
ನವದೆಹಲಿ: ಶೋಷಿತ ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿಯಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಡಾ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ದೇಶಾದ್ಯಂತ ಮಹಾಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ.
ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಅಲ್ಲದೆ, ಸಾಮಾಜಿಕ ಸೌಹಾರ್ದತೆಯ ಅಮರ ಹೋರಾಟಗಾರರಾಗಿದ್ದರು. ದಲಿತ ಕುಟುಂಬದಿಂದ ಬಂದ ಅಂಬೇಡ್ಕರ್ ಹಿಂದುಳಿದವರ ಪರವಾಗಿ ಹೋರಾಡುವ ಮೂಲಕ ಭಾರತದ ರಾಜಕೀಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು ಎಂದು ಕೂಡ ಪ್ರಧಾನಿ ಸ್ಮರಿಸಿದ್ದಾರೆ.
ದಲಿತ ಹಿನ್ನಲೆಯ ಅಂಬೇಡ್ಕರ್ ಅವರು 1956 ರಲ್ಲಿ ಅವರು ನಿಧನರಾದಾಗಿನಿಂದ ಅವರ ತತ್ವ, ವಿಚಾರಧಾರೆಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಹೋಗುತ್ತಿದೆ. ನಾಯಕರು, ವಿಶೇಷವಾಗಿ ದಲಿತ ಹಿನ್ನೆಲೆಯುಳ್ಳವರು, ಶಿಕ್ಷಣ, ಸಾಂವಿಧಾನಿಕ ಆಂದೋಲನ ಮತ್ತು ತಮ್ಮ ಬಲವರ್ಧನೆಗಾಗಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ಪರಿಶಿಷ್ಟ ಜಾತಿಗಳು, ಪ್ರಭಾವಿ ಮತದಾರ ಬಣ ಮತ್ತು ಇತರ ದುರ್ಬಲ ವರ್ಗಗಳನ್ನು ಒಟ್ಟುಗೂಡಿಸಲು ಕೂಡ ಅಂಬೇಡ್ಕರ್ ವಿಚಾರಧಾರೆಗಳನ್ನು ಬಳಸಲಾಗುತ್ತಿದೆ.
Advertisement