ಆತ್ಮಹತ್ಯೆ ಯತ್ನ
ಆತ್ಮಹತ್ಯೆ ಯತ್ನ

ರಾಜಸ್ಥಾನ: ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಹಾರದ ಎನ್ಇಇಟಿ ಆಕಾಂಕ್ಷಿಯ ರಕ್ಷಣೆ

ಬಿಹಾರ ಮೂಲದ 17 ವರ್ಷದ ಎನ್ಇಇಟಿ ಆಕಾಂಕ್ಷಿ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು ರಾಜಸ್ಥಾನದ ಕೋಟದಲ್ಲಿ ರಕ್ಷಣೆ ಮಾಡಲಾಗಿದೆ. 

ಕೋಟಾ: ಬಿಹಾರ ಮೂಲದ 17 ವರ್ಷದ ಎನ್ಇಇಟಿ ಆಕಾಂಕ್ಷಿ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು ರಾಜಸ್ಥಾನದ ಕೋಟದಲ್ಲಿ ರಕ್ಷಣೆ ಮಾಡಲಾಗಿದೆ. ಕೋಟದ ಮಹಾವೀರ ನಗರದಲ್ಲಿ ಈ ಘಟನೆ ವರದಿಯಾಗಿದ್ದು, ಎನ್ಇಇಟಿ ಆಕಾಂಕ್ಷಿ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. 

ಬಿಹಾರದ ಬರ್ಭಂಗದ ನಿವಾಸಿಯಾಗಿರುವ ಈ ಬಾಲಕ, ಮಂಗಳವಾರ ವಿಶ್ವಕರ್ಮ ರಸ್ತೆಯಲ್ಲಿ ಆತ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಆತನ ಸಹಪಾಠಿಗಳು ತಡೆದು ರಕ್ಷಿಸಿದ್ದಾರೆ. 

ಈ ಬಳಿಕ ಆತ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆಯನ್ನು ಪಿ.ಜಿ ಮಾಲಿಕ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಗಮನಕ್ಕೆ ತಂದಿದ್ದಾರೆ. 

ಸಿಡಬ್ಲ್ಯುಸಿ ತಂಡ ಬಾಲಕನನ್ನು ರಕ್ಷಿಸಿದ್ದು, ಆತನನ್ನು ಆಪ್ತಸಲಹಾ ಕೇಂದ್ರಕ್ಕೆ ಕಳಿಸಲಾಗಿದೆ ಹಾಗೂ ಅವರ ಪೋಷಕರು ಶೀಘ್ರದಲ್ಲೇ ಸ್ಥಳಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಸಿಡಬ್ಲ್ಯುಸಿ ಸದಸ್ಯ ವಿಮಲ್ ಜೈನ್ ಪಿಟಿಐ ಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಆತ್ಮಹತ್ಯೆಗೆ ಯತ್ನಿಸಿದ ಬಾಲಕ 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಿಜಿಯಲ್ಲಿದ್ದುಕೊಂಡು ಎನ್ಇಇಟಿ ಗೆ ತಯಾರಿ ನಡೆಸುತ್ತಿದ್ದ ಎಂದು ಹೇಳಿದ್ದಾರೆ. 

ಮಂಗಳವಾರದಂದು ಸ್ನೇಹಿತನಿಗೆ ವಾಟ್ಸ್ ಆಪ್ ಮೆಸೇಜ್ ಕಳಿಸಿ ನಾನು ಸಾಯುತ್ತಿದ್ದೇನೆ ಗುಡ್ ಬೈ ಎಂದು ಹೇಳಿದ್ದ. ಇದು ತಿಳಿಯುತ್ತಿದ್ದಂತೆಯೇ ಸ್ನೇಹಿತರು ಆತನನ್ನು ರಕ್ಷಿಸಿದ್ದಾರೆ.  ಈ ಘಟನೆ ಬಳಿಕ ಆತನ ಮೇಲೆ ಸ್ನೇಹಿತರು ನಿಗಾ ವಹಿಸಿದ್ದರು. ಆತ ಕೋಚಿಂಗ್ ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ. 

ಕೋಟಾದಲ್ಲಿ ಈ ವರ್ಷ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪೈಕಿ 5 ಮಂದಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾರೆ. ಇಲ್ಲಿನ ತರಬೇತಿ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ 2022-23 ರಲ್ಲಿ 2 ಲಕ್ಷವನ್ನೂ ಮೀರಿದೆ. 2022 ರಲ್ಲಿ ನಗರದಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದರು.
 

Related Stories

No stories found.

Advertisement

X
Kannada Prabha
www.kannadaprabha.com