ವಿಚ್ಛೇದಿತ ಮಗಳ ಜೀವನಾಂಶಕ್ಕೆ ಆಕೆಯ ತಾಯಿಗೆ ಜೀವನಪರ್ಯಂತ ಹಕ್ಕಿದೆ: ಮದ್ರಾಸ್ ಹೈಕೋರ್ಟ್

ಓರ್ವ ಮಹಿಳೆ ವಿಚ್ಛೇದನ ಪಡೆದು, ಆಮೂಲಕ ಬರುವ ಜೀವನಾಂಶದ ಮೇಲೆ ಆಕೆಯ ತಾಯಿಗೆ ಹಕ್ಕು ಇದೆ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಮದ್ರಾಸ್: ಓರ್ವ ಮಹಿಳೆ ವಿಚ್ಛೇದನ ಪಡೆದು, ಆಮೂಲಕ ಬರುವ ಜೀವನಾಂಶದ ಮೇಲೆ ಆಕೆಯ ತಾಯಿಗೆ ಹಕ್ಕು ಇದೆ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 

ವ್ಯಕ್ತಿಯೋರ್ವ ತನ್ನ ವಿಚ್ಛೇದಿತ ಪತ್ನಿಗೆ ನೀಡಬೇಕಿದ್ದ 6.37 ಲಕ್ಷ ರೂಪಾಯಿ ಬಾಕಿ ಹಣದ ಮೇಲೆ ತನ್ನ ಪತ್ನಿಯ ತಾಯಿಗೆ ಹಕ್ಕು ಇಲ್ಲ ಎಂದು ವಾದಿಸಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಈ ಆದೇಶ ಹೊರಬಂದಿದೆ. 

ಹಿಂದೂ ಉತ್ತರಾಧಿಕಾರ ಕಾಯಿದೆಯ ನಿಬಂಧನೆಗಳ ಪ್ರಕಾರ ವಿಚ್ಛೇದಿತ ಮಹಿಳೆಯ ಜೀವನಾಂಶದ ಹಣದ ಮೇಲೆ ಆಕೆಯ ತಾಯಿಗೆ ಆಕೆಯ ಸಾವಿನವರೆಗೂ ಹಕ್ಕು ಇದೆ ಎಂದು ಕೋರ್ಟ್ ಹೇಳಿದೆ.

ಸರಸ್ವತಿ ಎಂಬ ಮಹಿಳೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಅರ್ಜಿದಾರ ಅಣ್ಣಾದುರೈ ಎಂಬುವವರೊಂದಿಗೆ 1991 ರಲ್ಲಿ ವಿವಾಹವಾಗಿದ್ದರು. ಬಳಿಕ 2005 ರಲ್ಲಿ ವಿಚ್ಛೇದನ ಪಡೆದಿದ್ದರು. ಜೀವನಾಂಶವಾಗಿ ಮಾಸಿಕ 7,500 ರೂಪಾಯಿ ನೀಡಲು ಕೋರ್ಟ್ ಆದೇಶಿಸಿತ್ತು.
 
2021 ರಲ್ಲಿ ಸರಸ್ವತಿ ತಮಗೆ 6.37 ಲಕ್ಷ ರೂಪಾಯಿ ಜೀವನಾಂಶ ಬಾಕಿ ಬರಬೇಕಿದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು ಆದರೆ 2021 ರ ಜೂ.05 ರಂದು ಆಕೆ ನಿಧನರಾದ ಹಿನ್ನೆಲೆಯಲ್ಲಿ ಆಕೆಯ ತಾಯಿ ಪ್ರಕರಣ ಮುಂದುವರೆಸಲು ಮುಂದಾಗಿದ್ದರು. ಕೋರ್ಟ್ ವಿಚ್ಛೇದಿತ ಮಹಿಳೆಯ ತಾಯಿಯ ಪರ ತೀರ್ಪು ಪ್ರಕಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com