ತೇಜಸ್ ಫೈಟರ್ ನಲ್ಲಿ ದೃಶ್ಯ ಶ್ರೇಣಿಯ ವ್ಯಾಪ್ತಿಯನ್ನೂ ಮೀರಿದ ಅಸ್ತ್ರ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ!

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಲಘು ಯುದ್ಧವಿಮಾನ ತೇಜಸ್ ಇಂದು ದೃಶ್ಯ ವ್ಯಾಪ್ತಿಯ ಆಚೆಗಿನ ಎಎಎಂ ( air-to-air missile) ನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.
ತೇಜಸ್ ಫೈಟರ್
ತೇಜಸ್ ಫೈಟರ್
Updated on

ಪಣಜಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಲಘು ಯುದ್ಧವಿಮಾನ ತೇಜಸ್ ಇಂದು ದೃಶ್ಯ ವ್ಯಾಪ್ತಿಯ ಆಚೆಗಿನ ಎಎಎಂ ( air-to-air missile) ನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಉಡಾವಣೆ ಮಾಡಿದೆ.

ಗೋವಾದ ಕಡಲ ಪ್ರದೇಶದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆದಿದೆ. ಸುಮಾರು 20,000 ಅಡಿ ಎತ್ತರದಲ್ಲಿ ವಿಮಾನದಿಂದ ಕ್ಷಿಪಣಿ ಬಿಡುಗಡೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ತೇಜಸ್, ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) ಎಲ್‌ಎಸ್‌ಪಿ-7 ಆಗಸ್ಟ್ 23 ರಂದು ಗೋವಾದ ಕರಾವಳಿಯಲ್ಲಿ ದೃಷ್ಟಿಗೋಚರ ವ್ಯಾಪ್ತಿಯಿಂದ ಆಚೆಗೆ ಅಸ್ತ್ರ ಎಂಬ ಸ್ವದೇಶಿ ಕ್ಷಿಪಣಿಯನ್ನು ಯಶಸ್ವಿಯಾಗಿ ಹಾರಿಸಿತು" ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಪರೀಕ್ಷೆಯ ಎಲ್ಲಾ ಉದ್ದೇಶಗಳನ್ನು ಕ್ಷಿಪಣಿ ಪೂರೈಸಿದೆ ಎಂದು ಸಚಿವಾಲಯ ತಿಳಿಸಿದೆ.ತೇಜಸ್-ಎಲ್‌ಸಿಎಯಿಂದ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಡಿಎ, ಡಿಆರ್‌ಡಿಒ, ಸಿಮಿಲಾಕ್, ಡಿಜಿ-ಎಕ್ಯೂಎ ಮತ್ತು ಉದ್ಯಮವನ್ನು ಶ್ಲಾಘಿಸಿದರು.

ಈ ಪರೀಕ್ಷಾರ್ಥ ಉಡಾವಣೆ ತೇಜಸ್‌ನ ಯುದ್ಧ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ. ತೇಜಸ್ ಏಕ-ಎಂಜಿನ್ ಬಹು-ಪಾತ್ರದ ಯುದ್ಧ ವಿಮಾನವಾಗಿದ್ದು, ವಾಯು ರಕ್ಷಣೆ, ಕಡಲ ವಿಚಕ್ಷಣ ಮತ್ತು ಸ್ಟ್ರೈಕ್ ಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com