ತೆಲಂಗಾಣ ಫಲಿತಾಂಶ: 'ಬಿಜೆಪಿಯ ವ್ಯಕ್ತಿ' ಸಿಎಂ ಆಗ್ತಾರಾ? ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಹಿನ್ನಲೆ!

ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಚಂದ್ರಶೇಖರ ರಾವ್ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತೀರಾ ಹಿಂದುಳಿದಿದೆ.
ಸೋನಿಯಾ-ರೇವಂತ್ ರೆಡ್ಡಿ
ಸೋನಿಯಾ-ರೇವಂತ್ ರೆಡ್ಡಿ

ತೆಲಂಗಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಟ್ರೆಂಡ್‌ಗಳಲ್ಲಿ ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಚಂದ್ರಶೇಖರ ರಾವ್ ಅವರ ಪಕ್ಷ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತೀರಾ ಹಿಂದುಳಿದಿದೆ. ರಾಜ್ಯದ ಒಟ್ಟು 119 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಡುವಿನ ಅಂತರ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಕೇವಲ 36 ಸ್ಥಾನಗಳಲ್ಲಿ ಮಾತ್ರ ಮುಂದಿದ್ದಾರೆ. 

ಮುಖ್ಯಮಂತ್ರಿ ಕೆಸಿಆರ್ ಅವರು ತಮ್ಮ ವಿಧಾನಸಭಾ ಕ್ಷೇತ್ರ ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೇವಂತ್ ರೆಡ್ಡಿ ಅವರಿಗಿಂತ ಹಿಂದೆ ಸರಿಯುತ್ತಿದ್ದಾರೆ. ರೆಡ್ಡಿ ಅವರು ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನತ್ತ ಸಾಗುತ್ತಿರುವುದರ ಹಿಂದೆ ರೇವಂತ್ ರೆಡ್ಡಿ ತಂತ್ರಗಾರಿಕೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇದೇ ವೇಳೆ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಯೂ ಆರಂಭವಾಗಿದೆ. ಈ ರೇಸ್ ನಲ್ಲಿ ರೆಡ್ಡಿ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.

54 ವರ್ಷದ ರೇವಂತ್ ರೆಡ್ಡಿ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ರೆಡ್ಡಿ ಸದ್ಯ ಲೋಕಸಭಾ ಸದಸ್ಯರೂ ಆಗಿದ್ದಾರೆ. ಆದರೆ, ಅವರ ಹೆಸರನ್ನು ತೆಲಂಗಾಣದ ಭವಿಷ್ಯದ ಸಿಎಂ ಎಂದು ಕಾಂಗ್ರೆಸ್ ಮುಂದಿಡುತ್ತಿದೆ. ಆದರೆ, ಕೆಲವರು ರೇವಂತ್ ರೆಡ್ಡಿಯನ್ನು ‘ಬಿಜೆಪಿಯವರು’ ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯೊಂದಿಗೆ ರೆಡ್ಡಿ ಅವರ ಹಿನ್ನೆಲೆ ಇರುವುದು. ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವಿಭಜಿತ ಆಂಧ್ರಪ್ರದೇಶದ ಅವಧಿಯಲ್ಲಿ, ರೆಡ್ಡಿ ಕೊಡಂಗಲ್ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಇದಾದ ನಂತರ 2009 ಮತ್ತು 2014ರಲ್ಲಿ ಟಿಡಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ರೇವಂತ್ ರೆಡ್ಡಿ ಅವರ ರಾಜಕೀಯ ಪಯಣ ಹೀಗಿತ್ತು
ರೇವಂತ್ ರೆಡ್ಡಿ ಅಕ್ಟೋಬರ್ 2017ರಲ್ಲಿ ಟಿಡಿಪಿ ತೊರೆದು ಕಾಂಗ್ರೆಸ್ ಸೇರಿದರು. ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದರು. ಆದರೆ ಸೋಲನ್ನು ಎದುರಿಸಿದರು. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿ ಮಲ್ಕಾಜಿಗಿರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿತು. ರೆಡ್ಡಿ ಈ ಬಾರಿ ಸದೃಢ ಪುನರಾಗಮನ ಮಾಡುವಲ್ಲಿ ಯಶಸ್ವಿಯಾಗಿದ್ದು, ಸಂಸತ್ತನ್ನು ತಲುಪಿದ್ದರು. ಈಗ 2023ರಲ್ಲಿ, 2018ರ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಿರುವಂತಿದೆ. ಸದ್ಯ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅವರು ಸಿಎಂ ಕೆಸಿಆರ್ ಅವರಿಗಿಂತ ಬಹಳ ಮುಂದಿದ್ದಾರೆ. ಎಬಿವಿಪಿಯಿಂದ ರಾಜಕೀಯದ ತಂತ್ರಗಳನ್ನು ಕಲಿತು ನಂತರ ಟಿಡಿಪಿಯಲ್ಲಿದ್ದ ರೆಡ್ಡಿ ಈಗ ತೆಲಂಗಾಣದ ಎರಡನೇ ಸಿಎಂ ಆಗಬಹುದು ಎಂಬುದು ಕುತೂಹಲಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com