ಅವಿಶ್ವಾಸ ನಿರ್ಣಯ ಮಂಡನೆ: ಲೋಕಸಭೆಯಲ್ಲಿ ಚರ್ಚೆಗೂ ಮುನ್ನ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ

ಸಂಸತ್ತಿನ ಕೆಳಗಿನ ಮನೆ ಲೋಕಸಭೆಯಲ್ಲಿ ಇಂದು ಮಂಗಳವಾರ ಕಲಾಪ ತೀವ್ರ ಗದ್ದಲ, ಕೋಲಾಹಲ, ಕುತೂಹಲಗಳಿಗೆ ಸಾಕ್ಷಿಯಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಸಂಗ್ರಹ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ಸಂಗ್ರಹ ಚಿತ್ರ

ನವದೆಹಲಿ: ಸಂಸತ್ತಿನ ಕೆಳಗಿನ ಮನೆ ಲೋಕಸಭೆಯಲ್ಲಿ ಇಂದು ಮಂಗಳವಾರ ಕಲಾಪ ತೀವ್ರ ಗದ್ದಲ, ಕೋಲಾಹಲ, ಕುತೂಹಲಗಳಿಗೆ ಸಾಕ್ಷಿಯಾಗಲಿದೆ. ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿಯವರು ಇಂದು ಸದನದಲ್ಲಿ ಮಾತನಾಡುವುದು ಒಂದೆಡೆಯಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಬಗ್ಗೆ ಇಂದು ಮತ್ತು ನಾಳೆ ಚರ್ಚೆ ನಡೆಯಲಿದೆ.

ಅದಕ್ಕೆ ಪ್ರಧಾನಿ ಮೋದಿ ಆಗಸ್ಟ್ 10ರಂದು ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ. ಕಳೆದ ಶುಕ್ರವಾರ ಬಿಜೆಪಿ ತಮ್ಮ ಸಂಸದರಿಗೆ ಮೂರು ಸಾಲುಗಳ ವಿಪ್ ಜಾರಿ ಮಾಡಿ ಆಗಸ್ಟ್ 7ರಿಂದ ಆಗಸ್ಟ್ 11ರವರೆಗೆ ಕಡ್ಡಾಯವಾಗಿ ಲೋಕಸಭೆಯಲ್ಲಿರುವಂತೆ ಸೂಚಿಸಿದೆ.

ಅವಿಶ್ವಾಸ ಗೊತ್ತುವಳಿ ಚರ್ಚೆ: ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಇಂದು ಆರಂಭವಾಗಲಿದೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಬಗ್ಗೆ ಸರ್ಕಾರದ ಮೌನ, ಜುಲೈ ಅಂತ್ಯದಲ್ಲಿ ಆಪ್ ಮೈತ್ರಿ, ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ), ಪಿಎಂ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.

ಇಂದು ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಕೆ.ಸುರೇಶ್ ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಡೆಯಿಂದ ರಾಹುಲ್ ಗಾಂಧಿ ಅವರು ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಮಾತನಾಡಲಿದ್ದಾರೆ. 

ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನಿಯವರು ಇಲ್ಲಿಯವರೆಗೆ ಏನನ್ನೂ ಹೇಳಿಲ್ಲ. ಅವರು ಸಂಸತ್ತಿಗೆ ಬಂದು ಮಣಿಪುರದ ಪರಿಸ್ಥಿತಿಯ ಬಗ್ಗೆ ಹೇಳಿಕೆ ನೀಡಬೇಕೆಂದು ನಾವು ನಿರಂತರವಾಗಿ ಒತ್ತಾಯಿಸಿದ್ದೇವೆ. ಆದರೆ ಅವರು ಅದಕ್ಕೆ ಸಿದ್ಧರಿಲ್ಲ. ಅದಕ್ಕಾಗಿಯೇ, ನಾವು ಲೋಕಸಭೆಯಲ್ಲಿ ಮುಂದೂಡಿಕೆ ಸೂಚನೆಯನ್ನು ನೀಡಿದ್ದೇವೆ, ಖಂಡಿತವಾಗಿ, ನಮಗೆ ಲೋಕಸಭೆಯಲ್ಲಿ ಬಹುಮತವಿಲ್ಲ ಆದರೆ ನಾವು ಪ್ರಧಾನಿಯ ಪ್ರತಿಕ್ರಿಯೆಯನ್ನು ತಿಳಿಯಲು ಬಯಸುತ್ತೇವೆ ಎನ್ನುತ್ತಾರೆ.

ಬಿಜೆಪಿ ಸಂಸದೀಯ ಮಂಡಳಿ ಸಭೆ: ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ದಾರೆ. ಇಂದು ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಆರಂಭವಾಗಲಿದೆ.ಇದಕ್ಕೂ ಮುನ್ನ ಬಿಜೆಪಿ ಸಭೆ ಕರೆದಿದ್ದು ತನ್ನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com