ರಾಷ್ಟ್ರೀಯ ವಾಹಿನಿಯಲ್ಲಿ ಚಾಂಡಿಯ ಪ್ರಶಂಸೆಯಿಂದ ಕೆಲಸಕ್ಕೇ ಕುತ್ತು!: ಕೇರಳ ಸರ್ಕಾರಿ ಆಸ್ಪತ್ರೆ ಉದ್ಯೋಗಿ ಅಳಲು

ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರನ್ನು ಪ್ರಶಂಸಿದ್ದಕ್ಕಾಗಿ ತಮ್ಮ ಕೆಲಸಕ್ಕೇ ಕುತ್ತು ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. 
ಉಮ್ಮನ್ ಚಾಂಡಿ
ಉಮ್ಮನ್ ಚಾಂಡಿ

ಕೇರಳ: ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ಅವರನ್ನು ಪ್ರಶಂಸಿದ್ದಕ್ಕಾಗಿ ತಮ್ಮ ಕೆಲಸಕ್ಕೇ ಕುತ್ತು ಬಂದಿದೆ ಎಂದು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯ ಉದ್ಯೋಗಿಯೊಬ್ಬರು ಆರೋಪಿಸಿದ್ದಾರೆ. 

ಉಮ್ಮನ್ ಚಾಂಡಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರ ಪರಿಣಾಮ ತಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಕಳೆದ 13 ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಸತ್ಯಮ್ಮ ಹೇಳಿದ್ದಾರೆ.

ಟಿವಿ ಚಾನಲ್ ಒಂದರಲ್ಲಿ ಮಾತನಾಡಿದ್ದ ಉದ್ಯೋಗಿ, ಚಾಂಡಿ ಹೇಗೆ ತಮ್ಮ ಕುಟುಂಬಕ್ಕೆ ಸಹಾಯ ಮಾಡಿದ್ದರು ಎಂಬುದನ್ನು ಸ್ಮರಿಸಿದ್ದರು.

ಚಾಂಡಿ ಜು.18 ರಂದು ನಿಧನರಾಗಿದ್ದು, ಅವರು ಪ್ರತಿನಿಧಿಸುತ್ತಿದ್ದ ಪುಥುಪಲ್ಲಿ ಕ್ಷೇತ್ರಕ್ಕೆ ಉಪಚುನಾವಣೆ ಸೆ.05 ರಂದು ನಡೆಯಲಿದೆ.

ಟಿವಿ ಚಾನಲ್ ಗಳು ಉಪಚುನಾವಣೆ ಹಿನ್ನೆಲೆಯಲ್ಲಿ ಚರ್ಚೆಯನ್ನು ಆರಂಭಿಸಿವೆ. ಹಿರಿಯ ಕಾಂಗ್ರೆಸ್ ಶಾಸಕ ತಿರುಚಂಚೂರ್ ರಾಧಾಕೃಷ್ಣನ್ ಸತ್ಯಮ್ಮ ಮನೆಗೆ ತೆರಳಿ ಆಕೆಯೊಂದಿಗೆ ಮಾತನಾಡಿದ್ದಾರೆ. 

ಸತ್ಯಮ್ಮ ಮಾಡಿದ ಒಂದೇ ಒಂದು ತಪ್ಪು ಏನೆಂದರೆ ಅದು ಚಾಂಡಿ ಅವರು ಹಾಗೂ ಅವರ ಕುಟುಂಬಕ್ಕೆ ಮಾಡಿದ್ದ ಸಹಾಯದ ಬಗ್ಗೆ ಮಾತನಾಡಿದ್ದಾಗಿದೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ತನ್ನ ಮಗ ತೀರಿಕೊಂಡಾಗ ಮತ್ತು ಮಗಳ ಮದುವೆಯ ಸಮಯದಲ್ಲಿ ಚಾಂಡಿ ತನ್ನ ಕುಟುಂಬಕ್ಕೆ ಹೇಗೆ ಸಹಾಯ ಮಾಡಿದರು ಎಂಬುದರ ಕುರಿತು ಅವರು ಟಿವಿ ಚಾನೆಲ್‌ಗೆ ತಿಳಿಸಿದ್ದರು. ಅಷ್ಟೇ ಅಲ್ಲದೇ ಈ ಬಾರಿ ತಮ್ಮ ಮತವನ್ನು ಚಾಂಡಿ ಅವರ ಪುತ್ರನಿಗೆ ಹಾಕುವುದಾಗಿ ತಿಳಿಸಿದ್ದರು. ಈ ಸುದ್ದಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಮತ್ತು ಆಕೆ ಕೆಲಸ ಕಳೆದುಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಗೆ ಕೆಲಸ ಮರಳಿ ಸಿಗುವಂತೆ ಮಾಡಲು ನಾವು ಆಕೆಯೊಂದಿಗೆ ನಿಲ್ಲುತ್ತೇವೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com