ರಾಹುಲ್ ಗಾಂಧಿ 'ಫ್ಲೈಯಿಂಗ್ ಕಿಸ್ 'ವಿವಾದ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು ಹೀಗೆ...

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಡೆಗೆ 'ಫ್ಲೈಯಿಂಗ್ ಕಿಸ್' ನೀಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದ್ದು, ವಯನಾಡು ಸಂಸದನ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ರಾಹುಲ್ ಗಾಂಧಿ, ಶೋಭಾ ಕರಂದ್ಲಾಜೆ
ರಾಹುಲ್ ಗಾಂಧಿ, ಶೋಭಾ ಕರಂದ್ಲಾಜೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆ ವೇಳೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಡೆಗೆ 'ಫ್ಲೈಯಿಂಗ್ ಕಿಸ್' ನೀಡಿದ್ದಾರೆ ಎಂಬುದು ವಿವಾದಕ್ಕೆ ಕಾರಣವಾಗಿದ್ದು, ವಯನಾಡು ಸಂಸದನ ವಿರುದ್ಧ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಪ್ರಗತಿ ಮೈದಾನದಲ್ಲಿಂದು ಹರ್ ಘರ್ ತಿರಂಗಾ ಬೈಕ್ ರ‍್ಯಾಲಿ'ಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಂಸತ್ತು ಮತ್ತು ದೇಶವನ್ನು ಅವಮಾನಿಸುವುದು ಕಾಂಗ್ರೆಸ್ಸಿಗೆ ಅಭ್ಯಾಸವಾಗಿದೆ. ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಸಂಸತ್ತಿಗೆ ಅವಮಾನ ಮಾಡಿದ್ದಾರೆ. ಅವರು ಈ ಹಿಂದೆ ಮೊದಲು ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು ಸಂಸತ್ತಿನಲ್ಲಿ ಕಣ್ಣು ಹೊಡೆದಿದ್ದರು. ಈಗ ಮೂರನೇ ಬಾರಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ ಎಂದರು. 

ಇದೇ ವೇಳೆ  ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ ಅಮಾನತು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಅಧಿರ್ ರಂಜನ್ ಚೌಧರಿ ನಿನ್ನೆ ಮಾಡಿದ್ದು ತುಂಬಾ ತಪ್ಪುಅವರು ಏನು ಹೇಳಲು ಬಯಸಿದ್ದರು? ದೇಶದ 140 ಕೋಟಿ ಜನರು ನಿಮ್ಮನ್ನು ನೋಡುತ್ತಿದ್ದಾರೆ. ದು ಬಿಜೆಪಿ ಅಥವಾ ಸರ್ಕಾರಕ್ಕೆ ಮಾಡಿದ ಅವಮಾನವಲ್ಲ, ನೀವು ಸಂಸತ್ತನ್ನು ಅವಮಾನಿಸಲು ಪ್ರಯತ್ನಿಸುತ್ತಿದ್ದೀರಿ ಎಂದು ವಾಕ್ ಪ್ರಹಾರ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com