ಕೊಡಗು: ಆಸ್ಪತ್ರೆಗೆ ಎನ್ ಜಿಒಗಳಿಂದ ಸಿಟಿ ಸ್ಕ್ಯಾನ್ ಘಟಕ ಕೊಡುಗೆ

ಕೊಡಗಿನ ಅಮ್ಮಾಟಿಯ ಗ್ರಾಮೀಣ ಭಾರತ ಆರೋಗ್ಯ ಯೋಜನೆ (ಆರ್ ಐಹೆಚ್ ಪಿ) ಆಸ್ಪತ್ರೆಯ ಈಗ ಸಿ.ಟಿ ಸ್ಕ್ಯಾನ್ ಸೌಲಭ್ಯವನ್ನು ಹೊಂದಿದೆ. 
ಸಿಟಿ ಸ್ಕ್ಯಾನ್
ಸಿಟಿ ಸ್ಕ್ಯಾನ್

ಮಡಿಕೇರಿ: ಕೊಡಗಿನ ಅಮ್ಮಾಟಿಯ ಗ್ರಾಮೀಣ ಭಾರತ ಆರೋಗ್ಯ ಯೋಜನೆ (ಆರ್ ಐಹೆಚ್ ಪಿ) ಆಸ್ಪತ್ರೆಯ ಈಗ ಸಿ.ಟಿ ಸ್ಕ್ಯಾನ್ ಸೌಲಭ್ಯವನ್ನು ಹೊಂದಿದೆ. 

ಕೊಡಗಿನ ಮೂಲದ, ಅಮೇರಿಕಾದಲ್ಲಿರುವ ಅನಿವಾಸಿ ಭಾರತೀಯರು ಇರುವ ಎನ್ ಜಿಒದ ಯತ್ನಗಳಿಂದಾಗಿ ಇದು ಸಾಧ್ಯವಾಗಿದೆ. ಕೊಡಗಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸೌಲಭ್ಯಗಳು ಕ್ರಮೇಣ ಅಭಿವೃದ್ಧಿಯಾಗುತ್ತಿದ್ದರೂ, ಕೆಲವೊಂದು ಸೌಲಭ್ಯಗಳು ಇನ್ನಷ್ಟೇ ಸಿಗಬೇಕಿದೆ ಇದಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ.  ಅತ್ಯಾಧುನಿಕ ಸೌಲಭ್ಯಗಳ ಕೊರತೆಯಿಂದಾಗಿ ಸ್ಥಳೀಯ ಜನರು ಆರೋಗ್ಯ ಸೇವೆಗಳಿಗಾಗಿ ಹೊರ ಜಿಲ್ಲೆಗಳ ಮೇಲೆ ಅವಲಂಬಿತರಾಗಿದ್ದಾರೆ.

ಜಿಲ್ಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿಟಿ ಸ್ಕ್ಯಾನ್ ಸೌಲಭ್ಯಗಳಿದೆ. ಹಲವು ಬಾರಿ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ನಿರ್ವಹಣೆ ಕಾಮಗಾರಿ ನಡೆಯುವುದರಿಂದ, ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ಈ ಲೋಪದೋಷಗಳನ್ನು ಪರಿಹರಿಸಲು ಮತ್ತು ಸುಧಾರಿತ ಆರೋಗ್ಯ ಸೇವೆಗಳನ್ನು ಒದಗಿಸಲು, USA ಮೂಲದ ಕೊಡವ ಕೊಟ್ಟಾ ಎಂಬ ಎನ್ ಜಿಒ ಸಂಸ್ಥೆ ಮತ್ತು ಟಾಟಾ ಕಾಫಿ ಮತ್ತು ಟಾಟಾ ಗ್ರಾಹಕ ಉತ್ಪನ್ನಗಳ ಸಮೂಹದ ಕೂರ್ಗ್ ಫೌಂಡೇಶನ್ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ RIHP ಆಸ್ಪತ್ರೆಯಲ್ಲಿ CT ಸ್ಕ್ಯಾನ್ ಸೌಲಭ್ಯವನ್ನು ಸ್ಥಾಪಿಸಿದೆ. ಸುತ್ತಮುತ್ತಲಿನ ಎಸ್ಟೇಟ್‌ಗಳಲ್ಲಿನ ಕಾರ್ಮಿರು ಆರೋಗ್ಯಕ್ಕಾಗಿ  RIHP ಆಸ್ಪತ್ರೆಯ ಮೇಲೆ ಅವಲಂಬಿತರಾಗಿದ್ದಾರೆ. ಇತರ ರೋಗಿಗಳು ಸಹ ಭೇಟಿ ನೀಡುತ್ತಾರೆ. ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಐಸಿಯು ಸೇರಿದಂತೆ ಇತರೆ ಸುಸಜ್ಜಿತ ಸೌಲಭ್ಯಗಳಿದ್ದು, ಸಿಟಿ ಸ್ಕ್ಯಾನ್ ಸೌಲಭ್ಯ ಅಳವಡಿಕೆಯಿಂದ ನೂರಾರು ಮಂದಿಗೆ ನೆರವಾಗಲಿದೆ. -"ಆಸ್ಪತ್ರೆ ಕಳೆದ ವರ್ಷ 22,000 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು 24X7 ಮೀಸಲಾದ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತದೆ. 

CT ಸ್ಕ್ಯಾನ್ ಘಟಕದ ಸ್ಥಾಪನೆಯು ಗುಣಮಟ್ಟದ ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸಲು ಸಹಾಯ ಮಾಡುತ್ತದೆ-" ಎಂದು ಟಾಟಾ ಕಾಫಿ ಲಿಮಿಟೆಡ್‌ನ ಎಂಡಿ ಚಾಕೊ ಥಾಮಸ್ ಹೇಳಿದ್ದಾರೆ. ಎರಡು ಸಂಸ್ಥೆಗಳು ದೇಣಿಗೆ ನೀಡಿದ 87 ಲಕ್ಷ ರೂಪಾಯಿಗಳನ್ನು ಬಳಸಿಕೊಂಡು ಘಟಕವನ್ನು ಸ್ಥಾಪಿಸಲಾಗಿದೆ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯವು ಸಬ್ಸಿಡಿ ದರದಲ್ಲಿ ರೋಗಿಗಳಿಗೆ ಲಭ್ಯವಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com