ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಯಿಂದ ಅದಾನಿ ಸಮೂಹಕ್ಕೆ ಅನಗತ್ಯ ಲಾಭವಿಲ್ಲ: ಹೈಕೋರ್ಟ್‌ಗೆ 'ಮಹಾ' ಸರ್ಕಾರ

ಮುಂಬೈನ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಗೆ 2022ರಲ್ಲಿ ನೀಡಲಾದ ಹೊಸ ಟೆಂಡರ್ ಪಾರದರ್ಶಕವಾಗಿದೆ. ಅತಿ ಹೆಚ್ಚು ಬಿಡ್ ಮಾಡಿದ ಅದಾನಿ ಗ್ರೂಪ್‌ಗೆ ಇದರಿಂದ ಯಾವುದೇ ಅನಗತ್ಯ ಲಾಭವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಧಾರಾವಿ ಕೊಳೆಗೇರಿ ಯೋಜನೆ
ಧಾರಾವಿ ಕೊಳೆಗೇರಿ ಯೋಜನೆ
Updated on

ಮುಂಬೈನ ಧಾರಾವಿ ಕೊಳೆಗೇರಿ ಪುನರಾಭಿವೃದ್ಧಿ ಯೋಜನೆಗೆ 2022ರಲ್ಲಿ ನೀಡಲಾದ ಹೊಸ ಟೆಂಡರ್ ಪಾರದರ್ಶಕವಾಗಿದೆ. ಅತಿ ಹೆಚ್ಚು ಬಿಡ್ ಮಾಡಿದ ಅದಾನಿ ಗ್ರೂಪ್‌ಗೆ ಇದರಿಂದ ಯಾವುದೇ ಅನಗತ್ಯ ಲಾಭವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಅದಾನಿ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್‌ಗೆ ಯೋಜನೆಯನ್ನು ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಯುಎಇ ಮೂಲದ ಕಂಪನಿ ಸೆಕ್ಲಿಂಕ್ ಟೆಕ್ನಾಲಜೀಸ್ ಕಾರ್ಪೊರೇಷನ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸರ್ಕಾರವು ಈ ತಿಂಗಳ ಆರಂಭದಲ್ಲಿ ತನ್ನ ಅಫಿಡವಿಟ್ ಅನ್ನು ಸಲ್ಲಿಸಿದೆ.

ಅರ್ಜಿದಾರರು ಯಾವುದೇ ಆಧಾರ ಅಥವಾ ವಸ್ತು ಸ್ಥಿತಿ ಇಲ್ಲದೆ, ರಾಜಕೀಯ ಪ್ರೇರಿತವಾಗಿದೆ. ಆಧಾರರಹಿತ ಮತ್ತು ಅಜಾಗರೂಕ ಆರೋಪಗಳನ್ನು ಮಾಡಿದ್ದಾರೆ. ಏಕೆಂದರೆ ವಾಸ್ತವದಲ್ಲಿ ಯಾವುದೂ ಅಸ್ತಿತ್ವದಲ್ಲಿಲ್ಲ ಎಂದು ಅಫಿಡವಿಟ್ ಹೇಳಿದೆ. ಅಂತಹ ಅಜಾಗರೂಕ ಆರೋಪಗಳನ್ನು ಮಾಡಿದ್ದಕ್ಕಾಗಿ, ರಿಟ್ ಅರ್ಜಿಯನ್ನು ವೆಚ್ಚದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ ಎಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ವಿಭಾಗೀಯ ಪೀಠವು ಗುರುವಾರ ಅರ್ಜಿಯ ವಿಚಾರಣೆ ನಡೆಸಲಿದೆ. ಹಳೆಯ ಟೆಂಡರ್ ರದ್ದತಿ ರಾಜಕೀಯ ಪ್ರೇರಿತ ಎಂದು ಅರ್ಜಿದಾರ ಕಂಪನಿ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿದೆ ಎಂದು ರಾಜ್ಯ ವಸತಿ ಇಲಾಖೆಯ ಉಪ ಕಾರ್ಯದರ್ಶಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಲಾಗಿದ್ದು, ಈ ಆರೋಪಗಳನ್ನು ನಿರಾಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com