ಆಪರೇಷನ್ ಕಾವೇರಿ: 135 ಭಾರತೀಯರ 3ನೇ ಬ್ಯಾಚ್ ಸುಡಾನ್ ನಿಂದ ಪ್ರಯಾಣ

ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ತವರಿಗೆ ಕರೆತರುವ ಆಪರೇಷನ್ ಕಾವೇರಿ ಮುಂದುವರೆದಿದ್ದು, ಐಎಎಫ್ ನ ಎರಡನೇ ವಿಮಾನ C-130J ದಲ್ಲಿ 135 ಭಾರತೀಯರ ಮೂರನೇ ಬ್ಯಾಚ್ ಬುಧವಾರ...
ಸುಡಾನ್ ನಲ್ಲಿ ಸಿಲುಕಿದ್ದ ಭಾರತೀಯರು
ಸುಡಾನ್ ನಲ್ಲಿ ಸಿಲುಕಿದ್ದ ಭಾರತೀಯರು

ನವದೆಹಲಿ: ಸುಡಾನ್ ಸೇನಾ ಸಂಘರ್ಷದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ತವರಿಗೆ ಕರೆತರುವ ಆಪರೇಷನ್ ಕಾವೇರಿ ಮುಂದುವರೆದಿದ್ದು, ಐಎಎಫ್ ನ ಎರಡನೇ ವಿಮಾನ C-130J ದಲ್ಲಿ 135 ಭಾರತೀಯರ ಮೂರನೇ ಬ್ಯಾಚ್ ಬುಧವಾರ ಸುಡಾನ್‌ನಿಂದ ಹೊರಟಿದೆ.

ಏತನ್ಮಧ್ಯೆ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು, ಸುಡಾನ್ ನಿಂದ ಆಗಮಿಸಿದ 148 ಭಾರತೀಯರ ಎರಡನೇ ಬ್ಯಾಚ್ ಅನ್ನು ಸ್ವಾಗತಿಸಿದರು.

ಇದಕ್ಕೂ ಮುನ್ನ ನೌಕಾಪಡೆಯ ನೌಕೆ ಐಎನ್‌ಎಸ್ ಸುಮೇಧಾ 278 ಭಾರತೀಯರನ್ನು ಜೆಡ್ಡಾ ಬಂದರಿಗೆ ತಲುಪಿಸಿತ್ತು.

"ಆಪರೇಷನ್ ಕಾವೇರಿ ಸಂಪೂರ್ಣ ಸ್ವಿಂಗ್‌ನಲ್ಲಿದೆ. ಐಎಎಫ್ ನ C-130J ಎರಡನೇ ವಿಮಾನವು ಪೋರ್ಟ್ ಸುಡಾನ್‌ನಿಂದ ಜೆಡ್ಡಾಗೆ ಹೊರಡುತ್ತಿದೆ. ಈ ವಿಮಾನದಲ್ಲಿ 135 ಪ್ರಯಾಣಿಕರಿದ್ದು, ಆಪರೇಷನ್ ಕಾವೇರಿ ಅಡಿಯಲ್ಲಿ ಸ್ಥಳಾಂತರಿಸಲ್ಪಟ್ಟ ಮೂರನೇ ಬ್ಯಾಚ್ ಆಗಿದೆ" ಎಂದು ಎಂಇಎ ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com