ಚಂದ್ರಯಾನ 3: ಇಸ್ರೋ ವಿಜ್ಞಾನಿಗಳಿಗೆ 17 ತಿಂಗಳಿನಿಂದ ಸಂಬಳ ಕೊಟ್ಟಿಲ್ಲ; ದಿಗ್ವಿಜಯ್ ಸಿಂಗ್ ಹೇಳಿದ್ದೇನು?

ಭಾರತವು ತನ್ನ ಮೂರನೇ ಚಂದ್ರನ ಮಿಷನ್ ಚಂದ್ರಯಾನ-3 ಮೂಲಕ ಇತಿಹಾಸವನ್ನು ರಚಿಸಲು ಕೆಲವೇ ಗಂಟೆಗಳಿವೆ. ಚಂದ್ರಯಾನ 3 ಇಂದು ಸಂಜೆ 6:04ಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಈ ಮಿಷನ್‌ನಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್

ಭಾರತವು ತನ್ನ ಮೂರನೇ ಚಂದ್ರನ ಮಿಷನ್ ಚಂದ್ರಯಾನ-3 ಮೂಲಕ ಇತಿಹಾಸವನ್ನು ರಚಿಸಲು ಕೆಲವೇ ಗಂಟೆಗಳಿವೆ. ಚಂದ್ರಯಾನ 3 ಇಂದು ಸಂಜೆ 6:04ಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಈ ಮಿಷನ್‌ನಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. 

ಈ ಮಧ್ಯೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಂದ್ರಯಾನ 3 ಮಿಷನ್ ಯಶಸ್ವಿಗೊಳಿಸಲು ಯತ್ನಿಸಿದ ವಿಜ್ಞಾನಿಗಳಿಗೆ 17 ತಿಂಗಳಿಂದ ಸಂಬಳ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಸುದ್ದಿ ಸಂಸ್ಥೆ ಎಎನ್‌ಐ ಜೊತೆಗೆ ಮಾತನಾಡಿದ್ದ ವೇಳೆ, 'ನಮ್ಮ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಅನ್ನು ಚಂದ್ರನ ಮೇಲೆ ಇಳಿಸಲು ಯಶಸ್ವಿ ಪ್ರಯತ್ನ ನಡೆಸಿರುವುದು ನಮಗೆ ಹೆಮ್ಮೆ ತಂದಿದೆ. ಚಂದ್ರಯಾನ ಯಶಸ್ವಿ ಲ್ಯಾಂಡಿಂಗ್ ಆಗಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಕೆಲಸ ಸುದ್ದಿಗಳು ಹೊರ ಬರುತ್ತಿವೆ. ಈ ಕೆಲಸ ಮಾಡಿದ ವಿಜ್ಞಾನಿಗಳಿಗೆ 17 ತಿಂಗಳಿಂದ ಸಂಬಳ ಕೊಟ್ಟಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಎಲ್ಲಾ ಶಾಲೆಗಳಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ನೇರಪ್ರಸಾರ ಮಾಡಲಾಗುತ್ತಿದೆ. ಇಂದು ಸಂಜೆ 5.30 ರಿಂದ 6.30 ರವರೆಗೆ ಲೈವ್ ಸ್ಟ್ರೀಮಿಂಗ್ ಅನ್ನು ತೋರಿಸಲಾಗುತ್ತದೆ. ಸರಕಾರದಿಂದ ಎಲ್ಲ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಲೈವ್ ವೀಕ್ಷಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಮರುದಿನ ಆಗಸ್ಟ್ 24ರಂದು ರೆಕಾರ್ಡಿಂಗ್ ಅನ್ನು ತೋರಿಸಲಾಗುತ್ತದೆ.

ಮತ್ತೊಂದೆಡೆ, ಭಾರತದ ಚಂದ್ರಯಾನ-3 ಯಶಸ್ವಿ ಲ್ಯಾಂಡಿಂಗ್‌ಗಾಗಿ, ಮಧ್ಯಪ್ರದೇಶದ ಉಜ್ಜೈನ್‌ನಲ್ಲಿರುವ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಮುಂಜಾನೆ ವಿಶೇಷ 'ಭಸ್ಮ ಆರತಿ' ನಡೆಸಲಾಯಿತು. ಇಸ್ರೋ ಪ್ರಕಾರ, ಚಂದ್ರಯಾನ-3 ಇಂದು ಬೆಳಿಗ್ಗೆ 6:04ರ ಸುಮಾರಿಗೆ ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com