ನವದೆಹಲಿ: ಶನಿವಾರ ಬೆಳಗ್ಗೆ ಹವಾಮಾನ ವೈಪರೀತ್ಯದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 18 ವಿಮಾನಗಳನ್ನು ಸಂಚಾರ ಮಾರ್ಗ ಬದಲಿಸಲಾಗಿದೆ.
ವಿಮಾನಗಳನ್ನು ಜೈಪುರ, ಲಕ್ನೋ, ಅಹಮದಾಬಾದ್ ಮತ್ತು ಅಮೃತಸರಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ 8.10 ಗಂಟೆ ಸುಮಾರಿಗೆ ಟ್ವೀಟ್ ನಲ್ಲಿ, ದೆಹಲಿ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದ ಗೋಚರತೆ ಕಡಿಮೆಯಾಗಿದೆ ಎಂದು ಬರೆಯಲಾಗಿತ್ತು.
Advertisement