ಮಧ್ಯ ಪ್ರದೇಶ: ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗ್ತಾರಾ? ಈ ಸಂದೇಶ ರವಾನಿಸಿರುವ ಬಿಜೆಪಿ!

ಸಿಎಂ ಹುದ್ದೆಗೆ ಆಯ್ಕೆಗಳನ್ನು ತೆರೆದಿಟ್ಟಿದ್ದು, ಅಧಿಕಾರವನ್ನು ಮತ್ತೆ ಉಳಿಸಿಕೊಂಡರೆ ಚೌಹಾಣ್ ಸ್ವಯಂಚಾಲಿತ ಆಯ್ಕೆಯಾಗದಿರಬಹುದು ಎಂಬ ಸಂದೇಶವನ್ನು ಬಿಜೆಪಿ ಕಳುಹಿಸಿದೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್

ಭೋಪಾಲ್: ಮಧ್ಯಪ್ರದೇಶದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಪ್ರಹ್ಲಾದ್ ಪಟೇಲ್ ಮತ್ತು ಮಧ್ಯಪ್ರದೇಶದಿಂದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ ಏಳು ಲೋಕಸಭಾ ಸದಸ್ಯರನ್ನು ಕಣಕ್ಕಿಳಿಸಿತ್ತು. ಇದರಿಂದಾಗಿ ಸಿಎಂ ಹುದ್ದೆಗೆ ಆಯ್ಕೆಗಳನ್ನು ತೆರೆದಿಟ್ಟಿದ್ದು, ಅಧಿಕಾರವನ್ನು ಮತ್ತೆ ಉಳಿಸಿಕೊಂಡರೆ ಚೌಹಾಣ್ ಸ್ವಯಂಚಾಲಿತ ಆಯ್ಕೆಯಾಗದಿರಬಹುದು ಎಂಬ ಸಂದೇಶವನ್ನು ಬಿಜೆಪಿ ಕಳುಹಿಸಿದೆ.

ಮುಖ್ಯಮಂತ್ರಿ ಹುದ್ದೆಗೆ ಕೇಂದ್ರ ನಾಯಕತ್ವದಿಂದ ಬಹಿರಂಗ ಒಪ್ಪಿಗೆ ಪಡೆಯದಿದ್ದರೂ, ಚೌಹಾಣ್ ಹೃದಯ ಮತ್ತು ಆತ್ಮ ಪೂರ್ವಕವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಭಾಷಣಗಳ ಸಮಯದಲ್ಲಿ ಆಗಾಗ್ಗೆ ಭಾವುಕರಾಗಿದ್ದರು.
ಅಕ್ಟೋಬರ್ ಆರಂಭದಲ್ಲಿ ತಮ್ಮ ಮನೆಯ ಟರ್ಫ್ ಬುಧ್ನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ  ಭಾವುಕರಾಗಿದ್ದ ಚೌಹಾಣ್,  ತನ್ನಂತಹ "ಸಹೋದರ" ಎಂದಿಗೂ ಸಿಗುವುದಿಲ್ಲ. ಅವರು ಹತ್ತಿರದಲ್ಲಿದ್ದರೂ ಕಳೆದುಕೊಳ್ಳುತ್ತೀರಿ ಎಂದು ಸಭೆಯಲ್ಲಿದ್ದ ಮಹಿಳೆಯರಿಗೆ ಹೇಳಿದ್ದರು. ಇದು ಪಕ್ಷದಲ್ಲಿ ಅವರು ಮಹತ್ವ ಕಳೆದುಕೊಂಡಿರುವುದನ್ನು ಸೂಚಿಸುತ್ತದೆ. 

 ಪ್ರಚಾರದ ಕೊನೆಯ ಹಂತದಲ್ಲಿ, ಒಂದೇ ದಿನದಲ್ಲಿ 13 ಚುನಾವಣಾ ಸಭೆಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಅವರ ಪ್ರಮುಖ ಪ್ರತಿಸ್ಪರ್ಧಿ ಮತ್ತು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಒಂದು ದಿನದಲ್ಲಿ 2 ರಿಂದ 4 ಪ್ರಚಾರ ಕಾರ್ಯಕ್ರಮಗಳಲ್ಲಿ ಜನರನ್ನುದ್ದೇಶಿ ಮಾತನಾಡಿದ್ದರು.  ಬಹುಕೋಟಿ ವ್ಯಾಪಮ್ ಹಗರಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಚೌಹಾಣ್‌ ವಿರುದ್ಧ ಆರೋಪ ಮಾಡಿತ್ತು. ಸಿಬಿಐ ಚೌಹಾಣ್‌ಗೆ ಕ್ಲೀನ್ ಚಿಟ್ ನೀಡಿದೆ.

 ವ್ಯಾಪಂ ಹಗರಣವು 2013 ರಲ್ಲಿ ನಡೆದ ಪ್ರವೇಶ ಪರೀಕ್ಷೆ, ಪ್ರವೇಶ ಮತ್ತು ನೇಮಕಾತಿ ಹಗರಣವಾಗಿತ್ತು. ಇದರಲ್ಲಿ ತೊಡಗಿಕೊಂಡಿದ್ದ ರಾಜಕಾರಣಿಗಳು, ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳು ಅಧಿಕಾರಿಗಳಿಗೆ ಲಂಚ ನೀಡುವ ಮೂಲಕ  ಬೇರೆಯವರಿಂದ ಪರೀಕ್ಷೆ, ಪರೀಕ್ಷಾ ಹಾಲ್ ಆಸನದ ವ್ಯವಸ್ಥೆ ಮತ್ತು ನಕಲಿ ಉತ್ತರ ಪತ್ರಿಕೆಗಳನ್ನು ಸರಬರಾಜು ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com