ಮಿಚಾಂಗ್ ಚಂಡಮಾರುತ: ತಮಿಳು ನಾಡಿನಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ; ವಾಯು ಸಮೀಕ್ಷೆ, ತಗ್ಗಿದ ಮಳೆಯ ಅಬ್ಬರ

ಮಿಚಾಂಗ್ ಚಂಡಮಾರುತವು ಇಂದು ಬುಧವಾರ ಹೊತ್ತಿಗೆ ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 
ಚೆನ್ನೈಯಲ್ಲಿ ಪ್ರವಾಹದಿಂದ ಉಂಟಾದ ಪರಿಸ್ಥಿತಿ
ಚೆನ್ನೈಯಲ್ಲಿ ಪ್ರವಾಹದಿಂದ ಉಂಟಾದ ಪರಿಸ್ಥಿತಿ

ಚೆನ್ನೈ: ಮಿಚಾಂಗ್ ಚಂಡಮಾರುತವು ಇಂದು ಬುಧವಾರ ಹೊತ್ತಿಗೆ ಆಂಧ್ರ ಪ್ರದೇಶದ ಮಧ್ಯ ಕರಾವಳಿಯ ಆಳವಾದ ಭಾಗದಲ್ಲಿ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 

ಮಿಚಾಂಗ್ ಚಂಡಮಾರುತ ಆಂಧ್ರ ಪ್ರದೇಶದ ಕೇಂದ್ರ ಕರಾವಳಿ ಮೇಲೆ ಆಳವಾದ ಕುಸಿತವಾಗಿ ದುರ್ಬಲಗೊಂಡಿದೆ. ಬಾಪಟ್ಲಾದಿಂದ ಸುಮಾರು 100 ಕಿಮೀ ಉತ್ತರ-ವಾಯುವ್ಯ ಮತ್ತು ಖಮ್ಮಮ್‌ನಿಂದ ಆಗ್ನೇಯಕ್ಕೆ 50 ಕಿ.ಮೀ ದೂರದಲ್ಲಿ ಚಂಡಮಾರುತ ಇಳಿಕೆಯಾಗಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಮಂಗಳವಾರ ಮಿಚಾಂಗ್ ಚಂಡಮಾರುತವು ಭೂಮಿಗೆ ಅಪ್ಪಳಿಸಿ ಚೆನ್ನೈನಲ್ಲಿ ನಿರಂತರ ಭಾರೀ ಮಳೆಗೆ ಕಾರಣವಾಗಿ ಪ್ರವಾಹ ಉಂಟಾಯಿತು. ಸೋಮವಾರದಿಂದ ತೀವ್ರತೆ ಕಡಿಮೆಯಾದರೂ ನಿನ್ನೆ ಮಳೆಯ ಅಬ್ಬರ ಮುಂದುವರಿದು ತಮಿಳು ನಾಡಿನ ರಾಜಧಾನಿಯನ್ನು ಚೆನ್ನೈ ನಿವಾಸಿಗಳ ಜನಜೀವನವನ್ನು ಸ್ಥಗಿತಗೊಳಿಸಿತು. 

ಚೆನ್ನೈಯಲ್ಲಿ ಹಲವು ಸಾವುನೋವುಗಳಿಗೆ ಮತ್ತು ಆಸ್ತಿಪಾಸ್ತಿ, ರಾಜ್ಯಾದ್ಯಂತ ರೈತರ ಬೆಳೆಗಳು ಮಿಚಾಂಗ್ ಚಂಡಮಾರುತಕ್ಕೆ ನಷ್ಟವಾಗಿವೆ. ತಮಿಳು ನಾಡಿನಲ್ಲಿ ಚಂಡಮಾರುತದಿಂದ ಉಂಟಾದ ಪ್ರವಾಹದ ಪರಿಣಾಮವಾಗಿ ವಿವಿಧ ಘಟನೆಗಳಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಗ್ರೇಟರ್ ಚೆನ್ನೈ ಪೊಲೀಸ್ ವ್ಯಾಪ್ತಿಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ. 

ಮಿಚಾಂಗ್ ಚಂಡಮಾರುತದಿಂದ ಯಾವ ಪ್ರದೇಶದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಭಾರತೀಯ ವಾಯುಪಡೆ ವಾಯುಸಮೀಕ್ಷೆ ನಡೆಸಿದೆ. ಚೆನ್ನೈನಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಗಾಗಿ ಭಾರತೀಯ ವಾಯುಪಡೆ ಚೇತಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

ಅಡ್ಯಾರ್‌ನ ಸಾಮಾನ್ಯ ಪ್ರದೇಶದಲ್ಲಿ ಮತ್ತು ಚೆನ್ನೈ ಬಂದರಿನ ಸಮೀಪದಲ್ಲಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪರಿಹಾರ ಸಾಮಗ್ರಿಗಳೊಂದಿಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿನ್ನೆ ಸಂಜೆ ತಡವಾಗಿ ಉಡಾವಣೆ ಮಾಡಲಾಯಿತು ಎಂದು ಭಾರತೀಯ ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಮಿಚಾಂಗ್ ಚಂಡಮಾರುತ ಚೆನ್ನೈನಲ್ಲಿ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ಕರಪಕ್ಕಂ ಪ್ರದೇಶ  ಸಂಪೂರ್ಣ ಜಲಾವೃತಗೊಂಡಿದೆ. ತಮಿಳು ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್ ನಟ ಅಮೀರ್ ಖಾನ್​​ ಸೇರಿದಂತೆ ಹಲವರನ್ನು 24 ಗಂಟೆಯ ಬಳಿಕ ರಕ್ಷಿಸಲಾಗಿದೆ.

ನಟ ವಿಷ್ಣು ವಿಶಾಲ್, ಅಮಿರ್‌ ಖಾನ್‌ ಹಾಗೂ ಇತರೆ ಪ್ರವಾಹ ಸಂತ್ರಸ್ತರನ್ನು ರಕ್ಷಣಾ ಸಿಬ್ಬಂದಿ ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡಿದ್ದಾರೆ. ಈ ಬಗ್ಗೆ ನಟ ವಿಷ್ಣು ವಿಶಾಲ್ ಅವರು ಎಕ್ಸ್​ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com