'ಚಂದ್ರನನ್ನು ಹಿಂದೂ ರಾಷ್ಟ್ರವೆಂದು, ಚಂದ್ರಯಾನ-3 ಇಳಿದ ಕೇಂದ್ರವನ್ನು ಅದರ ರಾಜಧಾನಿ ಎಂದು ಘೋಷಿಸಿ': ಸ್ವಾಮಿ ಚಕ್ರಪಾಣಿ ಮಹಾರಾಜ

ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ ಮತ್ತು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಳಿದ ಕೇಂದ್ರ ವನ್ನು ಅದರ ರಾಜಧಾನಿಯನ್ನಾಗಿ ಘೋಷಿಸಿ ಇದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಅವರ ವಿಚಿತ್ರ ಬೇಡಿಕೆ. 
ಸ್ವಾಮಿ ಚಕ್ರಪಾಣಿ ಮಹಾರಾಜ
ಸ್ವಾಮಿ ಚಕ್ರಪಾಣಿ ಮಹಾರಾಜ
Updated on

ನವದೆಹಲಿ: ಚಂದ್ರನನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಿ ಮತ್ತು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇಳಿದ ಕೇಂದ್ರ ವನ್ನು ಅದರ ರಾಜಧಾನಿಯನ್ನಾಗಿ ಘೋಷಿಸಿ ಇದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಅವರ ವಿಚಿತ್ರ ಬೇಡಿಕೆ. 

ಚಂದ್ರಯಾನ-3 ಯಶಸ್ವಿ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತಿರುವಾಗ, ರಾಜಕೀಯ ಪಕ್ಷಗಳು ಇದರ ಕ್ರೆಡಿಟ್ ನ್ನು ತೆಗೆದುಕೊಳ್ಳಲು ಒಂದೆಡೆ ಪ್ರಯತ್ನಿಸುತ್ತಿದ್ದರೆ ಇತರ ಧರ್ಮಗಳು ಮಾಡುವ ಮೊದಲು ಭಾರತ ಸರ್ಕಾರವು ಚಂದ್ರನ ಮಾಲೀಕತ್ವವನ್ನು ಪ್ರತಿಪಾದಿಸಬೇಕೆಂದು ಕರೆ ನೀಡಿದ್ದಾರೆ ಮತ್ತು ಸಂಸತ್ತು ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.

ಕಳೆದ ವಾರ ಇಸ್ರೋದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ, ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ ಪಾಯಿಂಟ್' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಇಸ್ರೊ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿದ್ದರು. 

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಸ್ವಾಮಿ ಚಕ್ರಪಾಣಿ ಮಹಾರಾಜ್, ಯಾವುದೇ ಭಯೋತ್ಪಾದಕ ಅಲ್ಲಿಗೆ ತಲುಪದಂತೆ ಭಾರತ ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. 

'ಚಂದ್ರನನ್ನು ಸಂಸತ್ತು ಹಿಂದೂ ಸನಾತನ ರಾಷ್ಟ್ರ ಎಂದು ಘೋಷಿಸಬೇಕು. ಚಂದ್ರಯಾನ 3 ಇಳಿಯುವ ಸ್ಥಳವನ್ನು ಅದರ ರಾಜಧಾನಿ' ಶಿವಶಕ್ತಿ ಪಾಯಿಂಟ್' ಆಗಿ ಅಭಿವೃದ್ಧಿಪಡಿಸಬೇಕು. ಇದರಿಂದ ಜಿಹಾದಿ ಮನಸ್ಥಿತಿಯ ಯಾವುದೇ ಭಯೋತ್ಪಾದಕ ಅಲ್ಲಿಗೆ ತಲುಪಬಾರದು' ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.

ಸ್ವಾಮಿ ಚಕ್ರಪಾಣಿಯವರಿಗೆ ವಿಲಕ್ಷಣ ಹೇಳಿಕೆಗಳು ಹೊಸದೇನಲ್ಲ. 2020 ರಲ್ಲಿ, ದೇಶವು ಕೊರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವಾಗ, ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೋಮೂತ್ರ ಪಾರ್ಟಿಯನ್ನು ಆಯೋಜಿಸಿದರು. ಅಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ರೋಗವನ್ನು ನಿವಾರಿಸಲು ಗೋಮೂತ್ರವನ್ನು ಸೇವಿಸಿದರು.

'ಪ್ರಾಣಿಗಳನ್ನು ಕೊಂದು ತಿನ್ನುವ ಜನರಿಂದಾಗಿ ಕೊರೊನಾವೈರಸ್ ಬಂದಿದೆ. ನೀವು ಪ್ರಾಣಿಯನ್ನು ಕೊಂದಾಗ, ಅದು ಆ ಸ್ಥಳದಲ್ಲಿ ವಿನಾಶವನ್ನು ಉಂಟುಮಾಡುವ ಒಂದು ರೀತಿಯ ಶಕ್ತಿಯನ್ನು ಸೃಷ್ಟಿಸುತ್ತದೆ' ಎಂದು ಹೇಳಿದ್ದರು. ಜಾಗತಿಕ ನಾಯಕರು ಭಾರತದಿಂದ ಗೋಮೂತ್ರವನ್ನು ಆಮದು ಮಾಡಿಕೊಳ್ಳಬೇಕು ಏಕೆಂದರೆ ಸರ್ವಶಕ್ತನು ಭಾರತೀಯ ಹಸುಗಳಲ್ಲಿ ಮಾತ್ರ ವಾಸಿಸುತ್ತಾನೆ ಮತ್ತು ಯಾವುದೇ ವಿದೇಶಿ ತಳಿಯಲ್ಲಿ ಅಲ್ಲ ಎಂದಿದ್ದಾರೆ.

2018 ರಲ್ಲಿ, ಕೇರಳದಲ್ಲಿ ವಿನಾಶಕಾರಿ ಪ್ರವಾಹದ ಸಂದರ್ಭದಲ್ಲಿ, ಸ್ವಾಮಿ ಚಕ್ರಪಾಣಿ ಅವರು ರಾಜ್ಯದಲ್ಲಿ ಗೋಮಾಂಸ ತಿನ್ನುವವರಿಗೆ ಯಾವುದೇ ಸಹಾಯವನ್ನು ಮಾಡಬಾರದು ಎಂದು ಹೇಳಿದ್ದರು. ಈ ವರ್ಷದ ಆರಂಭದಲ್ಲಿ, ಅವರು ಹಿಂದೂ ಧರ್ಮವನ್ನು ಅವಮಾನಿಸುವ ಬಾಲಿವುಡ್ ಚಲನಚಿತ್ರಗಳು, ವೆಬ್‌ಸರಣಿ ಸಂಗೀತ ವೀಡಿಯೊಗಳು ಇತ್ಯಾದಿಗಳಲ್ಲಿನ ವಿಷಯವನ್ನು ಮೇಲ್ವಿಚಾರಣೆ ಮಾಡಲು 'ಧರ್ಮ ಸೆನ್ಸಾರ್ ಮಂಡಳಿ' ಯನ್ನು ಸ್ಥಾಪಿಸಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com