ಅಸ್ಸಾಂ ನಲ್ಲಿ ಡೀಲಿಮಿಟೇಷನ್ ವರದಿ ವಿರುದ್ಧ ಪ್ರತಿಭಟನೆ: ಬಿಜೆಪಿ ಮಿತ್ರ ಪಕ್ಷ ಎಜಿಪಿಎಸ್ ಶಾಸಕ ಪಕ್ಷಕ್ಕೆ ಗುಡ್ ಬೈ!

ಅಸ್ಸಾಂ ನಲ್ಲಿ ಡೀಲಿಮಿಟೇಷನ್ ವರದಿ ವಿರುದ್ಧ ಪ್ರತಿಭಟನೆ ನಡೆಸಿರುವ ಬಿಜೆಪಿ ಮಿತ್ರ ಪಕ್ಷ ಎಜಿಪಿ ಶಾಸಕ ಪ್ರದೀಪ್ ಹಜಾರಿಕಾ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 
ಅಸ್ಸಾಂ ನಲ್ಲಿ ಡೀಲಿಮಿಟೇಷನ್ ವರದಿ ವಿರುದ್ಧ ಪ್ರತಿಭಟನೆ
ಅಸ್ಸಾಂ ನಲ್ಲಿ ಡೀಲಿಮಿಟೇಷನ್ ವರದಿ ವಿರುದ್ಧ ಪ್ರತಿಭಟನೆ

ಗುವಾಹಟಿ: ಅಸ್ಸಾಂ ನಲ್ಲಿ ಡೀಲಿಮಿಟೇಷನ್ ವರದಿ ವಿರುದ್ಧ ಪ್ರತಿಭಟನೆ ನಡೆಸಿರುವ ಬಿಜೆಪಿ ಮಿತ್ರ ಪಕ್ಷ ಎಜಿಪಿ ಶಾಸಕ ಪ್ರದೀಪ್ ಹಜಾರಿಕಾ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. 

ವಿಧಾನಸಭೆ ಹಾಗೂ ಲೋಕಸಭೆ ಸ್ಥಾನಗಳಿಗೆ ಅಂತಿಮ ಡೀಲಿಮಿಟೇಷನ್ ವರದಿಯಲ್ಲಿ ತಮ್ಮ ಅಮ್ಗುರಿ ಸ್ಥಾನವನ್ನು ರದ್ದುಗೊಳಿಸುವುದನ್ನು ಪ್ರದೀಪ್ ಪ್ರತಿಭಟಿಸಿದ್ದಾರೆ.
 
ಇದೇ ವೇಳೆ ವಿಪಕ್ಷವಾಗಿರುವ ರೈಜೋರ್ ದಲ್ ಸಹ ಶಿವಸಾಗರ್ ಜಿಲ್ಲೆಯಲ್ಲಿ ಡೀಲಿಮಿಟೇಷನ್ ವರದಿಯನ್ನು ಪ್ರತಿಭಟಿಸಿದ್ದರೆ, ಆಲ್ ತಿವಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಮೋರಿಗಾಂವ್ ಕ್ಷೇತ್ರವನ್ನು ಬುಡಕಟ್ಟು ಮಂದಿಗೆ ಮೀಸಲಿಡುವ ತಮ್ಮ ಬೇಡಿಕೆ ಈಡೇರದ ಕಾರಣ ಪ್ರತಿಭಟನೆ ನಡೆಸಿದೆ.

ಚುನಾವಣಾ ಆಯೋಗವು ಶುಕ್ರವಾರ ಪ್ರಕಟಿಸಿದ ಅಂತಿಮ ವರದಿಯು ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 126 ಮತ್ತು ಲೋಕಸಭೆ ಸ್ಥಾನಗಳನ್ನು 14 ಕ್ಕೆ ಅಂತಿಮಗೊಳಿಸಿದೆ.

ಚುನಾವಣಾ ಆಯೋಗದ ಹೇಳಿಕೆಯ ಪ್ರಕಾರ, 19 ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಡಲಾಗಿದೆ, ಆದರೆ 9 ವಿಧಾನಸಭೆ ಮತ್ತು ಒಂದು ಲೋಕಸಭೆ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com