'ಗಂಭೀರ ಅಶಿಸ್ತು' ಆರೋಪ: ಎನ್ ಸಿಪಿ ಕಾರ್ಯಕಾರಿ ಸಮಿತಿಯಿಂದ ಕೇರಳ ಶಾಸಕ ಥಾಮಸ್ ವಜಾ

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರು ಕೇರಳದ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಥಾಮಸ್ ಕೆ ಥಾಮಸ್ ಅವರನ್ನು ಮಂಗಳವಾರ ತನ್ನ ಕಾರ್ಯಕಾರಿ ಸಮಿತಿಯಿಂದ ವಜಾಗೊಳಿಸಿದ್ದಾರೆ.
ಥಾಮಸ್ ಕೆ ಥಾಮಸ್, ಕುಟ್ಟನಾಡ್ ಶಾಸಕ ಮತ್ತು ಎನ್‌ಸಿಪಿ ನಾಯಕ
ಥಾಮಸ್ ಕೆ ಥಾಮಸ್, ಕುಟ್ಟನಾಡ್ ಶಾಸಕ ಮತ್ತು ಎನ್‌ಸಿಪಿ ನಾಯಕ

ತಿರುವನಂತಪುರ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್ ಅವರು ಕೇರಳದ ಪಕ್ಷದ ಹಿರಿಯ ನಾಯಕ ಮತ್ತು ಶಾಸಕ ಥಾಮಸ್ ಕೆ ಥಾಮಸ್ ಅವರನ್ನು ಮಂಗಳವಾರ ತನ್ನ ಕಾರ್ಯಕಾರಿ ಸಮಿತಿಯಿಂದ ವಜಾಗೊಳಿಸಿದ್ದಾರೆ.

ತೀವ್ರ ಅಶಿಸ್ತು ತೋರಿಸಿದ ಕಾರಣ ನೀಡಿ ಅವರನ್ನು ಕಾರ್ಯಕಾರಿ ಸಮಿತಿಯಿಂದ ವಜಾಗೊಳಿಸಲಾಗಿದೆ. ಥಾಮಸ್ ಕೇರಳ ವಿಧಾನಸಭೆಯಲ್ಲಿ ಕುಟ್ಟನಾಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಎನ್‌ಸಿಪಿ ಕೇರಳದಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗದ (LDF) ಒಂದು ಭಾಗವಾಗಿದೆ.

ನೀವು ಎಸಗುತ್ತಿರುವ ಗಂಭೀರ ಅಶಿಸ್ತಿನ ದೃಷ್ಟಿಯಿಂದ, ರಾಷ್ಟ್ರಾಧ್ಯಕ್ಷರನ್ನು ಮತ್ತು ರಾಜ್ಯಾಧ್ಯಕ್ಷರ ಅಧಿಕಾರವನ್ನು ಬಹಿರಂಗವಾಗಿ ಧಿಕ್ಕರಿಸುವುದು ಮತ್ತು ಪಕ್ಷದ ಸದಸ್ಯರ ವಿರುದ್ಧ ಬೇಜವಾಬ್ದಾರಿ ಆರೋಪಗಳನ್ನು ಮಾಡುವುದು ಮತ್ತು ನಿಮ್ಮ ಪಕ್ಷದ ಸ್ಥಾನವನ್ನು ಬಳಸಿಕೊಂಡು ಸುಳ್ಳು ದೂರುಗಳನ್ನು ಸಲ್ಲಿಸುವುದು ಸಾರ್ವಜನಿಕವಾಗಿ ಪಕ್ಷದ ಪ್ರತಿಷ್ಠೆಗೆ ಮತ್ತು ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನಲ್ಲಿ ಧಕ್ಕೆ ತರುತ್ತದೆ. ನಿಮ್ಮನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿಯಿಂದ ತೆಗೆದುಹಾಕುತ್ತೇನೆ ಎಂದು ಪವಾರ್ ಥಾಮಸ್ ಅವರಿಗೆ ಬರೆದ ಪತ್ರದಲ್ಲಿ ಶರದ್ ಪವಾರ್ ತಿಳಿಸಿದ್ದಾರೆ. 

ತಾವು ಪ್ರತಿನಿಧಿಸುವ ಆಲಪ್ಪುಳದ ಕುಟ್ಟನಾಡ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ತರುವ ಸಲುವಾಗಿ ತಮ್ಮ ಪಕ್ಷದ ಕೆಲವು ಸದಸ್ಯರು ತನ್ನನ್ನು ಕೊಲ್ಲಲು ಯೋಜಿಸುತ್ತಿದ್ದಾರೆ ಎಂದು ಥಾಮಸ್ ಸೋಮವಾರ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com