ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕುನೋ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು: ಸಾವಿನ ಸಂಖ್ಯೆ 9ಕ್ಕೆ ಏರಿಕೆ; ಮೋದಿ ವಿರುದ್ಧ ಜೈರಾಮ್ ರಮೇಶ್ ಕಿಡಿ!

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ಇದುವರೆಗೆ ಒಟ್ಟು 9 ಚಿರತೆಗಳು ಸಾವನ್ನಪ್ಪಿವೆ. ಇವುಗಳಲ್ಲಿ ಆರು ಚಿರತೆಗಳು ಮತ್ತು ಕುನೋದಲ್ಲಿ ಜನಿಸಿದ ಮೂರು ಮರಿಗಳು ಸೇರಿವೆ.

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ಇದುವರೆಗೆ ಒಟ್ಟು 9 ಚಿರತೆಗಳು ಸಾವನ್ನಪ್ಪಿವೆ. ಇವುಗಳಲ್ಲಿ ಆರು ಚಿರತೆಗಳು ಮತ್ತು ಕುನೋದಲ್ಲಿ ಜನಿಸಿದ ಮೂರು ಮರಿಗಳು ಸೇರಿವೆ. ಇಂದು ಸಾವನ್ನಪ್ಪಿದ ಚಿರತೆ ಮಾರ್ಚ್‌ನಿಂದ ಸಾವನ್ನಪ್ಪಿದ ಆರನೇ ವಯಸ್ಕ ಚಿರತೆಯಾಗಿದೆ. ಈ ಸಂಬಂಧ ಮಧ್ಯಪ್ರದೇಶ ಅರಣ್ಯ ಇಲಾಖೆ ಬುಧವಾರ ಹೇಳಿಕೆ ನೀಡಿದೆ.

ಇಂದು ಬೆಳಗ್ಗೆ ಹೆಣ್ಣು ಚಿರತೆ ಧಾತ್ರಿ (ಟಿಬಿಲಿಸಿ) ಶವವಾಗಿ ಪತ್ತೆಯಾಗಿದೆ ಎಂದು ಮಧ್ಯಪ್ರದೇಶ ಅರಣ್ಯ ಇಲಾಖೆ ತಿಳಿಸಿದೆ. ಸಾವಿನ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. 14 ಚಿರತೆಗಳಲ್ಲಿ ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿಗಳನ್ನು ಕುನೊ ಆವರಣದಲ್ಲಿ ಇರಿಸಲಾಗಿದೆ. ಹೆಣ್ಣು ಚಿರತೆಯೊಂದು ಬಯಲಿನಲ್ಲಿದ್ದು, ತಂಡವೊಂದು ನಿಗಾ ವಹಿಸುತ್ತಿದೆ. ಅವರನ್ನು ಆರೋಗ್ಯ ತಪಾಸಣೆಗಾಗಿ ಕರೆತರುವ ಪ್ರಯತ್ನ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 26ರಂದು, ಸೂರಜ್ ಚಿರತೆಯನ್ನು ಷಿಯೋಪುರ್ ಮೂಲದ ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯದಲ್ಲಿ ದೊಡ್ಡ ಆವರಣಕ್ಕೆ ಬಿಡಲಾಗಿತ್ತು. ಸೂರಜ್ ಕುನೋ ರಾಷ್ಟ್ರೀಯ ಉದ್ಯಾನವನದ ತೆರೆದ ಅರಣ್ಯಕ್ಕೆ ಬಿಡಲಾದ 10ನೇ ಚಿರತೆಯಾಗಿದೆ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತಂದು ಆವರಣ ಸಂಖ್ಯೆ 6 ರಲ್ಲಿ ಇರಿಸಲಾಗಿದ್ದ ಗಂಡು ಚಿರತೆ 'ತೇಜಸ್' ಕೂಡ ಜುಲೈ 11ರಂದು ಸಾವನ್ನಪ್ಪಿತ್ತು.

ಕುನೋ ಪಾರ್ಕ್ ನಿರ್ವಹಣೆಯ ಮೇಲ್ವಿಚಾರಣೆಯ ಸಮಯದಲ್ಲಿ ಈ ಚಿರತೆಯು ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ತೇಜಸ್ ಕತ್ತಿನ ಮೇಲ್ಭಾಗದಲ್ಲಿ ಗಾಯಗಳಾಗಿವೆ. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇಲ್ಲಿಯವರೆಗೆ 6 ಚಿರತೆಗಳು ಮತ್ತು 3 ಮರಿಗಳು ಸಾವನ್ನಪ್ಪಿವೆ. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಚಿರತೆಗಳನ್ನು ತರಲಾಗಿತ್ತು. ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯ ಪುನರುಜ್ಜೀವನಕ್ಕಾಗಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚಿರತೆಗಳನ್ನು ತರಲಾಯಿತು. ಆದರೆ ಇದುವರೆಗೆ 6 ವಯಸ್ಕ ಮತ್ತು 3 ಮರಿಗಳು ವಿವಿಧ ಕಾರಣಗಳಿಂದ ಸಾವನ್ನಪ್ಪಿವೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿ
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಇತ್ತೀಚಿನ ಚಿರತೆಯ ಸಾವಿನ ಬಗ್ಗೆ ಮಾಜಿ ಪರಿಸರ ಸಚಿವ ಜೈರಾಮ್ ರಮೇಶ್ ಬುಧವಾರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, 'ವಿಜ್ಞಾನ ಮತ್ತು ಪಾರದರ್ಶಕತೆಗೆ ಹಿನ್ನಡೆ ಆದಾಗ, ಒಬ್ಬ ಮನುಷ್ಯನ ಆಡಂಬರ ಮತ್ತು ಸ್ವಯಂ-ವೈಭವದ ಅಗತ್ಯವು ಪ್ರಾಮುಖ್ಯತೆ ಪಡೆದುಕೊಂಡಾಗ ಇದು ಸಂಭವಿಸುತ್ತದೆ," ಎಂದು ಹೇಳಿದರು. ಈ ಎಲ್ಲಾ ಸಾವುಗಳು ನಿರೀಕ್ಷಿತ ಮರಣ ಎಂಬ ವಾದವು 'ಸಂಪೂರ್ಣ ಅಸಂಬದ್ಧವಾಗಿದೆ' ಮತ್ತು ಅಂತಾರಾಷ್ಟ್ರೀಯ ಚಿರತೆ ತಜ್ಞರು ಇದನ್ನು ತಳ್ಳಿಹಾಕಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com