ಶೋಭಾ ಯಾತ್ರೆಗೂ ಮುನ್ನ ಕೋಮು ಗಲಭೆ ಪೀಡಿತ ನುಹ್ ನಲ್ಲಿ ಅಂತರ್ಜಾಲ ಸಂಪರ್ಕ ಕಡಿತ, ಸೆಕ್ಷನ್ 144 ಜಾರಿ

ಹರ್ಯಾಣ ಸರ್ಕಾರ ಗಲಭೆ ಪೀಡಿತ ನುಹ್ ನಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದ್ದು ಸೆಕ್ಷನ್ 144 ಜಾರಿಗೊಳಿಸಿದೆ.
ನುಹ್ ಹಿಂಸಾಚಾರದ ದೃಶ್ಯಗಳು
ನುಹ್ ಹಿಂಸಾಚಾರದ ದೃಶ್ಯಗಳು

ಚಂಡೀಗಢ: ಹರ್ಯಾಣ ಸರ್ಕಾರ ಗಲಭೆ ಪೀಡಿತ ನುಹ್ ನಲ್ಲಿ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗಿದ್ದು ಸೆಕ್ಷನ್ 144 ಜಾರಿಗೊಳಿಸಿದೆ.

ಶೋಭಾ ಯಾತ್ರೆಗೆ ಕರೆ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಆ.28 ವರೆಗೆ ಮೊಬೈಲ್ ಇಂಟರ್ ನೆಟ್ ಸೇವೆಗಳು, ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸೋಮವಾರದಂದು ರ್ಯಾಲಿ ನಡೆಯಲಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹಬ್ಬುವುದನ್ನು ತಡೆಗಟ್ಟಲು ಹರ್ಯಾಣ ಸರ್ಕಾರ ಈ ಕ್ರಮ ಕೈಗೊಂಡಿದೆ. 

ಜುಲೈನಲ್ಲಿ ಕೋಮುಗಲಭೆಯ ನಂತರ ನಂತರ ಆಗಸ್ಟ್ 28 ರಂದು ಜಿಲ್ಲೆಯಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲು ನುಹ್ ಅಧಿಕಾರಿಗಳು ಇತ್ತೀಚೆಗೆ ಅನುಮತಿ ನಿರಾಕರಿಸಿದ್ದರು.

ಜಿಲ್ಲಾಡಳಿತವು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದೆ, ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಪ್ರದೇಶದಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿದೆ.

ಆ.26 ರಿಂದ 28 ವರೆಗೆ ಈ ಆದೇಶ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಯಾವುದೇ ವ್ಯಕ್ತಿಗಳು ಪರವಾನಗಿ ಪಡೆದ ಬಂದೂಕುಗಳು, ಲಾಠಿಗಳು, ಕೊಡಲಿಗಳು ಮತ್ತು ಇತರ ಆಯುಧಗಳನ್ನು ಸಾಗಿಸಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com