ಪಂಜಾಬ್ ಗಡಿಭಾಗದಲ್ಲಿ ಪಾಕಿಸ್ತಾನಿ ಒಳನುಸುಳುಕೋರನ ಗುಂಡಿಕ್ಕಿ ಹತ್ಯೆಗೈದ ಬಿಎಸ್ಎಫ್

ಪಂಜಾಬ್ ರಾಜ್ಯದ ಪಠಾಣ್ ಕೋಟ್ ನ ಗಡಿ ಭಾಗದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಒಳನುಸುಳುಕೋರನನ್ನು ಭದ್ರತಾ ಪಡೆ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಠಾಣ್ ಕೋಟ್: ಪಂಜಾಬ್ ರಾಜ್ಯದ ಪಠಾಣ್ ಕೋಟ್ ನ ಗಡಿ ಭಾಗದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಒಳನುಸುಳುಕೋರನನ್ನು ಭದ್ರತಾ ಪಡೆ ಯೋಧರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಭಾರತ ದೇಶ 76ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಘಟನೆ ನಡೆದಿದೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕಳೆದ ತಡರಾತ್ರಿ ಭಾರತ-ಪಾಕಿಸ್ತಾನ ಗಡಿಯ ಕಮಲ್ಜಿತ್ ಪೋಸ್ಟ್ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗಡಿ ಭದ್ರತಾ ಪಡೆ(BSF) ಯೋಧರು ಪಾಕಿಸ್ತಾನ ಗಡಿಭಾಗದಿಂದ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಿಎಸ್ ಎಫ್ ಯೋಧರು 14 ಸುತ್ತುಗಳಲ್ಲಿ ಗುಂಡಿನ ಮಳೆಗೈದಿದ್ದಾರೆ.

ಮೊನ್ನೆ ಆಗಸ್ಟ್ 10ರಂದು ಪಂಜಾಬ್ ನ ಟಾರ್ನ್ ಟರನ್ ಗಡಿಭಾಗದಲ್ಲಿ ಪಾಕಿಸ್ತಾನದ ಒಳನುಸುಳುಕೋರನನ್ನು ಬಿಎಸ್ ಎಫ್ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದರು. ಅದಾದ ಮೂರು ದಿನಗಳಲ್ಲಿ ಮತ್ತೊಂದು ಇಂಥಹದ್ದೇ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆಯೇ ಪಂಜಾಬ್ ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಬೇಲಿ ಪಕ್ಕ ಶಂಕಾಸ್ಪದ ಚಲನವಲನಗಳು ಕಂಡುಬಂದಿದ್ದವು ಎಂದು ಬಿಎಸ್ಎಫ್ ಯೋಧರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com