ಎನ್‌ಸಿಪಿಯಲ್ಲಿ ಯಾವುದೇ ಒಡಕಿಲ್ಲ, ಅಜಿತ್ ನಮ್ಮ ನಾಯಕ: ಶರದ್ ಪವಾರ್

ತಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಎನ್‌ಸಿಪಿ ನಾಯಕರಾಗಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಶರದ್ ಪವಾರ್
ಶರದ್ ಪವಾರ್

ಬಾರಾಮತಿ: ತಮ್ಮ ಪಕ್ಷದಲ್ಲಿ ಯಾವುದೇ ಒಡಕಿಲ್ಲ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಎನ್‌ಸಿಪಿ ನಾಯಕರಾಗಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದ ಬಾರಾಮತಿಯಲ್ಲಿ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಅಜಿತ್ ನಮ್ಮ ನಾಯಕ, ಇದರಲ್ಲಿ ಯಾವುದೇ ಸಂಘರ್ಘವಿಲ್ಲ. ಎನ್ ಸಿಪಿಯಲ್ಲಿ ಯಾವುದೇ ಒಡಕಿಲ್ಲ. ಪಕ್ಷದಲ್ಲಿ ಒಡಕು ಹೇಗೆ ಸಂಭವಿಸುತ್ತದೆ? ಎಂದು ಪ್ರಶ್ನಿಸಿದರು.

ರಾಷ್ಟ್ರ ಮಟ್ಟದಲ್ಲಿ ದೊಡ್ಡ ಗುಂಪು ಪಕ್ಷದಿಂದ ಬೇರ್ಪಟ್ಟಾಗ ವಿಭಜನೆ ಸಂಭವಿಸುತ್ತದೆ. ಆದರೆ ಎನ್ ಸಿಪಿಯಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ ಎಂದರು. "ಹೌದು, ಕೆಲವು ನಾಯಕರು ವಿಭಿನ್ನ ನಿಲುವು ತೆಗೆದುಕೊಂಡರೆ ಅದನ್ನು ಒಡಕು ಎಂದು ಕರೆಯಲಾಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರು ಹಾಗೆ ಮಾಡಬಹುದು ಎಂದು ಶರದ್ ಪವಾರ್ ತಿಳಿಸಿದರು.

ಅಜಿತ್ ಪವಾರ್  'ಪಕ್ಷದ ಹಿರಿಯ ನಾಯಕ ಮತ್ತು ಶಾಸಕ' ಎಂದು ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ನಿನ್ನೆ ಹೇಳಿದ್ದರು. ಎನ್‌ಸಿಪಿ ವಿಭಜನೆಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಳೆ, ಶರದ್ ಪವಾರ್ ನೇತೃತ್ವದ ಬಣದಿಂದ ಕಾರ್ಯಕರ್ತರಿಂದ ಅಫಿಡವಿಟ್ ತೆಗೆದುಕೊಳ್ಳುವುದು ಪಕ್ಷದೊಳಗೆ ನಿರಂತರ ಪ್ರಕ್ರಿಯೆಯಾಗಿದೆ ಎಂದು ಹೇಳಿದರು.

ಅಜಿತ್ ಪವಾರ್  ಪಕ್ಷಕ್ಕೆ ವಿರುದ್ಧವಾದ ನಿಲುವು ತಳೆದಿದ್ದು, ಅವರ ವಿರುದ್ಧ ವಿಧಾನಸಭಾ ಸ್ಪೀಕರ್‌ಗೆ ದೂರು ನೀಡಿದ್ದೇವೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಸುಪ್ರಿಯಾ ಸುಳೆ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com