ಔರಂಗಾಬಾದ್ ಗೆಲ್ಲಲು ಎಐಎಂಐಎಂ ಕಣದಲ್ಲಿರಬೇಕು: ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ

ಬಿಜೆಪಿ ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಬೇಕೆಂದರೆ ಎಐಎಂಐಎಂ ಕಣದಲ್ಲಿರಬೇಕು ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.
ಎಐಎಂಐಎಂ ಮುಖ್ಯಸ್ಥ ಓವೈಸಿ ಜೊತೆ ಔರಂಗಾಬಾದ್ ಸಂಸದ ಜಲೀಲ್
ಎಐಎಂಐಎಂ ಮುಖ್ಯಸ್ಥ ಓವೈಸಿ ಜೊತೆ ಔರಂಗಾಬಾದ್ ಸಂಸದ ಜಲೀಲ್

ನವದೆಹಲಿ: ಬಿಜೆಪಿ ಔರಂಗಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಬೇಕೆಂದರೆ ಎಐಎಂಐಎಂ ಕಣದಲ್ಲಿರಬೇಕು ಎಂದು ಕೇಂದ್ರ ಸಚಿವ ರಾವ್ ಸಾಹೇಬ್ ದನ್ವೆ ಹೇಳಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ನಾಯಕನ ಈ ಹೇಳಿಕೆ ಅಚ್ಚರಿ ಮೂಡಿಸಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕೆಂದರೆ ಎಐಎಂಐಎಂ ನಾಯಕ ಹಾಗೂ ಹಾಲಿ ಸಂಸದ ಇಮ್ತಿಯಾಜ್ ಜಲೀಲ್ ಚುನಾವಣೆಗೆ ಸ್ಪರ್ಧಿಸುವುದನ್ನು ಬಿಜೆಪಿ ಖಚಿತಪಡಿಸಿಕೊಳ್ಳಬೇಕೆಂದು ಹೇಳಿದ್ದಾರೆ. ಈ ಹಿಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ ಎಂದು ದನ್ವೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಔರಂಗಾಬಾದ್ ಲೋಕಸಭಾ ಕ್ಷೇತ್ರದ ರಾಜಕೀಯ ಸನ್ನಿವೇಶದ ಬಗ್ಗೆ ಪ್ರಶ್ನಿಸಿದ ದಾನ್ವೆ, "ನಮಗೆ ಇಮ್ತಿಯಾಜ್ ಜಲೀಲ್ ಅವರೊಂದಿಗೆ ವಿಭಿನ್ನ ರೀತಿಯ ಸ್ನೇಹವಿದೆ, ಅದು (ಬಿಜೆಪಿ ನಾಯಕ) ಭಾಗವತ್ ಕರದ್ ಆಗಿರಲಿ ಅಥವಾ ಬೇರೆಯವರಾಗಿರಲಿ, 2024 ರಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಮತ್ತು ಜಲೀಲ್ ಆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ದನ್ವೆ ಹೇಳಿದ್ದು, ದನ್ವೆ ಈ ಹೇಳಿಕೆಗಳನ್ನು ನೀಡಿದಾಗ ಜಲೀಲ್ ಕೂಡ ಇದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com