ಕಚ್ಚತೀವು ದ್ವೀಪವನ್ನು ಇಂದಿರಾ ಗಾಂಧಿ ಸರ್ಕಾರ ಶ್ರೀಲಂಕಾಕ್ಕೆ ನೀಡಿತು: ಪ್ರಧಾನಿ ಮೋದಿ ಲೋಕಸಭೆಯಲ್ಲಿ ಆರೋಪ

ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. 1974 ರಲ್ಲಿ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ನೀಡಿದ್ದು ಇಂದಿರಾ ಗಾಂಧಿ ಸರ್ಕಾರ ಎಂದು ಆರೋಪಿಸಿದ್ದಾರೆ. 
ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ
ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಉತ್ತರಿಸಿದ್ದಾರೆ. 1974 ರಲ್ಲಿ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ನೀಡಿದ್ದು ಇಂದಿರಾ ಗಾಂಧಿ ಸರ್ಕಾರ ಎಂದು ಆರೋಪಿಸಿದ್ದಾರೆ. 

ಭಾರತದಲ್ಲಿರುವ ರಾಮೇಶ್ವರಂ ಮತ್ತು ಶ್ರೀಲಂಕಾದ ನಡುವೆ ಇರುವ ಈ ದ್ವೀಪವನ್ನು ಸಾಂಪ್ರದಾಯಿಕವಾಗಿ ಶ್ರೀಲಂಕಾ ಮತ್ತು ಭಾರತೀಯ ಮೀನುಗಾರರು ಬಳಸುತ್ತಿದ್ದರು. 1974 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು "ಇಂಡೋ-ಶ್ರೀಲಂಕಾ ಸಾಗರ ಒಪ್ಪಂದ" ದ ಅಡಿಯಲ್ಲಿ ಕಚ್ಚತೀವುವನ್ನು ಶ್ರೀಲಂಕಾದ ಪ್ರದೇಶವೆಂದು ಒಪ್ಪಿಕೊಂಡರು.

ಕಾಂಗ್ರೆಸ್ ನವರು ರಾಜಕೀಯಕ್ಕಾಗಿ ಭಾರತ ಮಾತೆಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ ಎಂದು ಲೋಕಸಭೆಯಲ್ಲಿ ಗುಡುಗಿದರು.  ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಬಿರುಸಿನ ವಾಗ್ದಾಳಿ ನಡೆಸಿದರು. 

ಕಚ್ಚತೀವುವನ್ನು ಭಾರತಕ್ಕೆ ಮರಳಿ ತರುವಂತೆ ಒತ್ತಾಯಿಸಿ ತಮಿಳುನಾಡಿನ ಡಿಎಂಕೆ ಸರ್ಕಾರ ತಮಗೆ ಪತ್ರ ಬರೆಯುತ್ತಿದೆ ಎಂದು ಪ್ರಧಾನಿ ಹೇಳಿದರು. ಕಚ್ಚತೀವು ತಮಿಳುನಾಡು ಮತ್ತು ಶ್ರೀಲಂಕಾ ನಡುವಿನ ದ್ವೀಪವಾಗಿದೆ. ಅದನ್ನು ಯಾರೋ ಬೇರೆ ದೇಶಕ್ಕೆ ನೀಡಿದ್ದಾರೆ. ಇದು ಇಂದಿರಾಗಾಂಧಿ ನೇತೃತ್ವದಲ್ಲಿ ನಡೆದಿದೆ ಎಂದು ಅವರು ಹೇಳಿದರು.

ಅದು ಭಾರತ ಮಾತೆಯ ಭಾಗವಾಗಿರಲಿಲ್ಲವೇ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗೆ ಉತ್ತರವೆಂಬಂತೆ ನಿನ್ನೆ ಸದನದಲ್ಲಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com