ಮುಂಬೈ: ಮಹಾರಾಷ್ಟ್ರ ಸಿಎಂ ಬದಲಾವಣೆಗೆ ತಯಾರಿ ನಡೆಯುತ್ತಿದೆ ಎಂದು ಕಾಂಗ್ರೆಸ್, ವಿಪಕ್ಷ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ.
ಶಿಂಧೆ ಆಸ್ಪತ್ರೆಗೆ ದಾಖಲಾದ ಬಳಿಕ ಆರೋಗ್ಯದ ಕಾರಣವನ್ನು ನೀಡಿ, ಸಿಎಂ ಹುದ್ದೆಯಲ್ಲಿ ಬದಲಾವಣೆ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ವಿಜಯ್ ಹೇಳಿದ್ದಾರೆ. ಶಿಂಧೆ ಅವರನ್ನು ಸಿಎಂ ಹುದ್ದೆಯಿಂದ ಬದಲಾವಣೆ ಮಾಡುವ ಊಹಾಪೋಹಗಳ ನಡುವೆ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಡಿಸಿಎಂ ಅಜಿತ್ ಪವಾರ್ ಪುಣೆಯಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದು, ಅಜಿತ್ ಪವಾರ್ ಸಿಎಂ ಆಗುವ ಸಾಧ್ಯತೆಗಳಿವೆ ಎಂದು ವಿಜಯ್ ಆರೋಪಿಸಿದ್ದಾರೆ.
ಶಿಂಧೆಗೆ ಅನಾರೋಗ್ಯ ಎಂದು ಸಿಎಂಒ ಹೇಳಿದೆ. ಅವರನ್ನು ಕೆಲವು ತಿಂಗಳುಗಳ ಕಾಲ ಆಸ್ಪತ್ರೆಗೆ ದಾಖಲಿಸಿ ಅವರ ಬದಲಿಗೆ ಹೊಸ ಸಿಎಂ ಆಯ್ಕೆ ಮಾಡಲಾಗುತ್ತದೆ ಎಂದು ವಿಪಕ್ಷನಾಯ ವಿಜಯ್ ಅಭಿಪ್ರಾಯಪಟ್ಟಿದ್ದಾರೆ. ಶಿವಸೇನೆ ಉದ್ಧವ್ ಠಾಕ್ರೆ ಬಣದ ಮುಖವಾಣಿ ಸಾಮ್ನಾ ಸಹ ಶಿಂಧೆ ಅನಾರೋಗ್ಯವನ್ನುಲ್ಲೇಖಿಸಿ ಲೇಖನ ಪ್ರಕಟಿಸಿದೆ.
ಇದನ್ನೂ ಓದಿ: ಅಜಿತ್ ಪವಾರ್ ಮಹಾರಾಷ್ಟ್ರ ಸಿಎಂ ಆಗಬಹುದು: ಖಾತೆ ಹಂಚಿಕೆ ನಂತರ ಸಂಜಯ್ ರಾವತ್
ಶಿಂಧೆ 24 ಗಂಟೆಯೂ ಕೆಲಸ ಮಾಡುತ್ತಾರೆ ಆದ್ದರಿಂದ ಆರೋಗ್ಯ ಹದಗೆಟ್ಟಿದೆ ಎಂದು ಶಿಂಧೆ ಬೆಂಬಲಿಗ ಶಾಸಕ ಸಂಜಯ್ ಶಿರ್ಸತ್ ಹೇಳಿದರು. ಆದರೆ ಶಿಂಧೆ 24 ಗಂಟೆಯೂ ಕೆಲಸ ಮಾಡುವುದು ರಾಜ್ಯದಲ್ಲೆಲ್ಲೂ ಕಾಣುವುದಿಲ್ಲ. ಪದವಿ ಹೋಗುತ್ತದೆ ಎಂಬ ಆತಕಂದಲ್ಲಿ ಅವರು ನಿದ್ದೆಗೆಟ್ಟರೆ ಅದನ್ನು ದಿನವಿಡೀ ಕೆಲಸ ಮಾಡುವುದು ಎನ್ನುವುದಕ್ಕೆ ಸಾಧ್ಯವಿಲ್ಲ ಎಂದು ಸಾಮ್ನಾ ತನ್ನ ಸಂಪಾದಕೀಯದಲ್ಲಿ ಹೇಳಿದೆ.
ಶಿರ್ಸತ್ ಅವರ ಹೇಳಿಕೆಗಳು ನಿಜವಾಗಿದ್ದು, ಶಿಂಧೆ ಆರೋಗ್ಯ ಹದಗೆಟ್ಟಿದ್ದರೆ ಅವರನ್ನು ಮುಂಬೈ ಅಥವಾ ಥಾಣೆಯ ಒಳ್ಳೆಯ ಆಸ್ಪತ್ರೆಯ ಐಸಿಯುಗೆ ದಾಖಲಿಸಬೇಕು ಹಾಗೂ ಡಿಸಿಎಂ ಫಡ್ನವಿಸ್ ಅಥವಾ ಅಜಿತ್ ಪವಾರ್ ಗೆ ಪ್ರವೇಶ ಇರಬಾರದು ಎಂದು ಯುಟಿಬಿ ಸಾಮ್ನಾದಲ್ಲಿ ವ್ಯಂಗ್ಯವಾಗಿ ಬರೆದಿದೆ.
Advertisement