸುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಆದರೆ, ಆ ನಿರ್ಧಾರಕ್ಕೆ ಸಂಬಂಧಿಸಿದ ಕಡತಕ್ಕೆ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಅವರ ಅನುಮೋದನೆ ಬೇಕಾಗಿದೆ. ಆದರೆ ಅದು ಈ ವರೆಗೆ ಸಿಕ್ಕಿಲ್ಲ. ಹೀಗಾಗಿ ಸಬ್ಸಿಡಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಸಬ್ಸಿಡಿಯನ್ನು ಮುಂಬರುವ ವರ್ಷಕ್ಕೆ ವಿಸ್ತರಿಸಲು ಇನ್ನೂ ಕಡತವನ್ನು ತೆರವುಗೊಳಿಸದ ಕಾರಣ ಶುಕ್ರವಾರದಿಂದ ಸಬ್ಸಿಡಿಗಳನ್ನು ನಿಲ್ಲಿಸಲಾಗುವುದು ಎಂದು ಹೇಳಿದ್ದರು. 

ಆದರೆ ಆಪ್ ಸರ್ಕಾರದ ವಿರುದ್ಧ ಪ್ರತ್ಯಾರೋಪ ಮಾಡಿದ್ದ ಲೆಫ್ಟಿನೆಂಟ್ ಗೌರ್ನರ್ ಕಚೇರಿ, ವಿದ್ಯುತ್ ಸಬ್ಸಿಡಿ ಮುಂದುವರಿಕೆಗೆ ಸಂಬಂಧಿಸಿದ ಕಡತ ಗೌರ್ನರ್ ಕಚೇರಿಗೆ ಬಂದಿದ್ದೇ ಏ.11 ರಂದು ಹಾಗೂ ಅದನ್ನು ಶುಕ್ರವಾರ ಬೆಳಿಗ್ಗೆ ವಾಪಸ್ ಕಳಿಸಲಾಗಿದೆ ಎಂದು ತಿಳಿಸಿದೆ.
 
ನೆನ್ನೆ ಕಡತಕ್ಕೆ ಸಹಿ ಮಾಡಿ, ಅದನ್ನು ಇಂದು ಅತಿಶಿ ಮರ್ಲೆನಾ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಸಿಎಂ ಕಚೇರಿಗೆ ಕಳಿಸಲಾಗಿದೆ. ಅವರು ಈಗ ಮುಜುಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ನಿಸ್ಸಂಶಯವಾಗಿ ಬಹಳ ಮುಜುಗರದ ಮತ್ತು ತಪ್ಪು ಹೆಜ್ಜೆ ಇಟ್ಟು ಸಿಕ್ಕಿಬಿದ್ದಿದ್ದಾರೆ ಎಂದು ಲೆಫ್ಟಿನೆಂಟ್ ಗೌರ್ನರ್ ಕಚೇರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com