ಜ್ಞಾನವಾಪಿಯಲ್ಲಿ ASI ಸಮೀಕ್ಷೆ: ಸಾವಿರಾರು ಬಾಬರಿ ಬಾಗಿಲುಗಳು ತೆರೆಯಲ್ಲ ಎಂದು ಭಾವಿಸುತ್ತೇವೆ; ಓವೈಸಿ ವ್ಯಂಗ್ಯ

ಜ್ಞಾನವಾಪಿ ಪ್ರಕರಣದ ಕುರಿತು ಎಎಸ್‌ಐ ಸಮೀಕ್ಷೆ ವರದಿ ಸಾರ್ವಜನಿಕಗೊಳಿಸಿದ ನಂತರ ವಿಷಯಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದರ ಬಗ್ಗೆ ಅಚ್ಚರಿಯಾಗುತ್ತಿದೆ. ಇದರ ನಂತರ ಸಾವಿರಾರು ಬಾಬರಿ ಮಸೀದಿ ಬಾಗಿಲುಗಳು ತೆರೆಯುವುದಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮ್(AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಜ್ಞಾನವಾಪಿ ಪ್ರಕರಣದ ಕುರಿತು ಎಎಸ್‌ಐ ಸಮೀಕ್ಷೆ ವರದಿ ಸಾರ್ವಜನಿಕಗೊಳಿಸಿದ ನಂತರ ವಿಷಯಗಳು ಹೇಗೆ ತೆರೆದುಕೊಳ್ಳುತ್ತವೆ ಎಂಬುದರ ಬಗ್ಗೆ ಅಚ್ಚರಿಯಾಗುತ್ತಿದೆ. ಇದರ ನಂತರ ಸಾವಿರಾರು ಬಾಬರಿ ಮಸೀದಿ ಬಾಗಿಲುಗಳು ತೆರೆಯುವುದಿಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮ್(AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

17ನೇ ಶತಮಾನದ ರಚನೆಯು ಪೂರ್ವ ಅಸ್ತಿತ್ವದಲ್ಲಿರುವ ದೇವಾಲಯವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಜ್ಞಾನವಾಪಿ ಮಸೀದಿ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಲು ASI ಗೆ ಅನುಮತಿ ನೀಡಿದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಅದೇ ಸಮಯದಲ್ಲಿ, ಮುಸ್ಲಿಂ ಕಡೆಯವರು ಇದನ್ನು ವಿರೋಧಿಸಿದ್ದು ಸಮೀಕ್ಷೆಯು 'ಹಿಂದಿನ ಗಾಯಗಳನ್ನು ಮತ್ತೆ ಕೆದಕಿದಂತಾಗುತ್ತದೆ' ಎಂದು ಹೇಳಿದರು.

ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ
ಇದೀಗ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿರೂಪಣೆ ಮಾಡುತ್ತಿವೆ ಎಂದು ಓವೈಸಿ ಹೇಳಿದ್ದಾರೆ. ಬಾಬರಿ ತೀರ್ಪು ಮತ್ತೆ ಮರುಕಳಿಸಬಾರದು ಎಂಬ ಆತಂಕ ನಮ್ಮಲ್ಲಿದೆ ಎಂಬ ಪ್ರಶ್ನೆಯನ್ನು ಎತ್ತಿರುವ ಓವೈಸಿ, 'ನಮ್ಮಲ್ಲಿ ಪೂಜಾ ಸ್ಥಳದ ಕಾಯಿದೆ ಇದೆ. ಅದು ಪೂಜಾ ಸ್ಥಳದ ಸ್ವರೂಪವನ್ನು ಬದಲಾಯಿಸಬಾರದು ಎಂದು ಹೇಳುತ್ತದೆ. ಆದರೆ ಈ ಸಮೀಕ್ಷೆಯಿಂದ ಧಾರ್ಮಿಕ ಸ್ವರೂಪ ಹಾಗೆಯೇ ಉಳಿಯುತ್ತದೆಯೇ ಅಥವಾ ಬದಲಾಗಲಿದೆಯೇ?' ಎಂದು ಪ್ರಶ್ನಿಸಿದರು.

ಈ ಬಗ್ಗೆ ಟ್ವೀಟ್ ಮಾಡಿದರುವ ಅವರು, ಡಿಸೆಂಬರ್ 23 ಅಥವಾ ಡಿಸೆಂಬರ್ 6 ಘಟನೆಗಳು ಪುನರಾವರ್ತನೆಯಾಗಬಾರದು. ಆರಾಧನಾ ಸ್ಥಳಗಳ ಕಾಯ್ದೆಯ ಪಾವಿತ್ರ್ಯತೆಗೆ ಸಂಬಂಧಿಸಿದಂತೆ ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ನ ಅವಲೋಕನವನ್ನು ಕಡೆಗಣಿಸಬಾರದು ಎಂದು ಅವರು ಆಶಿಸಿದ್ದಾರೆ.

ಯೋಗಿ ಮೇಲೆ ಗುರಿ
ಯೋಗಿ ಆದಿತ್ಯನಾಥ್ ಹೇಳಿಕೆಗೆ ಓವೈಸಿ, 'ನೀವು ಸಿಎಂ (ಯೋಗಿ ಆದಿತ್ಯನಾಥ್), ನೀವು ಒಂದು ಸಮುದಾಯವನ್ನು ಹೇಗೆ ಬೆಂಬಲಿಸುತ್ತೀರಿ?' ಈ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಿಸಲಾಗಿದೆ ಎಂಬ ಎಎಸ್‌ಐ ವರದಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಸಮೀಕ್ಷೆಯ ಸಮಯದಲ್ಲಿ ಯಾವುದೇ ಆಕ್ರಮಣಕಾರಿ ಕೃತ್ಯವನ್ನು ಆಶ್ರಯಿಸದಂತೆ ಎಎಸ್‌ಐಗೆ ಕೇಳಿದೆ. ಸಮೀಕ್ಷೆಯ ಸಮಯದಲ್ಲಿ ಯಾವುದೇ ಉತ್ಖನನವನ್ನು ಮಾಡುವುದಿಲ್ಲ. ಅಲ್ಲದೆ ರಚನೆಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಎಎಸ್‌ಐ ಮತ್ತು ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲ್ಲಿಕೆಗಳನ್ನು ಪೀಠವು ಗಮನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com