ನನಗೆ ದೇಶದಲ್ಲಿ ಕಾಣುವುದು ಕೇವಲ ನಾಲ್ಕು ಜಾತಿಗಳು, ಅದು ಬಡವರು, ಯುವಕರು, ಮಹಿಳೆಯರು ಮತ್ತು ರೈತರು: ಪ್ರಧಾನಿ ಮೋದಿ

ಹಿಂದಿನ ಬಿಜೆಪಿಯೇತರ ಸರಕಾರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. ನಿನ್ನೆ ದೆಹಲಿಯಿಂದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಅಂಗವಾಗಿ ಸರ್ಕಾರದ ವಿವಿಧ ಕಲ್ಯಾಣ ಫಲಾನುಭವಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ತಮ್ಮನ್ನು ತಾವು ಜನರಿಗಿಂತ (ಜಂತಾ ಕಾ ಮಾಯ್-ಬಾಪ್) ಮೇಲೆ ಎಂದು ಪರಿಗಣಿಸಿ ಬಹುಪಾಲು ಜನರ ಹಕ್ಕ
ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೊ ಸಂವಾದ
ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ವಿಡಿಯೊ ಸಂವಾದ

ನವದೆಹಲಿ: ಹಿಂದಿನ ಬಿಜೆಪಿಯೇತರ ಸರಕಾರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿದ್ದಾರೆ. ನಿನ್ನೆ ದೆಹಲಿಯಿಂದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಅಂಗವಾಗಿ ಸರ್ಕಾರದ ವಿವಿಧ ಕಲ್ಯಾಣ ಫಲಾನುಭವಿಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ತಮ್ಮನ್ನು ತಾವು ಜನರಿಗಿಂತ (ಜಂತಾ ಕಾ ಮಾಯ್-ಬಾಪ್) ಮೇಲೆ ಎಂದು ಪರಿಗಣಿಸಿ ಬಹುಪಾಲು ಜನರ ಹಕ್ಕುಗಳನ್ನು ಕಸಿದುಕೊಂಡಿವೆ ಎಂದು ಆರೋಪಿಸಿದರು.

ತಮ್ಮ ಸರ್ಕಾರಕ್ಕೆ ಕೇವಲ ನಾಲ್ಕು 'ಜಾತಿಗಳು' ಮುಖ್ಯವಾಗಿವೆ. ಅವು ಬಡವರು, ಯುವಕರು, ಮಹಿಳೆಯರು ಮತ್ತು ರೈತರು. ಅಭಿವೃದ್ಧಿಗೆ ಅವರ ಹಕ್ಕುಗಳನ್ನು ಖಾತ್ರಿಪಡಿಸುವ ಮೂಲಕ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದರು. 

ಕಳೆದೊಂದು ದಶಕದಲ್ಲಿ ತಮ್ಮ ಸರ್ಕಾರ ಮಾಡುತ್ತಿರುವ ಕೆಲಸದಿಂದ ದೇಶದ ಜನರಿಗೆ ನಂಬಿಕೆ ಹೆಚ್ಚಾಗಿದೆ. ಹಿಂದಿನ ಸರ್ಕಾರಗಳು "ಮೈ ಬಾಪ್" ನಂತೆ ವರ್ತಿಸುವ ಮನೋಭಾವವನ್ನು ಹೊಂದಿದ್ದವು ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದವು.ಬಿಜೆಪಿ ಸರ್ಕಾರ ಬಂದ ಮೇಲೆ ನಾವು ಅಂತಹ ಮನೋಭಾವವನ್ನು ಕಿತ್ತುಹಾಕಿದ್ದೇವೆ. ದೇಶದ ಜನತೆ ಕಳೆದೊಂದು ದಶಕದಲ್ಲಿ ಅಭಿವೃದ್ಧಿಯನ್ನು ಕಂಡಿದ್ದಾರೆ ಎಂದರು. ಕೇಂದ್ರದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನು ಕೇವಲ 5-6 ತಿಂಗಳುಗಳು ಮಾತ್ರ ಇರುವಾಗ ಈ ಹೇಳಿಕೆ ನೀಡಿದ್ದು ಸುದ್ದಿಯಾಗುತ್ತಿದೆ. 

ಹಿಂದಿಯಲ್ಲಿ 'ಮೈ-ಬಾಪ್' ಪದವು ಎಲ್ಲರಿಗಿಂತ ತನ್ನನ್ನು ತಾನು ಶ್ರೇಷ್ಠ, ದೊಡ್ಡವನು ಎಂದು ಯೋಚಿಸುವ ವ್ಯಕ್ತಿಯ ಊಳಿಗಮಾನ್ಯ ಮನಸ್ಥಿತಿಯನ್ನು ಸೂಚಿಸುತ್ತದೆ. ಹಿಂದಿನ ಆಡಳಿತದಲ್ಲಿ ಮಧ್ಯವರ್ತಿಗಳ ಸಂಸ್ಕೃತಿ ಹರಡಿತ್ತು ಎಂದು ಪ್ರಧಾನಿ ಹೇಳಿದರು. ಮಧ್ಯವರ್ತಿಗಳಿಲ್ಲದೆ, ಜನರಿಗೆ ಯಾವುದೇ ಕೆಲಸವಾಗುತ್ತಿರಲಿಲ್ಲ ಎಂದು ದೂರಿದರು. 

ಬಡವರಿಗೆ ಮನೆ ಇರಲಿಲ್ಲ, ಶೌಚಾಲಯವಿಲ್ಲ, ವಿದ್ಯುತ್ ಮತ್ತು ಅನಿಲ ಸಂಪರ್ಕವಿಲ್ಲ, ಮತ್ತು ಬ್ಯಾಂಕ್ ಖಾತೆಗಳಿಲ್ಲ. ಭಾರತದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಸರ್ಕಾರದಿಂದ ನಿರಾಸೆ ಅನುಭವಿಸಿದ್ದರು ಎಂದು ಅವರು ಹಿಂದಿನ ಸರ್ಕಾರಗಳ ಮೇಲೆ ದಾಳಿ ಮಾಡಿದರು. 

ಫಲಾನುಭವಿಗಳೊಂದಿಗಿನ ಸಂವಾದದಲ್ಲಿ, ಕಳೆದ 10 ವರ್ಷಗಳಲ್ಲಿ ಅವರ ಸರ್ಕಾರವನ್ನು ನಂಬಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಪರಿವರ್ತಿಸಲು ಜನರು ಸಂಕಲ್ಪ ಮಾಡಿರುವುದರಿಂದ ಭಾರತವು ಇನ್ನು ಮುಂದೆ ಅಭಿವೃದ್ಧಿಯಲ್ಲಿ ನಿಲ್ಲುವುದಿಲ್ಲ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com