ಕೋಟಾ: ಜೆಇಇ ಆಕಾಂಕ್ಷಿ ಆತ್ಮಹತ್ಯೆಗೆ ಶರಣು, ಇದು ಈ ತಿಂಗಳು ಕೋಚಿಂಗ್ ಹಬ್‌ನಲ್ಲಿ ನಡೆದ 3ನೇ ಆತ್ಮಹತ್ಯೆ!

ರಾಜಸ್ಥಾನದ ಕೋಟಾದಲ್ಲಿ 17 ವರ್ಷದ ಜೆಇಇ ಆಕಾಂಕ್ಷಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 15 ದಿನಗಳಲ್ಲಿಕೋಚಿಂಗ್ ಹಬ್‌ನಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಟಾ: ರಾಜಸ್ಥಾನದ ಕೋಟಾದಲ್ಲಿ 17 ವರ್ಷದ ಜೆಇಇ ಆಕಾಂಕ್ಷಿಯೊಬ್ಬರು ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಳೆದ 15 ದಿನಗಳಲ್ಲಿಕೋಚಿಂಗ್ ಹಬ್‌ನಲ್ಲಿ ನಡೆದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.

ಜೆಇಇಗೆ ಕೋಚಿಂಗ್ ಪಡೆಯುತ್ತಿದ್ದ ವಿದ್ಯಾರ್ಥಿ ಮನೀಶ್ ಪ್ರಜಾಪತ್ ಅವರ ಮೃತದೇಹವು ಇಲ್ಲಿನ ಮಹಾವೀರ್ ನಗರ ಪ್ರದೇಶದಲ್ಲಿ ಗುರುವಾರ ಸಂಜೆ ಅವರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಈ ಕೋಚಿಂಗ್ ಸೆಂಟರ್ ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಪೈಕಿ ಈ ವರ್ಷ 19 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶದ ಅಜಂಗಢ ನಿವಾಸಿಯಾಗಿರುವ ಪ್ರಜಾಪತ್ ಸುಮಾರು ಒಂದು ವರ್ಷದ ಹಿಂದೆ ಇಲ್ಲಿಗೆ ಬಂದಿದ್ದು, ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ(ಜೆಇಇ) ತಯಾರಿ ನಡೆಸುತ್ತಿದ್ದರು.

ಈ ವಾರದ ಆರಂಭದಲ್ಲಿ, ಪ್ರಜಾಪತ್ ಅವರ ತಂದೆ ಹಾಸ್ಟೆಲ್ ಗೆ ಆಗಮಿಸಿದ್ದರು ಮತ್ತು ಗುರುವಾರ ಮಧ್ಯಾಹ್ನ ಅವರು ವಾಪಸ್ ಮನೆಗೆ ತೆರಳಿದ್ದರು. ತಂದೆ ಹೋದ ಕೆಲವೇ ಗಂಟೆಗಳ ನಂತರ ಪ್ರಜಾಪತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜವಾಹರ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲಿನಲ್ಲಿ ಅಜಂಗಡ್‌ಗೆ ತೆರಳುತ್ತಿದ್ದ ತಂದೆ, ಪದೇ ಪದೇ ಫೋನ್ ಮಾಡಿದರೂ ಸ್ಪಂದಿಸದಿದ್ದಾಗ ಹಾಸ್ಟೆಲ್‌ನ ಕೇರ್‌ಟೇಕರ್‌ಗೆ ಫೋನ್ ಮಾಡಿ, ತನ್ನ ಮಗನನ್ನು ಪರಿಶೀಲಿಸುವಂತೆ ಕೇಳಿಕೊಂಡಿದ್ದಾರೆ. ಕೇರ್‌ಟೇಕರ್‌ ಕೊಠಡಿಗೆ ತೆರಳಿ ಕಿಟಕಿಯ ಮೂಲಕ ಇಣುಕಿ ನೋಡಿದಾಗ, ಪ್ರಜಾಪತ್ ಬೆಡ್ ಶೀಟ್ ಬಳಸಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಓದಿನ ಒತ್ತಡ ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೆಂದು ತೋರುತ್ತದೆ. ಏಕೆಂದರೆ ಅವರು ಓದಿನಲ್ಲಿ ದುರ್ಬಲರಾಗಿದ್ದರು ಎಂದು ವರದಿಯಾಗಿರುವುದಾಗಿ ಡಿಎಸ್ಪಿ ಘನಶ್ಯಾಮ್ ಮೀನಾ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com