ಅತೀಕ್ ಅಹ್ಮದ್ ಪುತ್ರನ ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆ ಸಮಿತಿ ರಚಿಸಿದ ಯುಪಿ ಸರ್ಕಾರ

ಗ್ಯಾಂಗ್ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ನ  ಎನ್ ಕೌಂಟರ್ ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆ ಸಮಿತಿ ರಚನೆ ಮಾಡಿದೆ.
ಅಸಾದ್ ನ ಎನ್ ಕೌಂಟರ್ ನಡೆದ ಸ್ಥಳ
ಅಸಾದ್ ನ ಎನ್ ಕೌಂಟರ್ ನಡೆದ ಸ್ಥಳ

ಲಖನೌ: ಗ್ಯಾಂಗ್ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ನ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರ ನ್ಯಾಯಾಂಗ ತನಿಖೆ ಸಮಿತಿ ರಚನೆ ಮಾಡಿದೆ.
 
ದ್ವಿಸದಸ್ಯ ಸಮಿತಿ ಇದಾಗಿದ್ದು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ರಾಜೀವ್ ಲೋಚನ್ ಮೆಹ್ರೋತ್ರಾ ಹಾಗೂ ನಿವೃತ್ತ ಡಿಜಿ ವಿಜಯ್ ಕುಮಾರ್ ಗುಪ್ತಾ ಅವರು ಸಮಿತಿಯಲ್ಲಿದ್ದಾರೆ. 

ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿಗಳಾಗಿದ್ದ ಅಸಾದ್ ಹಾಗೂ ಆತನ ಸಹಚರ ಗುಲಾಮ್ ನ್ನು ಝಾನ್ಸಿ ಬಳಿ ಏ.13 ರಂದು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿತ್ತು.

ಈ ನಡುವೆ ಉತ್ತರ ಪ್ರದೇಶ ಪೊಲೀಸರು ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಅವರ ಹತ್ಯೆ ತನಿಖೆಗಾಗಿ 2 ವಿಶೇಷ ತಂಡಾ (ಎಸ್ಐಟಿ) ಗಳನ್ನು ರಚಿಸಿರುವುದಾಗಿ ಘೋಷಿಸಿದ್ದರು.

ಇನ್ನು ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ನ ಹತ್ಯೆ ತನಿಖೆಗೆ ತ್ರಿಸದಸ್ಯ ನ್ಯಾಯಾಂಗ ತನಿಖೆ ಸಮಿತಿಯನ್ನು ನೇಮಕ ಮಾಡಿದ್ದು, ಅಲ್ಲಾಹಾಬಾದ್ ನ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಅರವಿಂದ್ ಕುಮಾರ್ ತ್ರಿಪಾಠಿ ನೇತೃತ್ವ ವಹಿಸಲಿದ್ದಾರೆ. ನಿವೃತ್ತ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಸೋನಿ ಮತ್ತು ಮಾಜಿ ಡಿಜಿಪಿ ಸುಭೇಶ್ ಕುಮಾರ್ ಸಿಂಗ್ ಸೇರಿದಂತೆ ಇಬ್ಬರು ಸದಸ್ಯರು ಸಮಿತಿಯಲ್ಲಿರಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com