ಶರದ್ ಪವಾರ್-ಅಜಿತ್ ಪವಾರ್ ಪುಣೆಯಲ್ಲಿ ರಹಸ್ಯ ಭೇಟಿ-ಮಾತುಕತೆ? ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಸಂಚಲನ

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಮತ್ತು ಪಕ್ಷದ ಬಂಡಾಯ ಶಾಸಕರ ಗುಂಪಿನ ಮುಖ್ಯಸ್ಥರಾಗಿರುವ ಪ್ರಸ್ತುತ ಮಹಾರಾಷ್ಟ್ರ ಉಎಂಬಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿನ್ನೆ ಶನಿವಾರ ಪುಣೆಯ ಉದ್ಯಮಿಯೊಬ್ಬರ ನಿವಾಸದಲ್ಲಿ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಊಹಾಪೋಹಗಳು ಕೇಳಿಬರುತ್ತಿದ್ದು, ಮಹಾರಾಷ್ಟ್ರ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದ
ಶರದ್ ಪವಾರ್-ಅಜಿತ್ ಪವಾರ್(ಸಂಗ್ರಹ ಚಿತ್ರ)
ಶರದ್ ಪವಾರ್-ಅಜಿತ್ ಪವಾರ್(ಸಂಗ್ರಹ ಚಿತ್ರ)

ಮುಂಬೈ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಮತ್ತು ಪಕ್ಷದ ಬಂಡಾಯ ಶಾಸಕರ ಗುಂಪಿನ ಮುಖ್ಯಸ್ಥರಾಗಿರುವ ಪ್ರಸ್ತುತ ಮಹಾರಾಷ್ಟ್ರ ಉಎಂಬಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ನಿನ್ನೆ ಶನಿವಾರ ಪುಣೆಯ ಉದ್ಯಮಿಯೊಬ್ಬರ ನಿವಾಸದಲ್ಲಿ ರಹಸ್ಯವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಊಹಾಪೋಹಗಳು ಕೇಳಿಬರುತ್ತಿದ್ದು, ಮಹಾರಾಷ್ಟ್ರ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ.

ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಮೋಲ್ ಮಿಟ್ಕರಿ, ಇದು ಇಬ್ಬರು ನಾಯಕರ ನಡುವಿನ ಕುಟುಂಬ ಭೇಟಿ ಮಾತುಕತೆಯಾಗಿರಬಹುದು ಎಂದಿದ್ದಾರೆ. 

ಪ್ರಾದೇಶಿಕ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ ಶರದ್ ಪವಾರ್ ಅವರು ಕೋರೆಗಾಂವ್ ಪಾರ್ಕ್ ಪ್ರದೇಶದ ಉದ್ಯಮಿಯ ನಿವಾಸಕ್ಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗಮಿಸಿ ಸಂಜೆ 5 ಗಂಟೆ ಸುಮಾರಿಗೆ ಅಲ್ಲಿಂದ ಹೊರಟುಹೋಗಿದ್ದಾರೆ. 

ಸುಮಾರು ಎರಡು ಗಂಟೆಗಳ ನಂತರ, ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಂಜೆ 6:45 ಕ್ಕೆ ಕಾರಿನಲ್ಲಿ ಆವರಣದಿಂದ ಹೊರಟು ಕ್ಯಾಮರಾಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. 

ಮಹಾರಾಷ್ಟ್ರ ರಾಜಕೀಯದಲ್ಲಿ ಎನ್‌ಸಿಪಿ ಅಧ್ಯಕ್ಷ (ಶರದ್ ಪವಾರ್ ಬಣ) ಜಯಂತ್ ಪಾಟೀಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ನಂಬಲಾಗಿದೆ. ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರು ಪ್ರತ್ಯೇಕವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಶನಿವಾರ ಪುಣೆಯಲ್ಲಿದ್ದರು.

ಭಾರತೀಯ ಜನತಾ ಪಕ್ಷದ ಶಾಸಕ ಅತುಲ್ ಭಟ್ಕಳಕರ್, ಸಭೆಯಲ್ಲಿ ಏನಾಯಿತು ಎಂದು ಅವರನ್ನೇ ಕೇಳುವುದು ಉತ್ತಮ ಎಂದಿದ್ದಾರೆ. 

ಕಳೆದ ತಿಂಗಳು ಮಹಾರಾಷ್ಟ್ರದ ರಾಜಕೀಯ ವಲಯಗಳನ್ನು ದಿಗ್ಭ್ರಮೆಗೊಳಿಸಿದ ಹಠಾತ್ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಅವರು ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರನ್ನು ಬೆಂಬಲಿಸಿ ಹೋಗಿದ್ದ ಎನ್‌ಸಿಪಿಯ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎನ್ ಸಿಪಿಯ 54 ಶಾಸಕರ ಪೈಕಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಗುಂಪುಗಳನ್ನು ಬೆಂಬಲಿಸುವ ಶಾಸಕರ ನಿಖರ ಸಂಖ್ಯೆ ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com