
ಗುವಾಹಟಿ: ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ರೈಲ್ವೆ ಸೇತುವೆ ಕುಸಿತದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಆದರೆ ಇದುವರೆಗೆ 22 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಮೃತರನ್ನು ನಬಾ ಚೌಧರಿ, ಮೊಜಮ್ಮೆಲ್ ಹಕ್, ನರೀಮ್ ರೆಹಮಾನ್, ರಂಜಿತ್ ಸರ್ಕಾರ್, ಕಾಶಿಮ್ ಎಸ್‌ಕೆ, ಸಮ್ರುಲ್ ಹಕ್, ಜಲ್ಲು ಸರ್ಕಾರ್, ಸಕಿರುಲ್ ಎಸ್‌ಎಲ್, ಮಸ್ರೇಕುಲ್ ಹಕ್, ಸೈದುರ್ ರೆಹಮಾನ್, ರಹೀಮ್ ಎಸ್‌ಕೆ, ಸುಮನ್ ಸರ್ಕಾರ್, ಸರಿಫುಲ್ ಎಸ್‌ಕೆ, ಜಯಂತುಲ್ ಸರ್ಕಾರ್, ಎಂಡಿ ಜಾಹಿದುಲ್ ಶೇಖ್, ಮಣಿರುಲ್ ನದಾಪ್, ಸೆಬುಲ್ ಮಿಯಾ, ಅಸಿಮ್ ಅಲಿ, ನೂರುಲ್ ಹಕ್ ಮತ್ತು ಸಾಹಿನ್ ಅಖ್ತರ್ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರು.
ಗಾಯಗೊಂಡವರನ್ನು ಕೋಲ್ಕತ್ತಾ ಮೂಲದ ನಾಜಿಮ್ ಹುಸೇನ್, ಕಿಸ್ನೋ ದಾಸ್ ಮತ್ತು ಸುಭಾ ಸರ್ದಾರ್ ಎಂದು ಗುರುತಿಸಲಾಗಿದ್ದು, ಅವರನ್ನು ಐಜ್ವಾಲ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.
ರಾಜ್ಯದ ರಾಜಧಾನಿ ಐಜ್ವಾಲ್‌ನಿಂದ 21 ಕಿಮೀ ದೂರದಲ್ಲಿರುವ ಸಾಯಿರಾಂಗ್‌ನಲ್ಲಿ ಬುಧವಾರ ಬೆಳಗ್ಗೆ 9:30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಸುಮಾರು 40 ಮಂದಿ ಕಾರ್ಮಿಕರು ಸ್ಥಳದಲ್ಲಿದ್ದರು ಎನ್ನಲಾಗಿದೆ.
Advertisement