ಸೆಮಿ ಫೈನಲ್ ಕದನ, 4 ರಾಜ್ಯಗಳ ಚುನಾವಣೆ ಫಲಿತಾಂಶ: ಮಧ್ಯ ಪ್ರದೇಶ, ರಾಜಸ್ತಾನದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ

2024 ರ ಮೆಗಾ ಫೈನಲ್‌ ಅಂದರೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಸೆಮಿಫೈನಲ್ ಎಂದು ಬಿಂಬಿಸಲಾದ ಅಂತಿಮ ಹಂತದಲ್ಲಿ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣ -- ನಾಲ್ಕು ರಾಜ್ಯಗಳ ವಿಧಾನಸಭಾ ಮತ ಬಿಗಿ ಭದ್ರತೆಯ ನಡುವೆ ಭಾನುವಾರ 8 ಗಂಟೆಗೆ ಆರಂಭಗೊಂಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: 2024 ರ ಮೆಗಾ ಫೈನಲ್‌ ಅಂದರೆ ಸಾರ್ವತ್ರಿಕ ಚುನಾವಣೆಗೆ ಮುನ್ನ ಸೆಮಿಫೈನಲ್ ಎಂದು ಬಿಂಬಿಸಲಾದ ಅಂತಿಮ ಹಂತದಲ್ಲಿ, ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ತೆಲಂಗಾಣ -- ನಾಲ್ಕು ರಾಜ್ಯಗಳ ವಿಧಾನಸಭಾ ಮತ ಬಿಗಿ ಭದ್ರತೆಯ ನಡುವೆ ಭಾನುವಾರ 8 ಗಂಟೆಗೆ ಆರಂಭಗೊಂಡಿದೆ. 

ಕಳೆದ ತಿಂಗಳು ಇತರ ನಾಲ್ಕು ರಾಜ್ಯಗಳೊಂದಿಗೆ ಚುನಾವಣೆ ನಡೆದ ಮಿಜೋರಾಂನ ಮತಗಳ ಎಣಿಕೆಯನ್ನು ನಾಳೆ ಸೋಮವಾರಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದೆ. 

ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ವ್ಯಾಪಿಸಿರುವ ಐದು ರಾಜ್ಯಗಳ ಮತದಾನವು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಹೋಗುವ ರಾಜಕೀಯ ನಾಯಕರಿಗೆ ನಿರ್ಣಾಯಕವಾಗಿರುತ್ತದೆ. ಮಧ್ಯಪ್ರದೇಶದ 230, ಛತ್ತೀಸ್‌ಗಢದ 90, ತೆಲಂಗಾಣದ 119 ಮತ್ತು ರಾಜಸ್ಥಾನದ 199 ಸ್ಥಾನಗಳಿಗೆ ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್ ಅಭ್ಯರ್ಥಿ ನಿಧನದ ನಂತರ ರಾಜಸ್ಥಾನದ ಒಂದು ಸ್ಥಾನಕ್ಕೆ ಮತದಾನ ತಡೆಹಿಡಿಯಲಾಗಿತ್ತು. ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಳೆ ತಿಳಿಸಿದ್ದರು. 

ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಮತ ಎಣಿಕೆ ಕಾರ್ಯಕ್ಕೆ 90 ಚುನಾವಣಾಧಿಕಾರಿಗಳು, 416 ಸಹಾಯಕ ಚುನಾವಣಾಧಿಕಾರಿಗಳು, 4596 ಮತ ಎಣಿಕೆ ಸಿಬ್ಬಂದಿ ಹಾಗೂ 1698 ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಕಂಗಾಲೆ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಕುತೂಹಲ: ರಾಜಸ್ಥಾನ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ ಭಾನುವಾರ ತಮ್ಮ ಪಕ್ಷವು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮತ ಎಣಿಕೆ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಎಎನ್‌ಐ ಜೊತೆ ಮಾತನಾಡಿದ ದೋಟಸಾರಾ, ನಮ್ಮ ಉತ್ತಮ ಆಡಳಿತದಿಂದಾಗಿ ರಾಜಸ್ಥಾನದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಂಪೂರ್ಣ ನಂಬಿಕೆ ಮತ್ತು ಬೆಂಬಲವನ್ನು ತೋರಿಸಿದ್ದಾರೆ. ನಮ್ಮ ಭರವಸೆಗಳು ಮತ್ತು 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸಗಳು ನಮಗೆ ಮತ್ತೊಮ್ಮೆ ಅಧಿಕಾರ ನೀಡಲಿದೆ ಎಂದಿದ್ದಾರೆ. 

“ನಮ್ಮ ಪ್ರಣಾಳಿಕೆಯಲ್ಲಿ, ನಾವು 4 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ, ರೈತರಿಗೆ ಎಂಎಸ್‌ಪಿ ಮತ್ತು ತಿಂಗಳಿಗೆ 2000 ರೂಪಾಯಿಗಳ ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದೇವೆ. ಕೊರೋನಾ ಅವಧಿಯಲ್ಲಿ ನಾವು ಸರಿಯಾದ ನಿರ್ವಹಣೆಯನ್ನು ಖಚಿತಪಡಿಸಿದ್ದೇವೆ, ಜನರನ್ನು ನೋಡಿಕೊಂಡಿದ್ದೇವೆ ಮತ್ತು ಯಾರನ್ನೂ ಹಸಿವಿನಿಂದ ಮಲಗಲು ಬಿಡಲಿಲ್ಲ. ಆರೋಗ್ಯ ಹಕ್ಕು ಮತ್ತು ಕನಿಷ್ಠ ಆದಾಯ ಖಾತ್ರಿ ಕಾಯ್ದೆಯಂತಹ ಕಾನೂನುಗಳನ್ನು ಬಲವಂತವಾಗಿ ತರುವ ಮೂಲಕ ನಾವು ಜನರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com