ತಮಿಳುನಾಡು ಸರ್ಕಾರದ ನೀಟ್ ವಿರೋಧಿ ಮಸೂದೆಗೆ ಯಾವತ್ತೂ ಸಹಿ ಹಾಕಲ್ಲ: ಗವರ್ನರ್ ಆರ್ ಎನ್ ರವಿ

ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿರುವ ತಮಿಳುನಾಡು ಸರ್ಕಾರದ ನೀಟ್ ವಿರೋಧಿ ಮಸೂದೆಗೆ ನಾನು ಯಾವತ್ತೂ ಒಪ್ಪಿಗೆ ನೀಡುವುದಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಶನಿವಾರ ಖಡಾಖಂಡಿತವಾಗಿ ಹೇಳಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್ಎನ್.ರವಿ.
ತಮಿಳುನಾಡು ರಾಜ್ಯಪಾಲ ಆರ್ಎನ್.ರವಿ.

ಚೆನ್ನೈ: ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿರುವ ತಮಿಳುನಾಡು ಸರ್ಕಾರದ ನೀಟ್ ವಿರೋಧಿ ಮಸೂದೆಗೆ ನಾನು ಯಾವತ್ತೂ ಒಪ್ಪಿಗೆ ನೀಡುವುದಿಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಶನಿವಾರ ಖಡಾಖಂಡಿತವಾಗಿ ಹೇಳಿದ್ದಾರೆ.

ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ(NEET) ಇಲ್ಲದ ಸಾಧನೆಗಳು ಭವಿಷ್ಯಕ್ಕೆ ಸಾಕಾಗುವುದಿಲ್ಲ. ಅರ್ಹತಾ ಪರೀಕ್ಷೆ ಉಳಿಯಬೇಕು ಎಂದು ರವಿ ಹೇಳಿದ್ದಾರೆ.

"ನೋಡಿ, ನಾನು ಯಾವತ್ತೂ ನೀಟ್ ವಿರೋಧಿ ಮಸೂದೆಗೆ ಸಹಿ ಹಾಕಲ್ಲ; ನನ್ನ ಮಕ್ಕಳು ಬೌದ್ಧಿಕವಾಗಿ ಅಸಮರ್ಥ್ಯರಾಗುವುದು ನನಗೆ ಇಷ್ಟವಿಲ್ಲ. ನಮ್ಮ ಮಕ್ಕಳು ಸ್ಪರ್ಧಿಸಿ ಉತ್ತಮರಾಗಬೇಕೆಂದು ನಾನು ಬಯಸುತ್ತೇನೆ. ಅದನ್ನು ಅವರು ಸಾಬೀತುಪಡಿಸಿದ್ದಾರೆ" ಎಂದು ತಮಿಳುನಾಡು ರಾಜ್ಯಪಾಲರು ಹೇಳಿದ್ದಾರೆ.

ಇಂದು ರಾಜಭವನದಲ್ಲಿ ನೀಟ್ UG-2023ರಲ್ಲಿ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಜ್ಯಪಾಲರು, "NEET ನಿಂದ ವಿನಾಯಿತಿ ಕೋರಿದ ತಮಿಳುನಾಡು ಸರ್ಕಾರದ ಮಸೂದೆ ತಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

"ನಾನು ನಿಮಗೆ ತುಂಬಾ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ನಾನು ಎಂದಿಗೂ NEET (ಮಸೂದೆ) ಗೆ ಕ್ಲಿಯರೆನ್ಸ್ ನೀಡುವುದಿಲ್ಲ. ಅದು ತುಂಬಾ ಸ್ಪಷ್ಟವಾಗಿದೆ. ಅದು ರಾಷ್ಟ್ರಪತಿಗಳ ಬಳಿ ಹೋಗಿದೆ ಮತ್ತು ಸಮವರ್ತಿ ಪಟ್ಟಿಯ ವಿಷಯವಾಗಿರುವುದರಿಂದ ರಾಷ್ಟ್ರಪತಿಗಳೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ” ಎಂದು ರವಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com