ರಾಜೀವ್ ಗಾಂಧಿ ಜನ್ಮ ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಅಂಗವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 
ರಾಜೀವ್ ಗಾಂಧಿಗೆ ನಮನ
ರಾಜೀವ್ ಗಾಂಧಿಗೆ ನಮನ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79ನೇ ಜನ್ಮದಿನದ ಅಂಗವಾಗಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 

ರಾಜೀವ್ ಗಾಂಧಿಯವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು.  ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನನ್ನ ಶ್ರದ್ಧಾಂಜಲಿ" ಎಂದು ಮೋದಿ ಅವರು ಟ್ವೀಟ್ ಮಾಡಿದ್ದಾರೆ.

1984ರಿಂದ 1989ರವರೆಗೆ ದೇಶದ ಪ್ರಧಾನ ಮಂತ್ರಿಯಾಗುವ ಮೂಲಕ ರಾಜೀವ್ ಗಾಂಧಿ ಅವರು 40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾದರು. ಅವರು ವಿಶ್ವದ ಸರ್ಕಾರದ ಅತ್ಯಂತ ಕಿರಿಯ ಮುಖ್ಯಸ್ಥರೆಂಬ ಹೆಗ್ಗಳಿಕೆ ಪಡೆದರು. ಅವರ ತಾಯಿ ಶ್ರೀಮತಿ ಇಂದಿರಾ ಗಾಂಧಿಯವರು 1966ರಲ್ಲಿ 48ನೇ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾದರು. ಇವರ ತಾತ ಪಂಡಿತ್ ಜವಾಹರ್ಲಾಲ್ ನೆಹರು ಅವರು 58ನೇ ವಯಸ್ಸಿನಲ್ಲಿಯೇ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗಿ 17 ವರ್ಷಗಳ ಸುದೀರ್ಘ ಕಾಲ ಆಳಿದರು.

ರಾಷ್ಟ್ರದಲ್ಲಿ ಹೊಸ ಪೀಳಿಗೆ ಪರಿವರ್ತನೆಯ ಮುನ್ಸೂಚಕರಾದ ರಾಜೀವ್ ಗಾಂಧಿ ಅವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶ ಪಡೆದರು. ಹತ್ಯೆಗೀಡಾದ ತಮ್ಮ ತಾಯಿಯ ಶೋಕಾಚರಣೆ ಪೂರ್ಣಗೊಂಡ ತಕ್ಷಣವೇ ಅವರು ಲೋಕಸಭಾ ಚುನಾವಣೆಗೆ ಆದೇಶ ನೀಡಿದರು. ಈ ಚುನಾವಣೆಯಲ್ಲಿ, ಕಾಂಗ್ರೆಸ್ ಈ ಹಿಂದಿನ ಏಳು ಚುನಾವಣೆಗಳಲ್ಲೇ ಅತ್ಯಂತ ಜನಪ್ರಿಯ ಮತದ ದೊಡ್ಡ ಭಾಗವನ್ನು ಗಳಿಸಿತು ಹಾಗೂ 508 ಲೋಕಸಭಾ ಕ್ಷೇತ್ರಗಳಲ್ಲಿ 401 ಕ್ಷೇತ್ರಗಳಲ್ಲಿ ದಾಖಲೆ ಗೆಲುವನ್ನು ಪಡೆಯಿತು.

1991ರಿಂದ ಎಲ್ ಟಿಟಿಇ ಆತ್ಮಹತ್ಯಾ ಬಾಂಬ್ ದಾಳಿಕೋರರಿಂದ ರಾಜೀವ್ ಗಾಂಧಿ ಹತ್ಯೆಗೀಡಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com