ಪೂಂಚ್: ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ವಿಭಾಗೀಯ ಕಮಾಂಡರ್‌ ಹತ್ಯೆ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ದೆಗ್ವಾರ್‌ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ವಿಭಾಗೀಯ ಕಮಾಂಡರ್‌  ಒಬ್ಬನನ್ನು  ಭದ್ರತಾಪಡೆಗಳು ಸೋಮವಾರ ಹೊಡೆದುರಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಗಡಿ ನಿಯಂತ್ರಣ ರೇಖೆಯಲ್ಲಿ ಉಗ್ರಗಾಮಿಗಳ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ದೆಗ್ವಾರ್‌ ವಲಯದ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯ ವಿಭಾಗೀಯ ಕಮಾಂಡರ್‌  ಒಬ್ಬನನ್ನು  ಭದ್ರತಾಪಡೆಗಳು ಸೋಮವಾರ ಹೊಡೆದುರಳಿಸಿವೆ.

ಪೂಂಚ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಇಬ್ಬರು ಶಂಕಿತ ವ್ಯಕ್ತಿಗಳ ಚಲನವಲನವನ್ನು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಪತ್ತೆಹಚ್ಚಲಾಗಿದೆ.

ಎಲ್‌ಒಸಿಯ ಉದ್ದಕ್ಕೂ ದಟ್ಟವಾದ ಕಾಡಿನ ಮೂಲಕ ಕತ್ತಲೆಯಲ್ಲಿ ಗಡಿ ನಿಯಂತ್ರಣ ರೇಖೆಯೊಳಗೆ ಇಬ್ಬರು ವ್ಯಕ್ತಿಗಳು ದಾಟುತ್ತಿರುವ ದೃಶ್ಯವನ್ನು  ಥರ್ಮಲ್ ಕ್ಯಾಮೆರಾಗಳು ಸೆರೆಹಿಡಿದಿವೆ, ಆ ವಿಡಿಯೋ  ತುಣುಕನ್ನು ಸೇನೆಯು ಬಿಡುಗಡೆ ಮಾಡಿದೆ.

ಉಗ್ರರು ರಾತ್ರಿ ಒಳನುಸುಳಲು ಯತ್ನಿಸುತ್ತಿದ್ದಾಗ ಭದ್ರತಾ ಪಡೆಯ ಯೋಧರು ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದ್ದಾರೆ. ಒಬ್ಬ ಉಗ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಎಲ್‌ಒಸಿ ಕಡೆ ಪರಾರಿಯಾಗಲು ಯತ್ನಿಸುತ್ತಾಗ ಗುಂಡೇಟಿಗೆ ಸಾವನ್ನಪ್ಪಿದ್ದಾನೆ ಎಂದಿದ್ದಾರೆ.

ಹಿಜ್ಬುಲ್‌ ಕಮಾಂಡರ್‌ ಮನೇಸರ್‌ ಹುಸೇನ್‌ನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಸತ್ತಾರ್ ಮೊಹಮ್ಮದ್ ಪುತ್ರ ಮುನೇಸರ್ ಹುಸೇನ್ ಎಂದು ಗುರುತಿಸಲಾಗಿದೆ. ಆತನಿಂದ ಎಕೆ 56 ರೈಫಲ್, ಸೈಲೆನ್ಸರ್ ಹೊಂದಿರುವ 19 ಎಂಎಂ ಪಿಸ್ತೂಲ್, ಎಕೆ ರೈಫಲ್‌ನ 1 ಮ್ಯಾಗಜೀನ್, 2 ಹ್ಯಾಂಡ್ ಗ್ರೆನೇಡ್‌ಗಳು, ಆಹಾರ ಪದಾರ್ಥಗಳು ಮತ್ತು ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ. ಹತ್ಯೆಗೀಡಾದ ಉಗ್ರ 1996ರಿಂದಲೂ ಸಕ್ರಿಯನಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

1993 ರಲ್ಲಿ ಆತ ಶಸ್ತ್ರಾಸ್ತ್ರ ತರಬೇತಿಗಾಗಿ ಪಿಒಕೆಗೆ ಹೋಗಿ  1996 ರಲ್ಲಿ ಹಿಂದಿರುಗಿದ್ದ. ಮತ್ತೆ 1998 ರಲ್ಲಿ ಪಿಒಕೆಗೆ ತೆರಳಿದ್ದ. ರಜೌರಿ ಮತ್ತು ಪೂಂಚ್ ಗಡಿ ಜಿಲ್ಲೆಗಳನ್ನು ಒಳಗೊಂಡಿರುವ ಪಿರ್ ಪಂಜಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ  ಹಲವಾರು ದಾಳಿಗಳ ಮಾಸ್ಟರ್ ಮೈಂಡ್ ಈತನಾಗಿದ್ದ ಅವರು ಹೇಳಿದರು.

ಹುಸೇನ್ ಹಿಜ್ಬುಲ್ ಮುಜಾಹಿದ್ದೀನ್‌ನ ವಿಭಾಗೀಯ ಕಮಾಂಡರ್ ಆಗಿದ್ದು, ರಜೌರಿ ಮತ್ತು ಪೂಂಚ್‌ನಲ್ಲಿ ಉಗ್ರಗಾಮಿತ್ವವನ್ನು ಪುನರುಜ್ಜೀವನಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಯೋತ್ಪಾದನೆಯ ಮಾಸ್ಟರ್ ಮೈಂಡ್
ಮುನೇಸರ್ ಹುಸೇನ್ 1996 ರಿಂದ ಸಕ್ರಿಯವಾಗಿ ಉಳಿದಿರುವ ಅತ್ಯಂತ ಹಿರಿಯ ಉಗ್ರಗಾಮಿಗಳಲ್ಲಿ ಒಬ್ಬನಾಗಿದ್ದ. ರಜೌರಿ ಮತ್ತು ಪೂಂಚ್ ಗಡಿ ಜಿಲ್ಲೆಗಳನ್ನು ಒಳಗೊಂಡಿರುವ ಪಿರ್ ಪಂಜಾಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com