ಅಜಿತ್ ಪವಾರ್ ವಿರುದ್ಧ ಕಾಂಗ್ರೆಸ್ ಮುಖ್ಯಸ್ಥರ ಟೀಕೆ: ಎಂವಿಎಯಲ್ಲಿ ಎಲ್ಲವೂ ಸರಿಯಿಲ್ಲ?

ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲ್, ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲ್
ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲ್
Updated on

ನವದೆಹಲಿ: ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲ್, ಅಜಿತ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಅಜಿತ್ ಪವಾರ್ ಅವರಿಗೆ ಅಸಮಾಧಾನವಿದ್ದಿದ್ದರೆ 2010-14 ರಲ್ಲೇ ಕಾಂಗ್ರೆಸ್ ನ ಪೃಥ್ವಿರಾಜ್ ಚೌವ್ಹಾಣ್ ನೇತೃತ್ವದ ಸರ್ಕಾರದಿಂದ ಹೊರಬರಬೇಕಿತ್ತು ಎಂದು ಹೇಳಿದ್ದಾರೆ.

ಇನ್ನು ತಮಗೆ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಇದೆ ಎಂದು ಹೇಳಿದ್ದ ಅಜಿತ್ ಪವಾರ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿರುವ ನಾನಾ ಪಟೋಲ್, ಎನ್ ಸಿಪಿ ನಾಯಕನಿಗೆ 145 ಶಾಸಕರ ಬೆಂಬಲವಿದ್ದರೆ, ಅವರು ಖಂಡಿತಾ ಸಿಎಂ ಆಗಬೇಕು ಎಂದು ವ್ಯಂಗ್ಯವಾಡಿದ್ದಾರೆ.
 
ಕಾಂಗ್ರೆಸ್ ನಾಯಕರ ಈ ಹೇಳಿಕೆ ಶಿವಸೇನೆ, ಎನ್ ಸಿಪಿ, ಕಾಂಗ್ರೆಸ್ ಇರುವ ಮಹಾವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದೆ.

''2010ರಿಂದ 2014ರ ವರೆಗೆ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ನೇತೃತ್ವದ ಸರಕಾರದಲ್ಲಿ ಅಜಿತ್ ಪವಾರ್ ಇದ್ದರು, ಅಸಹಾಯಕರಾಗಿದ್ದರೆ ಸಚಿವರಾಗಿ ಏಕೆ ಪ್ರಮಾಣ ವಚನ ಸ್ವೀಕರಿಸಿದರು, ಪೃಥ್ವಿರಾಜ್ ಚವಾಣ್ ನಮ್ಮ ನಾಯಕರಾಗಿದ್ದು, ಅವರ ಬಗ್ಗೆ ಅಜಿತ್ ಪವಾರ್ ಈ ರೀತಿ ಹೇಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. .

"ಕಾಂಗ್ರೆಸ್-ಎನ್‌ಸಿಪಿ ಸರ್ಕಾರದಲ್ಲಿ ಅಜಿತ್ ಪವಾರ್ ಅತೃಪ್ತರಾಗಿದ್ದರೆ, ಅವರು ಆ ಸಮಯವನ್ನು ಬಿಟ್ಟುಬಿಡಬೇಕಿತ್ತು" ಎಂದು ಪಟೋಲೆ ಸುದ್ದಿಗಾರರಿಗೆ ತಿಳಿಸಿದರು. ಪೃಥ್ವಿರಾಜ್ ಚವಾಣ್ ಮುಖ್ಯಮಂತ್ರಿಯಾಗಿದ್ದಾಗ ಅಜಿತ್ ಪವಾರ್ ಅವರು ನವೆಂಬರ್ 2010 ರಿಂದ ಸೆಪ್ಟೆಂಬರ್ 2014 ರವರೆಗೆ ಉಪ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಶುಕ್ರವಾರ ಪುಣೆಯಲ್ಲಿ ಸಕಲ್ ಮೀಡಿಯಾ ಗ್ರೂಪ್‌ಗೆ ನೀಡಿದ ಸಂದರ್ಶನದಲ್ಲಿ, ಅಜಿತ್ ಪವಾರ್ ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅಥವಾ ನವೆಂಬರ್ 2019 ರಿಂದ ಜೂನ್ 2022 ರವರೆಗೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೀರಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಎನ್ ಸಿ ಪಿ ನಾಯಕ,  ಠಾಕ್ರೆ ಅವರೊಂದಿಗೆ "ಸಂತೋಷದಿಂದ" ಕೆಲಸ ಮಾಡಿದೆ. ಆದರೆ ಚವಾಣ್ ಅವರೊಂದಿಗೆ ಕೆಲಸ ಮಾಡಿದ್ದು ನನ್ನ ಆಯ್ಕೆಯಿಂದಲ್ಲ, ಹಿರಿಯರ ನಿರ್ದೇಶನದಂತೆ ಎಂದು ಹೇಳಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com