ಗೋವಾದ ರೆಸಾರ್ಟ್ ನಲ್ಲಿ ಪ್ರವಾಸಿ ಮಹಿಳೆ ಮೇಲೆ ಅತ್ಯಾಚಾರ; ಗುಜರಾತ್ ಮೂಲದ ವ್ಯಕ್ತಿಯ ಬಂಧನ

ಉತ್ತರ ಗೋವಾದ ಅಸ್ಸೋನೋರಾ ಗ್ರಾಮದ ರೆಸಾರ್ಟ್‌ನಲ್ಲಿ ಮಹಿಳಾ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗೋವಾ: ಉತ್ತರ ಗೋವಾದ ಅಸ್ಸೋನೋರಾ ಗ್ರಾಮದ ರೆಸಾರ್ಟ್‌ನಲ್ಲಿ ಮಹಿಳಾ ಪ್ರವಾಸಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. 

ಆಗಸ್ಟ್ 23 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು 47 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಲಕ್ಷ್ಮಣ್ ಶಿಯಾರ್ ಬಂಧಿತ ಆರೋಪಿಯಾಗಿದ್ದು, ಪ್ರವಾಸಕ್ಕಾಗಿ ಆತ ಗೋವಾಗೆ ಭೇಟಿ ನೀಡಿದ್ದ ಎನ್ನಲಾಗಿದೆ. 

ಸಂತ್ರಸ್ತೆ ಮತ್ತು ಆರೋಪಿ  ಈ ಹಿಂದೆ ವಿಮಾನದಲ್ಲಿ ಭೇಟಿಯಾಗಿ ಪರಸ್ಪರ ಸ್ನೇಹ ಬೆಳೆಸಿದ್ದರು. ಅವರ ಸಂಭಾಷಣೆಯ ಸಮಯದಲ್ಲಿ ಮಹಿಳೆಯ ಫೋನ್ ನಂಬರ್ ತೆಗೆದುಕೊಂಡಿದ್ದ ಆತ ನಂತರ ಆಕೆಯೊಂದಿಗೆ ಸಂಪರ್ಕದಲ್ಲಿದ್ದ 
ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಿವ್ಬಾ ದಳವಿ ಹೇಳಿದ್ದಾರೆ. 

"ಈ ವಾರದ ಆರಂಭದಲ್ಲಿ, ಸಂತ್ರಸ್ತೆ ಮತ್ತು ಪುರುಷ ಪ್ರತ್ಯೇಕವಾಗಿ ಗೋವಾಗೆ ಭೇಟಿ ನೀಡಿದ್ದರು. ಆಗಸ್ಟ್ 23 ರಂದು  ಮಹಿಳೆಯ ಫೋನ್‌ಗೆ ಕರೆ ಮಾಡಿರುವ ಆರೋಪಿ, ಅಲ್ಲಿನ ಸೌಕರ್ಯಗಳನ್ನು ತೋರಿಸುವ ನೆಪದಲ್ಲಿ ಅಸ್ಸೋನೋರಾದಲ್ಲಿ ತಾನು ತಂಗಿದ್ದ ರೆಸಾರ್ಟ್‌ಗೆ ಭೇಟಿ ನೀಡುವಂತೆ ಮನವೊಲಿಸಿದ್ದಾನೆ. ಮಹಿಳೆ ಏಕಾಂಗಿಯಾಗಿ ರೆಸಾರ್ಟ್‌ಗೆ ಭೇಟಿ ನೀಡಿದಾಗ ಆರೋಪಿ ಆಕೆಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ದಳವಿ ದೂರಿನಲ್ಲಿ ಆರೋಪಿಸಿದ್ದಾಳೆ. 

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸ್ ತಂಡಗಳನ್ನು ರಚಿಸಿ, ಉತ್ತರ ಗೋವಾದ ಮಾಪುಸಾ ಪಟ್ಟಣದ ಬಳಿಯ ಥಿವಿಮ್ ಗ್ರಾಮದಲ್ಲಿ ಆರೋಪಿಯನ್ನು  ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಸಂತ್ರಸ್ತೆಯ ವಯಸ್ಸನ್ನು ಪೊಲೀಸರು ನಿರ್ದಿಷ್ಟಪಡಿಸಿಲ್ಲ. ಅಸ್ಸೋನೋರಾ ಗ್ರಾಮವು ಪಣಜಿಯಿಂದ ಸುಮಾರು 40 ಕಿ.ಮೀ ದೂರದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com