ರಾಜ್ಯಗಳಲ್ಲಿ ಬೋರ್ಡ್, ಶಾಲೆಗಳು ಎನ್ ಸಿಇಆರ್ ಟಿ ಪುಸ್ತಕಗಳನ್ನು ಸೂಚಿಸಿ: ಎನ್ ಸಿಪಿಸಿಆರ್

ಎಲ್ಲಾ ರಾಜ್ಯಗಳ ಬೋರ್ಡ್ ಗಳು ಹಾಗೂ ಶಾಲೆಗಳು 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ಯ ಪುಸ್ತಕಗಳನ್ನು ಸೂಚಿಸಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್ ಸಿಪಿಸಿಆರ್) ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)

ನವದೆಹಲಿ: ಎಲ್ಲಾ ರಾಜ್ಯಗಳ ಬೋರ್ಡ್ ಗಳು ಹಾಗೂ ಶಾಲೆಗಳು 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್​ಸಿಇಆರ್​ಟಿ) ಯ ಪುಸ್ತಕಗಳನ್ನು ಸೂಚಿಸಬೇಕೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್ ಸಿಪಿಸಿಆರ್) ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.
  
ಎನ್ ಸಿಇಆರ್ ಟಿ ಪ್ರಕಟಿತ ಪುಸ್ತಕಗಳನ್ನು ಕೊಂಡೊಯ್ದರೆ ಶಾಲೆಗಳು ಅಂತಹ ಯಾವುದೇ ಮಕ್ಕಳನ್ನೂ ತಾರತಮ್ಯ, ಕಿರುಕುಳ ಅಥವಾ ನಿರ್ಲಕ್ಷ್ಯ ದೃಷ್ಟಿಯಿಂದ ನೋಡಿ, ಮಾನಸಿಕ ಅಥವಾ ದೈಹಿಕ ನೋವಿಗೆ ಕಾರಣವಾಗಬಾರದು ಎಂದು ಎನ್ ಸಿಪಿಸಿಆರ್ ಹೇಳಿದೆ.

ಮಕ್ಕಳ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ, ಬಾಲಾಪರಾಧ ನ್ಯಾಯ ಕಾಯಿದೆ, 2015 ರ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ ಎಂದು ಏ.13 ರ ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯವು ಹೊರಡಿಸಿದ ನಿರ್ದೇಶನಗಳನ್ನು ಅವರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಬೇಕು ಎಂದು ಆಯೋಗ ಎಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಹೇಳಿದೆ.

ಶಾಲೆಗಳು ಖಾಸಗಿ ಪ್ರಕಾಶಕರ ಪುಸ್ತಕಗಳನ್ನು ಮಾರಾಟ ಮಾಡಲು ಹಣ ಸುಲಿಗೆ ಮಾಡುತ್ತಿವೆ. ಖಾಸಗಿ ಶಾಲೆಗಳು ಪೋಷಕರಿಗೆ ಖಾಸಗಿ ಪ್ರಕಾಶಕರ ಪುಸ್ತಕಗಳನ್ನು ಖರೀದಿಸಲು ಒತ್ತಡ ಹೇರುತ್ತಿರುವುದರ ಬಗ್ಗೆ ನಮಗೆ ದೇಶಾದ್ಯಂತ ದೂರುಗಳು ಬರುತ್ತಿವೆ, ಖಾಸಗಿ ಶಾಲೆಗಳು ಪೋಷಕರಿಂದ ಹಣ ವಸೂಲಿ ಮಾಡುತ್ತಿವೆ. 1 ರಿಂದ 12 ನೇ ತರಗತಿ ವರೆಗೆ ಎಲ್ಲಾ ಶಾಲೆಗಳು NCERT ಪುಸ್ತಕಗಳನ್ನೇ ಸೂಚಿಸಬೇಕು ಎಂದು NCPCR ಅಧ್ಯಕ್ಷೆ ಪ್ರಿಯಾಂಕಾ ಕಾನೂಂಗೊ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com