ಬಿಜೆಪಿ ನಾಯಕರ ಸಭೆ
ದೇಶ
ಸಿಎಂ ಆಯ್ಕೆ ಕುರಿತು ಮೂಡದ ಒಮ್ಮತ; ನಾಳೆ ವೀಕ್ಷಕರನ್ನು ಕಳಿಸಲಿರುವ ಬಿಜೆಪಿ!
ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢಗಳಿಗೆ ಸಿಎಂ ಆಯ್ಕೆ ಮಾಡಲು ಬಿಜೆಪಿಯಲ್ಲಿ ಇನ್ನೂ ಒಮ್ಮತ ಮೂಡಿಲ್ಲ.
ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢಗಳಿಗೆ ಸಿಎಂ ಆಯ್ಕೆ ಮಾಡಲು ಬಿಜೆಪಿಯಲ್ಲಿ ಇನ್ನೂ ಒಮ್ಮತ ಮೂಡಿಲ್ಲ.
ಸಿಎಂ ಆಯ್ಕೆಯನ್ನು ಅಂತಿಮಗೊಳಿಸಲು ಮೂರೂ ರಾಜ್ಯಗಳಿಗೆ ಬಿಜೆಪಿ ಹೈಕಮಾಂಡ್ ನಾಳೆ ವೀಕ್ಷಕರನ್ನು ಕಳುಹಿಸಲಿದೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ಮೂರು ರಾಜ್ಯಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯರ ಪಟ್ಟಿಯಲ್ಲಿ ಬೆರಳೆಣಿಕೆಯ ಹೆಸರುಗಳಿವೆ.
ಗೆದ್ದಿರುವ ಮೂರೂ ರಾಜ್ಯಗಳಲ್ಲಿ ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸದೆ ಚುನಾವಣೆ ಎದುರಿಸಿತು. ವೀಕ್ಷಕರು ಮೂರೂ ರಾಜ್ಯಗಳಲ್ಲಿ ಹೊಸದಾಗಿ ಚುನಾಯಿತ ಶಾಸಕರ ಸಭೆಗಳನ್ನು ಮೇಲ್ವಿಚಾರಣೆ ಮಾಡುವ ಸಾಧ್ಯತೆಯಿದೆ. ಬಿಜೆಪಿಯೊಳಗಿನ ಅನೇಕ ನಾಯಕರು 3 ರಾಜ್ಯಗಳಲ್ಲಿನ ಬೃಹತ್ ಜನಾದೇಶ ಬಿಜೆಪಿಯ ನೀತಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಸಿಕ್ಕಿರುವ ವ್ಯಾಪಕವಾದ ಜನಬೆಂಬಲ ಇದಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ