ಹುಲಿ ಘರ್ ವಾಪ್ಸಿ: ನಾಲ್ಕು ರಾಜ್ಯಗಳಲ್ಲಿ ಆಶ್ರಯ ಪಡೆಯಲು ವಿಫಲವಾದ ನಂತರ ಉತ್ತರಾಖಂಡ್ ಗೆ ಮರಳಿದ ವ್ಯಾಘ್ರ

ಒಂದು ವರ್ಷದ ಹಿಂದೆ ಉತ್ತರಾಖಂಡದಿಂದ ವಲಸೆ ಹೋಗಿದ್ದ ವ್ಯಾಘ್ರವೊಂದು ನಾಲ್ಕು ರಾಜ್ಯಗಳಲ್ಲಿ ಯಾವುದೇ ರಕ್ಷಣಾತ್ಮಕ ಆಶ್ರಯವನ್ನು ಪಡೆಯುವಲ್ಲಿ ವಿಫಲವಾದ ನಂತರ ತನ್ನ ಸ್ವಂತ ರಾಜ್ಯಕ್ಕೆ ಮರಳುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಒಂದು ವರ್ಷದ ಹಿಂದೆ ಉತ್ತರಾಖಂಡದಿಂದ ವಲಸೆ ಹೋಗಿದ್ದ ವ್ಯಾಘ್ರವೊಂದು ನಾಲ್ಕು ರಾಜ್ಯಗಳಲ್ಲಿ ಯಾವುದೇ ರಕ್ಷಣಾತ್ಮಕ ಆಶ್ರಯವನ್ನು ಪಡೆಯುವಲ್ಲಿ ವಿಫಲವಾದ ನಂತರ ತನ್ನ ಸ್ವಂತ ರಾಜ್ಯಕ್ಕೆ ಮರಳುತ್ತಿದೆ. 

ಉತ್ತರಾಖಂಡ ಬಿಟ್ಟು ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶದಿಂದ ನೂರಾರು ಕಿಲೋಮೀಟರ್ ಕ್ರಮಿಸಿ ಈಗ ಉತ್ತರಾಖಂಡಕ್ಕೆ ಮರಳುತ್ತಿದೆ ಎಂದು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಸಾಕೇತ್ ಬಡೋಲಾ ಅವರು ಹೇಳಿದ್ದಾರೆ. 

"ಯಮುನೆಯ ನೀರಿನ ಮಟ್ಟ ಕಡಿಮೆಯಾದ ನಂತರ ಹುಲಿ ರಾಜಾಜಿ ಪ್ರದೇಶಕ್ಕೆ ಮರಳಬಹುದು ಎಂದು ಹೇಳಿರುವ ಅವರು ನಾಲ್ಕು ರಾಜ್ಯಗಳ ಮೂಲಕ ಹುಲಿಯು ಅತೀ ದೂರಕ್ಕೆ ವಲಸೆ ಹೋಗಿದ್ದರು ಇದೀಗ ಸುರಕ್ಷಿತವಾಗಿ ಹಿಂತಿರುಗುವುದು ಅದರ ಅನುವಂಶಿಕ ಶ್ರೇಷ್ಠತೆಯನ್ನು ತೋರಿಸುತ್ತದೆ ಎಂದು ಬಡೋಲಾ ಹೇಳಿದರು. ಹಿಮಾಚಲ ಪ್ರದೇಶದಲ್ಲಿನ ರೇಣುಕಾ ಕಾಡಿನಲ್ಲಿ ಟ್ರ್ಯಾಪ್ ಕ್ಯಾಮೆರಾದಲ್ಲಿ ಹುಲಿಯ ಚಿತ್ರಗಳು ಸೆರೆಯಾಗಿವೆ ಎಂದರು.

ಹುಲಿಯು ಮೊದಲು ಗಂಗಾ ನದಿಯನ್ನು ದಾಟಿ ಆರ್‌ಟಿಆರ್‌ನ ಗೌಹಾರಿ ಮತ್ತು ಚಿಲ್ಲಾ ಶ್ರೇಣಿಯ ಮೂಲಕ ಮೀಸಲು ಪ್ರದೇಶದ ಮೋತಿಚೂರ್ ಶ್ರೇಣಿಯನ್ನು ತಲುಪಿತು. ಇದರ ನಂತರ, ಫೆಬ್ರವರಿಯಲ್ಲಿ ಇದು ಪೌಂಟಾ-ರೇಣುಕಾ ಸಿಂಬಲ್ವಾಡಾ ವನ್ಯಜೀವಿ ಅಭಯಾರಣ್ಯದಲ್ಲಿದೆ ಎಂದು ವರದಿಯಾಗಿತ್ತು. ಆನಂತರ ಮೇ ತಿಂಗಳಲ್ಲಿ ಹುಲಿ ಹರಿಯಾಣದ ಕಲೇಸರ್ ವನ್ಯಜೀವಿ ಅಭಯಾರಣ್ಯದಲ್ಲಿದೆ ಎಂದು ವರದಿಯಾಗಿದೆ.

ಈಗ ಹಿಮಾಚಲ ಪ್ರದೇಶದ ರೇಣುಕಾ ಅರಣ್ಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಆಗಸ್ಟ್ ಮಧ್ಯದಲ್ಲಿ ಹುಲಿ ಅಲ್ಲಿಗೆ ಬಂದಿದೆ. ಟ್ರ್ಯಾಪ್ ಕ್ಯಾಮೆರಾದಲ್ಲಿ ಹುಲಿ ಕಾಣಿಸಿಕೊಂಡಿರುವುದನ್ನು ಹಿಮಾಚಲ ಪ್ರದೇಶ ಅರಣ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಕಾಡುಗಳಿಗೆ ಹುಲಿ ಮರಳಿರುವುದು ಆರ್‌ಟಿಆರ್‌ನಲ್ಲಿ ತನ್ನ ಹಿಂದಿನ ಆವಾಸಸ್ಥಾನಕ್ಕೆ ಹೋಗುತ್ತಿದೆ ಎಂದು ಸೂಚಿಸುತ್ತದೆ ಎಂದು ಬಡೋಲಾ ಹೇಳಿದರು.

ಆಶ್ರಯ ಹುಡುಕಿಕೊಂಡು ನೂರಾರು ಕಿಲೋಮೀಟರ್ ವಲಸೆ
ಆರ್‌ಟಿಆರ್ ನಿರ್ದೇಶಕ ಬಡೋಲಾ ಪ್ರಕಾರ, ನಾಲ್ಕು ರಾಜ್ಯಗಳಲ್ಲಿ ಹುಲಿ ಮಾಡಿದ ದೂರದ ವಲಸೆ ಮತ್ತು ಸುರಕ್ಷಿತವಾಗಿ ಮರಳಿರುವುದು ಅದರ ಅನುವಂಶಿಕ ಶ್ರೇಷ್ಠತೆಯನ್ನು ತೋರಿಸುತ್ತದೆ. ಹೊಸ ಆವಾಸಸ್ಥಾನಗಳ ಹುಡುಕಾಟದಲ್ಲಿ ಗಂಡು ಹುಲಿಗಳು ದೂರದವರೆಗೆ ವಲಸೆ ಹೋಗುವ ಪ್ರವೃತ್ತಿಯು ಉತ್ತಮ ಸಂಕೇತವೆಂದು ಕಂಡುಬರುತ್ತದೆ.

ಕಾರಿಡಾರ್ ಜೀವಂತವಾಗಿದೆ, ಬಹುಶಃ ಹೊಸ ಸ್ಥಳವನ್ನು ಇಷ್ಟಪಡಲಿಲ್ಲ
ಹೊಸ ಆವಾಸಸ್ಥಾನಗಳ ಹುಡುಕಾಟದಲ್ಲಿ ಹುಲಿಗಳು ಸಾಮಾನ್ಯವಾಗಿ ದೂರದವರೆಗೆ ಪ್ರಯಾಣಿಸುತ್ತವೆ. ಈ ಸಮಯದಲ್ಲಿ, ಅವು ಹೊಸ ಆವಾಸಸ್ಥಾನ ಮಾನವ ಹಸ್ತಕ್ಷೇಪವಿಲ್ಲದೆ ಸುರಕ್ಷಿತವಾಗಿದೆ ಎಂದು ಕಂಡುಕೊಂಡರೆ ಮತ್ತು ಆಹಾರ ಮತ್ತು ನೀರಿನ ಸಾಕಷ್ಟು ಲಭ್ಯತೆಯೊಂದಿಗೆ ಬದುಕುಳಿಯುವ ಇತರ ನಿಯತಾಂಕಗಳು ಸರಿಯಾಗಿದ್ದರೆ, ನಂತರ ಅವು ಅದನ್ನು ಅಳವಡಿಸಿಕೊಳ್ಳುತ್ತವೆ. ಇಷ್ಟೇಲ್ಲ ಇಲ್ಲ ಎಂದು ತೋರಿದರೆ ಅವು ತಮ್ಮ ಹಿಂದಿನ ಆವಾಸಸ್ಥಾನಕ್ಕೆ ಹಿಂತಿರುಗುತ್ತವೆ. ಉತ್ತರಾಖಂಡ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಹರಿಯಾಣದ ಮೂಲಕ ಸುದೀರ್ಘ ಮತ್ತು ಅಡೆತಡೆಯಿಲ್ಲದ ಹುಲಿ ವಲಸೆಯು ನಾಲ್ಕು ರಾಜ್ಯಗಳ ಮೂಲಕ ಹಾದುಹೋಗುವ ಕಾರಿಡಾರ್ ಜೀವಂತವಾಗಿದೆ ಎಂದು ಸೂಚಿಸುತ್ತದೆ ಎಂದು ಬಡೋಲಾ ಹೇಳಿದರು.

ಹುಲಿಯ ಚಲನವಲನದ ಮೇಲೆ ನಿರಂತರ ನಿಗಾ
ನಿರ್ದೇಶಕ ಡಾ.ಬಡೋಲಾ ಮಾತನಾಡಿ, ಹಿಮಾಚಲ ಅರಣ್ಯ ಇಲಾಖೆ ಹುಲಿಯ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದು, ಇದು ಸಂಪೂರ್ಣ ಆರೋಗ್ಯವಾಗಿದೆ. ಉತ್ತರಾಖಂಡ ಅರಣ್ಯ ಇಲಾಖೆಯೂ ಹುಲಿಯ ಬಗ್ಗೆ ಮಾಹಿತಿ ಪಡೆಯುತ್ತಿದೆ. ಆರಂಭದಲ್ಲಿ ಹುಲಿಯ ಹೆಜ್ಜೆ ಗುರುತು ಪತ್ತೆಯಾದ ನಂತರ ಉತ್ತರಾಖಂಡ ಅರಣ್ಯ ಇಲಾಖೆ ಕ್ಯಾಮೆರಾ ಟ್ರ್ಯಾಪ್ ಅಳವಡಿಸಿತ್ತು. ಇದಾದ ನಂತರ ಹಿಮಾಚಲ ಅರಣ್ಯ ಇಲಾಖೆಯಿಂದ ಇನ್ನೂ ಕೆಲವು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದ್ದು, ಹುಲಿಯ ಮೇಲೆ ನಿಗಾ ಇಡಲಾಗಿದೆ. ಉತ್ತರಾಖಂಡ ಅರಣ್ಯ ಇಲಾಖೆಯಿಂದ ಅರಣ್ಯ ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com