ಉಗ್ರರೊಂದಿಗೆ ಸಂಪರ್ಕ ಇರುವ ಸಿಬ್ಬಂದಿಗಳ ವಿರುದ್ಧ ಕ್ರಮ: ಜಮ್ಮು-ಕಾಶ್ಮೀರ ಎಲ್ ಜಿ

ಉಗ್ರರೊಂದಿಗೆ ಸಂಪರ್ಕ ಇರುವ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗೌರ್ನರ್ ಮನೋನ್ ಸಿನ್ಹಾ ಹೇಳಿದ್ದಾರೆ.
ಮನೋಜ್ ಸಿನ್ಹಾ
ಮನೋಜ್ ಸಿನ್ಹಾ

ಶ್ರೀನಗರ: ಉಗ್ರರೊಂದಿಗೆ ಸಂಪರ್ಕ ಇರುವ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗೌರ್ನರ್ ಮನೋನ್ ಸಿನ್ಹಾ ಹೇಳಿದ್ದಾರೆ.
 
ಭಯೋತ್ಪಾದನೆಯನ್ನು ಯಾರೆಲ್ಲಾ ಬೆಂಬಲಿಸುತ್ತಾರೋ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂದು ಸಿನ್ಹಾ ಎಚ್ಚರಿಕೆ ನೀಡಿದ್ದಾರೆ. 

ಕೇಂದ್ರ ಅಥವಾ ಸರ್ಕಾರಿ ಉದ್ಯೋಗಿಗಳನ್ನು ವಜಾಗೊಳಿಸುವ ಅಥವಾ ಶ್ರೇಣಿಯಿಂದ ಕೆಳಗೆ ಇಳಿಸುವ 
ಆರ್ಟಿಕಲ್ 311 ನ್ನು ಜಮ್ಮು-ಕಾಶ್ಮೀರದಲ್ಲಿ ಅಳವಡಿಸಲಾಗಿದೆ.  ಈ ಮೂಲಕ ಉಗ್ರರೊಂದಿಗೆ ಕೈ ಜೋಡಿಸಿ, ದೇಶಕ್ಕೆ ಮಾರಕವಾಗಿರುವ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. 

ಪಿಡಿಪಿ ಅಧ್ಯಕ್ಷ್ಯೆ ಮೆಹಬೂಬಾ ಮುಫ್ತಿ ಜಮ್ಮು-ಕಾಶ್ಮೀರ ಆಡಳಿತ ಕಾಶ್ಮೀರಿ ಉದ್ಯೋಗಿಗಳನ್ನು ಆಯ್ಕೆ ಮಾಡಿ ವಜಾಗೊಳಿಸುತ್ತಿದೆ ಅವರನ್ನು ಉಗ್ರರ ಬೆಂಬಲಿಗರೆಂದು ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಆರೋಪಿಸಿದ್ದಕ್ಕೆ ರಾಜ್ಯಪಾಲರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com